ಕಮರ್ಷಿಯಲ್ ಅಂಶಗಳನ್ನೂ ಒಳಗೊಂಡಂತೆ ಪರಭಾಷೆಯ ಯಾವ ಚಿತ್ರಕ್ಕೂ ಕಡಿಮೆ ಇಲ್ಲದಂತೆ ರೂಪುಗೊಂಡಿರುವ ಚಿತ್ರವಿದು. ಸಾಮಾನ್ಯಕ್ಕೆ ಕನ್ನಡದ ಚಿತ್ರ ವಿಮರ್ಶಕರು ಪರಿಪೂರ್ಣವಾಗಿ ಒಪ್ಪುವ ಚಿತ್ರಗಳು ಅಪರೂಪ. ಹಾಗೆ ಎಲ್ಲರೂ ಮುಕ್ತಕಂಠದಿಂದ ಹೊಗಳಿದ ಸಿನಿಮಾಗಳು ಸೂಪರ್ ಹಿಟ್ ಆದ ಸಾಕಷ್ಟು ನಿದರ್ಶನಗಳಿವೆ.
ತಮಿಳಿನ ಆ ಸಿನಿಮಾ ಚೆನ್ನಾಗಿದೆ, ತೆಲುಗಿನ ಈ ಸಿನಿಮಾ ಸೂಪರ್ರು, ಕನ್ನಡದಲ್ಲಿ ಒಳ್ಳೇ ಸಿನಿಮಾಗಳೇ ಬರೋದಿಲ್ಲ.. – ಹೀಗೆ ಕನ್ನಡ ಚಿತ್ರರಂಗ ಮತ್ತು ಚಿತ್ರಗಳ ಬಗ್ಗೆ ಕೊಂಕು ಮಾತಾಡುವ ಒಂದು ವರ್ಗವೇ ಇದೆ. ಉತ್ತಮ ಸಿನಿಮಾಗಳು ಬಂದಾಗ ಥೇಟರಿಗೆ ನುಗ್ಗಿ ನೋಡುವವರಂತೆ ಭಳಾಂಗು ಬಿಡುತ್ತಿರುತ್ತಾರೆ. ಆದರೆ ಅತ್ಯುತ್ತಮ ವಿಮರ್ಶೆಗಳು ಬಂದ, ನಿಜಕ್ಕೂ ಅದ್ಭುತ ಕಥಾವಸ್ತುವಿನ ಸಿನಿಮಾಗಳು ಬಂದಾಗ ಫೇಸ್ ಬುಕ್ಕಿನಲ್ಲಿ ಕಮೆಂಟು ಮಾಡಿ, ಲೈಕು ಒತ್ತಿ ಸುಮ್ಮನಾಗಿಬಿಡುತ್ತಾರೆ.
ನಿಜ… ಬಿಡುಗಡೆಯಾಗುವ ಎಲ್ಲ ಸಿನಿಮಾಗಳೂ ಕ್ವಾಲಿಟಿ ಹೊಂದಿರುವುದಿಲ್ಲ. ಹಾಗಂತ ಅಪರೂಪಕ್ಕೆ ಚೆಂದದ ಕಂಟೆಂಟು ಹೊತ್ತು ಬಂದ ಸಿನಿಮಾಗಳನ್ನಾದರೂ ಕೈ ಹಿಡಿದು ಪೊರೆಯಬೇಕಲ್ಲವಾ? ೨೦೨೦ರ ಶುರುವಿನಿಂದ ಸಾಕಷ್ಟು ಉತ್ತಮ ಸಿನಿಮಾಗಳು ಕನ್ನಡದಲ್ಲಿ ರಿಲೀಸಾಗಿವೆ. ಅದರಲ್ಲಿ ಮುಖ್ಯವಾದ ಚಿತ್ರ ಜಂಟಲ್ ಮನ್. ಕಮರ್ಷಿಯಲ್ ಅಂಶಗಳನ್ನೂ ಒಳಗೊಂಡಂತೆ ಪರಭಾಷೆಯ ಯಾವ ಚಿತ್ರಕ್ಕೂ ಕಡಿಮೆ ಇಲ್ಲದಂತೆ ರೂಪುಗೊಂಡಿರುವ ಚಿತ್ರವಿದು. ಸಾಮಾನ್ಯಕ್ಕೆ ಕನ್ನಡದ ಚಿತ್ರ ವಿಮರ್ಶಕರು ಪರಿಪೂರ್ಣವಾಗಿ ಒಪ್ಪುವ ಚಿತ್ರಗಳು ಅಪರೂಪ. ಹಾಗೆ ಎಲ್ಲರೂ ಮುಕ್ತಕಂಠದಿಂದ ಹೊಗಳಿದ ಸಿನಿಮಾಗಳು ಸೂಪರ್ ಹಿಟ್ ಆದ ಸಾಕಷ್ಟು ನಿದರ್ಶನಗಳಿವೆ. ಆದರೆ, ಎಲ್ಲರಿಂದ ಹೊಗಳಿಸಿಕೊಂಡರೂ, ಅಂದುಕೊಂಡ ಮಟ್ಟಕ್ಕೆ ಉತ್ಸಾಹದಿಂದ ಜನ ಥಿಯೇಟರಿಗೆ ಬರುತ್ತಿಲ್ಲ ಅನ್ನೋದು ಸ್ವತಃ ಜಂಟಲ್ ಮನ್ ಮತ್ತು ಇತ್ತೀಚೆಗೆ ರಿಲೀಸಾಗಿರುವ ಗುಣಮಟ್ಟದ ಸಿನಿಮಾಗಳನ್ನು ನಿರ್ಮಿಸಿದವರ ಬೇಸರಕ್ಕೆ ಕಾರಣವಾಗಿದೆ.
