ರವಿಕಿರಣ್ ನಿರ್ದೇಶನದ ಗಿರ್ ಗಿಟ್ಲೆ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಇದೀಗ ಇದರ ಸ್ಪೆಷಲ್ ಸಾಂಗ್ ಒಂದನ್ನು ಬಿಗ್ ಬಾಸ್ ಖ್ಯಾತಿಯ ನವೀನ್ ಸಜ್ಜು ಹಾಡಲಿದ್ದಾರೆ. ರಾಜೇಶ್ ರಾಮನಾಥ್ ಸ್ಟುಡಿಯೋದಲ್ಲಿ ಈ ಹಾಡಿನ ರೆಕಾರ್ಡಿಂಗ್ ಗೆ ಸಂಪೂರ್ಣ ತಯಾರಿಯನ್ನೂ ಮಾಡಿಕೊಳ್ಳಲಾಗಿದೆ.
ನಿರ್ದೇಶಕ ರವಿಕಿರಣ್ ಅವರೇ ಬರೆದಿರುವ ಹಾಡಿಗೆ ಲಿಯೋ ಪೀಟರ್ಸ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ವಿಶೇಷವಾದ ಹಾಡಿಗೆ ನವೀನ್ ಸಜ್ಜು ಧ್ವನಿಯಾಗಲಿದ್ದಾರೆ. ನವೀನ್ ಸಜ್ಜು ಹಾಡಿರೋ ಹಾಡುಗಳೆಲ್ಲವೂ ಸೂಪರ್ ಹಿಟ್ಟಾಗಿವೆ. ತನ್ನ ಅತ್ಯಂತ ವಿರಳವಾದ ಧ್ವನಿ, ಶೈಲಿಯ ಕಾರಣದಿಂದಲೇ ಬಹು ಬೇಡಿಕೆ ಪಡೆದುಕೊಂಡಿರೋ ನವೀನ್ ಸಜ್ಜು ಬಿಗ್ ಬಾಸ್ ಶೋ ನಂತರದಲ್ಲಿ ಈ ಹಾಡನ್ನು ಹಾಡುತ್ತಿದ್ದಾರೆ. ಇದೂ ಕೂಡಾ ಅವರ ಹಿಟ್ ಲಿಸ್ಟಿಗೆ ಸೇರಿಕೊಳ್ಳೋ ಸೂಚನೆಗಳಿವೆ. ಮತ್ತೊಂದು ವಿಶೇಷವೆಂದರೆ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಕೂಡಾ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ
ಗಿರಗಿಟ್ಲೆ ಪಕ್ಕಾ ಆಕ್ಷನ್ ಕಥಾ ಹಂದರ ಹೊಂದಿರೋ ಕಮರ್ಶಿಯಲ್ ಚಿತ್ರ. ಈ ಚಿತ್ರದ ಮೂಲಕ ಪ್ರದೀಪ್, ಗುರು ಮತ್ತು ಚಂದ್ರು ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಸನ್ನಿಧಿ ಎಂದೇ ಖ್ಯಾತರಾಗಿರೋ ವೈಷ್ಣವಿ ಗೌಡ ಮತ್ತು ಅದ್ವಿತಿ ಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ. ಹೀರೋ ಹೀರೋಯಿನ್ ಎಂಬ ಚೌಕಟ್ಟು ಮೀರಿದ ಕಥೆ ಹೊಂದಿರೋ ಈ ಚಿತ್ರದಲ್ಲಿ ರಂಗಾಯಣ ರಘು ಬಲು ವಿಶಿಷ್ಟವಾದೊಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ
#
No Comment! Be the first one.