ಯಾವುದೇ ಒಂದು ವಿಷಯವನ್ನಾಗಲಿ, ಕಥೆಯನ್ನಾಗಲಿ ಹೇಳುವ ಶೈಲಿ ಮುಖ್ಯ. ಸಿನಿಮಾ ನಿರ್ದೇಶಕರೆನಿಸಿಕೊಂಡವರಿಗೆ ನಿರೂಪಿಸೋ ಶಕ್ತಿಯೇ ಜೀವಾಳ. ಒಂದ್ ಕಥೆ ಹೇಳ್ಲಾ ಚಿತ್ರ ನಿರ್ದೇಶಿಸಿದ್ದ ಗಿರೀಶ್ ಅವರಿಗೆ ಕಥೆ ಹೇಳುವ ಕಲೆ ಸಿದ್ಧಿಸಿದೆ. ಇಲ್ಲೊಂದು ವಿಚಾರವನ್ನು ಗಿರೀಶ್ ಹೇಳಿದ್ದಾರೆ. ಅದು ಘಟನೆಯೋ ಕಥೆಯೋ ಗೊತ್ತಿಲ್ಲ. ಆದರೆ ಓದಿಸಿಕೊಂಡು ಹೋಗುವಂತೆ ಗಿರೀಶ್ ಬರೆದಿರುವ ಬಗೆ ಮಾತ್ರ ಚೆಂದ. ನೀವೂ ಒಮ್ಮೆ ಓದಿ!

3 Years ಹಿಂದೆ ನೆಡೆದಿದ್ದ ಒಂದು ಚಿಕ್ಕಘಟನೆ

ಇದನ್ನ ಬರೆಯುತ್ತಿದ್ದರೆ ನನ್ನ ಮೈ ರೋಮಾಂಚನಗೊಳ್ಳುತ್ತಿದೆ.. ನಾನಿರುವುದು KR Puramನಲ್ಲಿ ನಿನ್ನೆ ರಾತ್ರಿ ಊಟ ಮುಗಿಸಿ ರೂಮ್ ಗೆ ಹೋಗುವುದು ಸ್ವಲ್ಪ ತಡವಾಯಿತು, ಆ ಹೊತ್ತಿಗಾಗಲೆ ಸುಮಾರು 11 ಗಂಟೆ, ಕಾಲಿ ರೋಡು ಮೊಬೈಲ್ ನಲ್ಲಿ ಮಾತನಾಡುತ್ತಾ ಹೋಗುತ್ತಿದ್ದೆ.. ನಾನು ಬರುತ್ತಿದ್ದ ರಸ್ತೆಯ ಕೊನೆಯಲ್ಲಿ ಒಂದು ಕಾರ್ ಬಂದು ನಿಂತಿತು, ಸಾಮಾನ್ಯವಾಗಿ ಆ ರಸ್ತೆಯಲ್ಲಿ ಆ ಹೊತ್ತಿಗೆ ಅಷ್ಟಾಗಿ ಯಾರೂ ಓಡಾಡುವುದಿಲ್ಲ..

ಆ ಕಾರಿನಿಂದ ಒಬ್ಬ ಇಳಿ ವಯಸ್ಸಿನ ವ್ಯಕ್ತಿ ಇಳಿದು ಗಾಬರಿಯಿಂದ ಅಕ್ಕ ಪಕ್ಕ ನೋಡಿ ಒಂದು Paper ತೆಗೆದು ಅದನ್ನು ಅಲ್ಲೇ ಇದ್ದ ಲೈಟ್ ಕಂಬಕ್ಕೆ ಅಂಟಿಸಿ ಕಾರ್ ಒಳಗೆ ಹೋದ. ನಾನೊಬ್ಬನೇ ಇದ್ದುದರಿಂದ ನನ್ನ ಪಾಡಿಗೆ ನಾನು phoneನಲ್ಲಿ ನನ್ನ ಸ್ನೇಹಿತನೊಂದಿಗೆ ಮಾತನಾಡುತ್ತಾ ಹೊರಟೆ. ಸ್ವಲ್ಪ ಕತ್ತಲಿನ ರಸ್ತೆ ಇದ್ದದ್ದಕ್ಕೇನೋ ಬಹುಶಃ ನನ್ನನ್ನು ಅವನು ನೋಡಿರಲಿಲ್ಲ..