https://www.facebook.com/100011252733971/posts/1045939242457824/
ಜಂಟಲ್ ಮನ್ ಚಿತ್ರದ ನಿರ್ದೇಶಕ ನಿಜಕ್ಕೂ ಪ್ರತಿಭಾವಂತ. ಮೊದಲ ಸಿನಿಮಾದಲ್ಲೇ ನಿರ್ದೇಶಕನಾಗಿ ಕಸುಬುದಾರಿಕೆ ತೋರಿದ್ದವರು. ಈ ಸಲವಂತೂ ತಮ್ಮ ಎಲ್ಲಾ ಶ್ರಮವನ್ನು ಧಾರೆಯೆರೆದು ಅಪರೂಪದ ಚಿತ್ರ ಮಾಡಿದ್ದಾರೆ. ಸಂಚಾರಿ ವಿಜಯ್ ಅವರಂಥಾ ನಟ ಕೂಡಾ ತಮ್ಮ ಪ್ರತಿಭೆಯ ಮತ್ತೊಂದು ಮುಖವನ್ನು ತೆರೆದಿಟ್ಟಿದ್ದಾರೆ. ಗುರು ದೇಶಪಾಂಡೆ ಸ್ವತಃ ನಿರ್ದೇಶಕರಾಗಿದ್ದೂ ಗಟ್ಟಿ ಕಥೆ ಹೊಂದಿದೆ ಎನ್ನುವ ಕಾರಣಕ್ಕೆ ಇಷ್ಟು ದಿನ ತಾವು ದುಡಿದದ್ದನ್ನೆಲ್ಲಾ ಸೇರಿಸಿ, ಅದರೊಟ್ಟಿಗೆ ಎಲ್ಲೆಲ್ಲಿಂದಲೋ ಹಣ ಹೊಂಚಿ ತಂದು ಜಂಟಲ್ ಮನ್ ಚಿತ್ರ ನಿರ್ಮಿಸಿದ್ದಾರೆ. ಪ್ರಜ್ವಲ್ ದೇವರಾಜ್ ಅವರಂತೂ ತಮ್ಮ ಸಿನಿಮಾ ಬದುಕಿನಲ್ಲೇ ಮೈಲಿಗಲ್ಲಾಗಿ ಉಳಿಯುವಂಥಾ ಪಾತ್ರದಲ್ಲಿ, ತಮ್ಮನ್ನು ತಾವು ಅರ್ಪಿಸಿಕೊಂಡು ನಟಿಸಿದ್ದಾರೆ. ಇವರೆಲ್ಲರ ಶ್ರಮಕ್ಕೆ ಪ್ರತಿಫಲ ದೊರೆಯಬೇಕೆಂದರೆ ಪ್ರೇಕ್ಷಕರು ಉತ್ಸಾಹದಿಂದ ಚಿತ್ರಮಂದಿರಕ್ಕೆ ಬರಬೇಕಲ್ಲವೇ? ನಮ್ಮ ಕನ್ನಡದ ಪ್ರೇಕ್ಷಕರ ಮನತಣಿಸಲು ಜಂಟಲ್ ಮನ್ ಗಿಂತಾ ಸಿನಿಮಾ ಬೇಕೇ? ಇಷ್ಟೆಲ್ಲ ಇದ್ದರೂ ಯಾಕೆ ನಮ್ಮವರು ಅಸಡ್ಡೆ ಮನೋಭಾವನೆ ತೋರುತ್ತಿದ್ದಾರೆ?
https://www.facebook.com/guru.deshpande.52/videos/1045726452479103/?__tn__=%2CdC-R-R&eid=ARAwqv3HLf4eZr04TuoR-l0FQYxR9_x_SDXt0iwpiGBS7nHIDtlmiZ3TMEb-88xDJPSDhslJdQxI8K2g&hc_ref=ARQ_FzqL6JZMAEsfTVnuQiJge520NQEpPr8gEslTQH0yfWkATf5o5Kr4zh6FOo_ckF4&fref=nf
ಇನ್ನೂ ಕಾಲ ಮಿಂಚಿಲ್ಲ. ಜಂಟಲ್ ಮನ್ ರಿಲೀಸಾದ ಒಂದಷ್ಟು ಚಿತ್ರಮಂದಿರಗಳಲ್ಲಾದರೂ ಉಳಿದುಕೊಂಡಿದೆ. ಈಗಲಾದರೂ ಮನಸ್ಸು ಮಾಡಿ ಜನ ಥೇಟರಿನ ಕಡೆ ಬಂದರೆ, ಶೋಗಳು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಪ್ರೇಕ್ಷಕರರು ಉದಾರ ಮನಸ್ಸಿನಿಂದ ಬಂದಿದ್ದೇ ಆದಲ್ಲಿ, ಆ ಮೂಲಕ ಒಂದೊಳ್ಳೆ ಚಿತ್ರಕ್ಕೆ ಜೀವರಕ್ಷೆ ನೀಡಿದಂತಾಗುತ್ತದೆ…