ರಾಜಾಹುಲಿ ನಿರ್ದೇಶಕ ಗುರು ದೇಶಪಾಂಡೆ ತಾವು ಇಷ್ಟು ದಿನ ದುಡಿದ ಎಲ್ಲವನ್ನೂ ಧಾರೆ ಎರೆದು ಜಂಟಲ್ ಮನ್ ಮೇಲೆ ಹೂಡಿಕೆ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಸಿನಿಮಾದ ಬಗ್ಗೆ ಎಲ್ಲೆಡೆ ವ್ಯಾಪಕ ಮೆಚ್ಚುಗೆಯೂ ಕೇಳಿಬರುತ್ತಿದೆ. ಈ ಸಿನಿಮಾ ಬಿಡುಗಡೆಯ ನಂತರ ಪ್ರಜ್ವಲ್ ದೇವರಾಜ್ ಸಂಭಾವನೆ ಹೆಚ್ಚಿಸೋದು ಗ್ಯಾರೆಂಟಿ ಅನ್ನೋ ಸುದ್ದಿ ಕೂಡಾ ದಟ್ಟವಾಗಿದೆ!

ರಾಜಾಹುಲಿ ಖ್ಯಾತಿಯ ನಿರ್ದೇಶಕ ಗುರುದೇಶಪಾಂಡೆ ನಿರ್ಮಿಸಿ, ಜಡೇಶ್ ಕುಮಾರ್ ನಿರ್ದೇಶಿಸಿರುವ ಸಿನಿಮಾ ಜಂಟಲ್ ಮನ್. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಟಿಸಿದ್ದಾರೆ, ಹದಿನೆಂಟು ಗಂಟೆ ನಿದ್ರಿಸುವ ಕುಂಭ ಕರ್ಣನಂತಾ ಪಾತ್ರ, ಹಾಗಿದ್ದೂ ಉಳಿದ ಸಮಯದಲ್ಲಿ ಆತ ಏನೆಲ್ಲಾ ಮಾಡಬಹುದು ಅನ್ನೋದರ ಒಂದಿಷ್ಟು ವಿವರ ಈಗಾಗಲೇ ಜಾಹೀರಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಫಸ್ಟ್ ಲುಕ್, ಲಿರಿಕಲ್ ವಿಡಿಯೋ, ಟೀಸರು, ಟ್ರೇಲರು ಸೇರಿದಂತೆ ಪ್ರತಿಯೊಂದು ಕೂಡಾ ಕ್ಯೂರಿಯಾಸಿಟಿ ಲೆವೆಲ್ಲನ್ನು ಹೆಚ್ಚಿಸುತ್ತಲೇ ಇದೆ. ಜನ ಕೂಡಾ ಈ ಚಿತ್ರದ ಬಗ್ಗೆ ಅಪಾರವಾದ ಕುತೂಹಲದಿಂದ ಕಾದಿದ್ದಾರೆ.

ವಿಚಾರ ಅದಲ್ಲ!

