99 ಸಿನಿಮಾದ ನಂತರ ಗೋಲ್ಡನ್ ಸ್ಟಾರ್ ರವರು ಗಿಮಿಕ್ ಎಂಬ ಹಾರರ್ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರದ ಟ್ರೇಲರ್ ಇತ್ತೀಚಿಗಷ್ಟೇ ರಿಲೀಸ್ ಆಗಿದೆ. ಈಗಾಗಲೇ ಕಾಮಿಡಿ, ರೊಮ್ಯಾಂಟಿಕ್ ಐಕಾನ್ ಆಗಿ ಸ್ಯಾಂಡಲ್ ವುಡ್ ನಲ್ಲಿ ಹೈಪ್ ಕ್ರಿಯೇಟ್ ಮಾಡಿರುವ ಗೋಲ್ಡನ್ ಸ್ಟಾರ್ ಮೊದಲ ಬಾರಿಗೆ ದೆವ್ವಗಳಿಗೆ ಪಾಠ ಮಾಡಲು ಹೊರಟಿದ್ದಾರೆ. ಗಿಮಿಕ್ ಸಿನಿಮಾವನ್ನು ನಾಗಣ್ಣ ನಿರ್ದೇಶನ ಮಾಡುತ್ತಿದ್ದು, ಗೋಲ್ಡನ್ ಸ್ಟಾರ್ ಗಾಗಿಯೇ ಈ ಸಿನಿಮಾದ ಕಥೆಯನ್ನು ಹೆಣೆದಿರುವುದು ವಿಶೇಷವಾಗಿದೆ.
ಒಂದು ಮನೆಯ ಸುತ್ತ ನಡೆಯುವ ನಿಗೂಢ ಥ್ರಿಲ್ಲರ್ ಕಥೆ ಚಿತ್ರದಲ್ಲಿದೆ. ಟ್ರೈಲರ್ ರಿಲೀಸ್ ಆದ 24 ಗಂಟೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಟ್ರೆಂಡಿಂಗ್ನಲ್ಲಿ ನಂ.1 ಸ್ಥಾನದಲ್ಲಿದೆ. ಭಯಂಕರ ಭೂತವನ್ನೇ ಗಣಿ ಕಾಲೆಳೆಯುವ ಸೀನ್ ಗಳು ನೋಡುಗರನ್ನು ಅಟ್ರಾಕ್ಟ್ ಮಾಡುತ್ತದೆ. ಇದೊಂದು ಹಾರರ್ ಕಂ ಕಾಮಿಡಿ ಸಿನಿಮಾವಾಗಿದ್ದು, ಗಣೇಶ್ ಗೆ ರೋನಿಕಾ ಸಿಂಗ್, ಸಾಧುಕೋಕಿಲ, ಮಂಡ್ಯ ರಮೇಶ್, ಶೋಭರಾಜ್, ಗುರುದತ್ ಇತರರು ಸಾಥ್ ನೀಡಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದು, ಸದ್ಯದಲ್ಲೇ ಗಿಮಿಕ್ ಸಾಧ್ಯತೆ ಇದೆ.
No Comment! Be the first one.