ಕನ್ನಡ ಪ್ರೇಕ್ಷಕರು ಹೊಸಾ ಆಲೋಚನಾ ಕ್ರಮವನ್ನು, ಹೊಸಾ ಅಲೆಯ ಚಿತ್ರಗಳನ್ನು ಅಡಿಗಡಿಗೆ ಗೆಲ್ಲಿಸುತ್ತಲೇ ಬಂದಿದ್ದಾರೆ. ಈವತ್ತಿಗೆ ಚಿತ್ರರಂಗ ಹೊಸತನದಿಂದ ಹೊಳೆಯುತ್ತಿದೆಯೆಂದರೆ ಅದಕ್ಕೆ ಇಂಥಾ ಮನಸ್ಥಿತಿಯೂ ಮೂಲ ಕಾರಣ. ಅದೇ ಸ್ಫೂರ್ತಿಯಿಂದ ತಯಾರಾಗಿ ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರ ಗಿಣಿ ಹೇಳಿದ ಕಥೆ!
ದೇವ್ ನಿರ್ಮಾಣ ಮಾಡಿ, ನಾಯಕನಾಗಿಯೂ ನಟಿಸಿರೋ ಈ ಸಿನಿಮಾವನ್ನ ನಾಗರಾಜ್ ಉಪ್ಪುಂದ ನಿರ್ದೇಶನ ಮಾಡಿದ್ದಾರೆ. ಸಾಮಾನ್ಯವಾಗಿ ಯಾವುದೇ ಚಿತ್ರವಾದರೂ ಅದನ್ನು ಯಾಕೆ ನೋಡ ಬೇಕು ಅಂತೊಂದು ಪ್ರಶ್ನೆ ಪ್ರೇಕ್ಷಕರಲ್ಲಿ ಹುಟ್ಟುತ್ತೆ. ಗಿಣಿ ಹೇಳಿದ ಕಥೆಯ ವಿಚಾರದಲ್ಲಿ ನೀವೆಲ್ಲರೂ ಯಾಕೆ ಈ ಸಿನಿಮಾವನ್ನು ನೋಡಲೇ ಬೇಕು ಎಂಬುದಕ್ಕೆ ಹಲವಾರು ಕಾರಣಗಳಿದ್ದಾವೆ!
ಎಲ್ಲರಿಗೂ ಗೊತ್ತಿರುವಂತೆ ಇದು ರಂಗಭೂಮಿ ಪ್ರತಿಭೆಗಳೇ ಸೇರಿಕೊಂಡು ರೂಪಿಸಿರುವ ಚಿತ್ರ. ಕಥೆಯನ್ನೂ ಮಂಕು ಮಾಡುವಂಥಾ ಬಿಲ್ಡಪ್ಪು, ವಿಜೃಂಭಣೆಗಳಿಂದ ಈ ಸಿನಿಮಾ ಸಂಪೂರ್ಣ ಮುಕ್ತ. ಆದರೆ ಸಿದ್ಧ ಸೂತ್ರಗಳ ಚಿತ್ರಗಳಲ್ಲಿಯೂ ಸಿಗದಂಥಾ ಭರ್ಜರಿ ಮನರಂಜನೆ ಇಲ್ಲಿ ಖಾಯಂ. ಯಾಕೆಂದರೆ ಇದರ ಉದ್ದೇಶವೇ ಮನೋರಂಜನೆ. ಕನ್ನಡಕ್ಕೆ ಫ್ರೆಶ್ ಅನ್ನಿಸುವಂಥಾ ಕಥೆ ಮತ್ತು ಪ್ರತೀ ಸೀನುಗಳಲ್ಲಿಯೂ ಅಂಥಾದ್ದೇ ತಾಜಾತನ ಇರಬೇಕೆಂಬ ಹಂಬಲದಿಂದಲೇ ಈ ಚಿತ್ರ ರೂಪುಗೊಂಡಿದೆ.
ಗಂಭೀರ ವಿಚಾರಗಳನ್ನೂ ಕೂಡಾ ಲಘುವಾಗಿಯೇ ದಾಟಿಸೋ ಈ ಚಿತ್ರದಲ್ಲಿ ಮಧುರವಾದ ಲವ್ ಸ್ಟೋರಿಯಿದೆ. ಮನಮಿಡಿಯುವ ದೃಷ್ಯಾವಳಿಗಳೂ ಇವೆ. ಇಂಥಾ ಭಿನ್ನ ಬಗೆಯ ಸುಂದರ ಅನುಭೂತಿ ಪಡೆಯಲು ಖಂಡಿತಾ ಈ ಚಿತ್ರವನ್ನು ನೋಡಲೇ ಬೇಕಿದೆ. ಈ ಮೂಲಕ ವಿಭಿನ್ನ ಪ್ರಯತ್ನವೊಂದಕ್ಕೆ ಪ್ರೋತ್ಸಾಹ ನೀಡ ಬೇಕಿದೆ.
#
No Comment! Be the first one.