ಯಾವುದೇ ಒಂದು ಸಿನಿಮಾದ ಬಗ್ಗೆ ಸಿನಿಮಾರಂಗದವರ ಮಧ್ಯೆಯೇ ಟಾಕ್ ಕ್ರಿಯೇಟ್ ಆಯಿತೆಂದರೆ, ಆ ಚಿತ್ರ ಕಂಟೆಂಟಿನ ವಿಚಾರದಲ್ಲಿ ಮಾತ್ರವಲ್ಲದೆ, ಗಳಿಕೆಯಲ್ಲೂ ದಾಖಲೆ ನಿರ್ಮಿಸುತ್ತದೆ ಎಂದೇ ಅರ್ಥ. ಯಾಕೆಂದರೆ, ಗಾಂಧಿನಗರದಲ್ಲಿ ಈಗ ಬಹುತೇಕ  ಜಂಟಲ್’ಮನ್ ಸಿನಿಮಾದ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಈ ಸಿನಿಮಾ ಬಿಡುಗಡೆಯಾದರೆ ಪ್ರಜ್ವಲ್ ದೇವರಾಜ್ ಸಂಭಾವನೆ ಹೆಚ್ಚಿಸಿಕೊಳ್ಳೋದು ಗ್ಯಾರೆಂಟಿ. ಈ ವರೆಗೆಗೂ ಅವರ ವೃತ್ತಿ ಬದುಕಿನಲ್ಲಿ ಸಿಗದ ಪಾತ್ರ ಇದರಲ್ಲಿ ಸಿಕ್ಕಿದೆ. ಪ್ರಜ್ಜು ಕೂಡಾ ತೀರಾ ನಿಗಾ ವಹಿಸಿ, ತಮ್ಮನ್ನು ತಾವು ತೊಡಗಿಸಿಕೊಂಡು ಪರಿಪೂರ್ಣವಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಪ್ರಜ್ಜು ಬೇರೆಯದ್ದೇ ರೀತಿಯಲ್ಲಿ ಕಾಣಿಸುತ್ತಾರೆ ಅನ್ನೋ ಮಾತು ಸ್ಟುಡಿಯೋಗಳಿಂದ ಹೊರಬಿದ್ದಿದೆ. ಯಾವುದೇ ಒಂದು ಸಿನಿಮಾ ಸದ್ದು ಶುರು ಮಾಡೋದೇ ಇಲ್ಲಿಂದ. ಸಿನಿಮಾರಂಗದವರ ನಡುವೆ ಸಾಮಾನ್ಯವಾಗಿ ‘ಸ್ಟುಡಿಯೋ ರಿಪೋರ್ಟ್ ಹೇಗಿದೆ?’ ಅನ್ನೋ ಮಾತು ಕೇಳಿಬರುತ್ತಿರುತ್ತದೆ. ಒಂದು ಸಿನಿಮಾ ಎಡಿಟಿಂಗ್, ಡಿಐ, ಡಬ್ಬಿಂಗ್ ಸೇರಿದಂತೆ ತಾಂತ್ರಿಕ ಕೆಲಸಗಳಲ್ಲಿ ತೊಡಗಿದ್ದಾಗಲೇ ಅದರ ಬಗ್ಗೆ ಪ್ಲಸ್ಸು ಮೈನಸ್ಸುಗಳೆಲ್ಲಾ ಪಸರ್ ಆಗಿಬಿಡುತ್ತದೆ. ಅದರ ಆಧಾರದ ಮೇಲೇ ಮಾರ್ಕೆಟ್ಟು, ವ್ಯಾಪಾರಗಳೆಲ್ಲಾ ಕ್ರಿಯೇಟ್ ಆಗೋದು. ಈಗ ಜಂಟಲ್ ಮನ್ ಸಿನಿಮಾವನ್ನು ಎಷ್ಟೆಷ್ಟೋ ದುಡ್ಡಿಗೆ ಮಾರಿಬಿಡಬೇಡಿ ಒಳ್ಳೇ ಅಮೌಂಟು ಕೊಡಿಸುತ್ತೇನೆ ಅಂತಾ ಖುದ್ದು ಸಾಯಿ ಕುಮಾರ್ ಹೇಳುತ್ತಾರೆಂದರೆ, ಸಿನಿಮಾವನ್ನು ನಮ್ಮ ಥಿಯೇಟರಿಗೇ ಕೊಡಿ ಅಂತಾ ಕರ್ನಾಟಕದ ತಾಲ್ಲೂಕು ಕೇಂದ್ರಗಳಿಂದಲೂ ನಿರ್ಮಾಪಕರಿಗೆ ಕರೆ ಬರುತ್ತದೆ ಅಂದರೆ, ಜಂಟಲ್ ಮನ್ ಸಿನಿಮಾ ಬಗ್ಗೆ ಎಂಥಾ ಪಾಸಿಟೀವ್ ಟಾಕ್ ಕ್ರಿಯೇಟ್ ಆಗಿದೆ ಅಂತಾ ಅಂದಾಜುಮಾಡಬಹುದು!

ಪ್ರಜ್ವಲ್ ಪಾಲಿಗಾದರೂ ಅಷ್ಟೇ. ಒಂದರ ಹಿಂದೆ ಒಂದು ಸಿನಿಮಾ ರಿಲೀಸಾಗುತ್ತದೆ. ವರ್ಷವಿಡೀ ಬ್ಯುಸೀ ಇರೋ ನಟ. ಟೀವಿ, ಡಬ್ಬಿಂಗ್ ರೈಟ್ಸು ಒಳ್ಳೇ ಅಮೌಂಟಿಗೆ ಸೇಲಾಗುತ್ತದೆ… ಎಂಬಿತ್ಯಾದಿ ವಿಚಾರಗಳ ಹೊರತಾಗಿಯೂ ಥಿಯೇಟರಿನಲ್ಲಿ ಒಳ್ಳೇ ಕಲೆಕ್ಷನ್ ಮಾಡುತ್ತಿದೆ. ಜನ ಚಿತ್ರಮಂದಿರರಕ್ಕೆ ನುಗ್ಗಿತ್ತಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಹೆಚ್ಚಾಗುತ್ತಿದ್ದಾರೆ… ಎನ್ನುವಂತಾ ಮಾತುಗಳೂ ಕೇಳಿಬರುವಂತಾಗಬೇಕು. ಜಂಟಲ್ ಮನ್ ಆ ಕೆಲಸವನ್ನು ಖಂಡಿತವಾಗಿಯೂ ಮಾಡುತ್ತಾನೆ ಅನ್ನೋ ನಂಬಿಕೆ ಸ್ವತಃ ಪ್ರಜ್ಜುಗೂ ಇದ್ದೇಇದೆ…

ಜಂಟಲ್ ಮನ್ ಸಿನಿಮಾದ ಕಥೆಯಲ್ಲಿ ಮಲಗುವ ಪಾತ್ರವಿದ್ದರೂ ಚಿತ್ರರಂಗದಲ್ಲಿ ಪ್ರಜ್ವಲ್ ಮತ್ತಷ್ಟು ಖಡಕ್ ಆಗಿ ಎದ್ದು ನಿಲ್ಲುವಂತಾಗಲಿ.

ಗುಡ್ ಲಕ್ ಪ್ರಜ್ಜು!

CG ARUN

ಕಾವಿ ತೊಟ್ಟಿದ್ ಮಾತ್ರಕ್ಕೆ ಕಾಮ ಸತ್ತು ಹೋಗುತ್ತಾ?

Previous article

You may also like

Comments

Leave a reply

Your email address will not be published. Required fields are marked *