ಸ್ಟಾರ್ ಗಣೇಶ್ ಮತ್ತು ವಿಜಯ್ ನಾಗೇಂದ್ರ ಅವರ ಕಾಂಬಿನೇಷನ್ನಿನಲ್ಲಿ ಮೂಡಿಬರುತ್ತಿರುವ ಸಿನಿಮಾ ಗೀತಾ. ಈಗಾಗಲೇ ಸಿನಿಮಾದ ಶೂಟಿಂಗ್ ಭಾಗಶಃ ಮುಗಿದಿದ್ದು, ಎರಡು ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ಸದ್ಯ ಗೀತಾ ಚಿತ್ರದ ಡಬ್ಬಿಂಗ್ ಕೆಲಸವನ್ನು ಜೂನ್ ನಲ್ಲಿ ಶುರುಮಾಡಲು ಚಿತ್ರತಂಡವು ಪ್ಲ್ಯಾನ್ ಮಾಡಿದೆ. ಗೀತಾ ಸಿನಿಮಾವನ್ನು ಎಸ್. ಎಸ್. ಫಿಲ್ಸ್ಮ್ ಸಹಯೋಗದಲ್ಲಿ ಗೋಲ್ಡನ್ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ.
ಎಂಬತ್ತರ ದಶಕದಲ್ಲಿ ಶಂಕರ್ ನಾಗ್ ನಟಿಸಿದ್ದ ಇದೇ ಶೀರ್ಷಿಕೆಯ ಸಿನಿಮಾ ಬಹುದೊಡ್ಡ ಯಶಸ್ಸನ್ನು ಗಳಿಸಿತ್ತು. ತಮ್ಮ ವೃತ್ತಿ ಬದುಕಿನಲ್ಲಿ ಗೀತಾ ವಿಶೇಷ ಸಿನಿಮಾವಾಗಲಿದೆಯೆಂಬ ಭರವಸೆಯಲ್ಲಿದ್ದಾರೆ ಗಣೇಶ್. ಚಿತ್ರದಲ್ಲಿ ಪಾರ್ವತಿ ಅರುಣ್, ಪ್ರಯಾಗಾ ಮಾರ್ಟಿನ್ ಶಾನ್ವಿ ಶ್ರೀವಾಸ್ತವ್ ಮೂವರು ನಾಯಕಿಯರಿದ್ದಾರೆ. ಇವರಲ್ಲಿ ಪ್ರಯಾಗಾ ಮಾರ್ಟಿನ್ ಮತ್ತು ಪಾರ್ವತಿ ಅರುಣ್ ಗಿದು ಚೊಚ್ಚಲ ಸಿನಿಮಾವಾಗಿರುವುದು ವಿಶೇಷ. ಇನ್ನು ಎವರ್ ಗ್ರೀನ್ ಬ್ಯೂಟಿ ಸುಧಾರಾಣಿ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
No Comment! Be the first one.