 ನಾನಿನ್ನೇನು ಅಲ್ಲೇ ಪಕ್ಕದ ರಸ್ತೆಗೆ ತಿರುಗಬೇಕು ಅನ್ನುವಷ್ಟರಲ್ಲಿ ಅವನು ಕಾರಿನಿಂದ ಒಂದು ಮೂಟೆಯನ್ನು ಕೆಳಗೆ ಎಳೆಯತೊಡಗಿದ ನನಗೆ ಕುತೂಹಲ ಮೂಡಿತು. ತಕ್ಷಣ call cut ಮಾಡಿ ಅಲ್ಲೇ sideನಲ್ಲಿ ಅವಿತು ಆ ಕಾರಿನಾತನ ಕೆಲಸವನ್ನೇ ನೋಡತೊಡಗಿದೆ.. ಆತ ಅಳುತ್ತಿರುವುದು ಗಮನಕ್ಕೆ ಬಂದು ಕುತೂಹಲ ಇನ್ನಷ್ಟು ಹೆಚ್ಚಿತು.. ಹೀಗೆ ಕಾರಿನಿಂದ ಎಳೆದ ಮೂಟೆ Heavy sizeನಲ್ಲಿತ್ತು.. ಒಂದು ಕಡೆ Curiosity ಇನ್ನೊಂದು ಕಡೆ ಭಯ. ಆದರೂ ವೀಕ್ಷಿಸತೊಡಗಿದೆ..

 ಆತ ಆ ಮೂಟೆಯನ್ನು ಅದೇ ಲೈಟ್ ಕಂಬದ ಕೆಳಗಿರಿಸಿ ಅಳುತ್ತಾ ಅಳುತ್ತಾ ವಾಪಸ್  ಕಾರ್ ಏರಿದ,  ಒಂದು ಕ್ಷಣ ಭಯ ಹೆಚ್ಚಾಗಿ ಅಕ್ಕ ಪಕ್ಕದವರನ್ನಾದರೂ ಕರೆಯೋಣವೆನಿಸಿತು. ನೋಡು ನೋಡಿತ್ತಿದ್ದಂತೆಯೆ ಅವನು ಕಾರ್ ತೆಗೆದುಕೊಂಡು ಹೊರಟೇ ಬಿಟ್ಟ.. ಈಗ ಅಲ್ಲಿ ನಾನು ನನ್ನಿಂದ ಸುಮಾರು 400 Meter ದೂರದಲ್ಲಿರುವ ಆ ಮೂಟೆ ಹಾಗು ಲೈಟ್ ಕಂಬಕ್ಕಂಟಿದ Paper ಅಷ್ಟೇ.. ಮುಂದೆ ಏನು ಮಾಡುವು ಎಂದು ದಿಕ್ಕೇ ತೋಚಲಿಲ್ಲ..

 ನನಗೇಕೆ ಎಂದು ನನ್ನ ರೂಮ್ ನ ಕಡೆಗೆ ಹೊರಡಲು ತೀರ್ಮಾನಿಸಿದೆ.. ಆದರೂ ಹಾಳು ಕುತೂಹಲ ಕೇಳಲಿಲ್ಲ,  ಆಗಿದ್ದಾಗಲಿ ಎಂದು ಧೈರ್ಯ ಮಾಡಿ ಕಂಬದ ಬಳಿಗೆ ಹೊರಟೆ.. ಎದೆಯಲ್ಲಿ ಢವ ಢವ ನನಗೆ ನಾನೆ ಸಮಾಧಾನ ಮಾಡಿಕೊಳುತ್ತಾ ಸುಮ್ಮನಿದ್ದ ನನ್ನ Mobile ತೆಗೆದು ಯಾರ ಜೊತೆಯೊ ಮಾತನಾಡುತ್ತಿರುವಂತೆ ‘ಹಾಂ ಹೂ’ ಎನ್ನುತ್ತಾ ಕಂಬದ ಬಳಿ ಬರುತ್ತಿದ್ದೇನೆ, ಅಂತೂ ಬಂದು ಕಂಬದ ಎದುರಿಗೆ ನಿಂತೆ..  ರಸ್ತೆಯಂತತೂ pin drop silence,  ಒಂಥರ ವಿಚಿತ್ರ ಭಯ..  ಮೊಬೈಲನ್ನು ಕೈಯಲ್ಲಿ ಹಿಡಿದುಕೊಂಡೆ ಕಂಬಕ್ಕೆ ಅಂಟಿದ್ದ Paper ಓದಿದೆ.. ವಿಷಯ ಹೀಗಿತ್ತು,  “ನಾನು ಇಷ್ಟು ದಿನ ಕೂಡಿಟ್ಟಿದ್ದ ಪಾಪದ ಹೊರೆ ಇಲ್ಲಿದೆ ದಯವಿಟ್ಟು ಒಳ್ಳೆಯ ಕೆಲಸಕ್ಕೆ ಉಪಯೋಗಿಸಿ”.. ನನಗಂತು ತಕ್ಷಣ ಮೋದಿಯ “ಸಂಪತ್ತಿಗೆ ಸವಾಲ್” ತೀರ್ಪು ನೆನಪಾಗಿ ಗರಬಡೆದಂತೆ ನಿಂತೆ..

ಭಯ ಖುಷಿ ಆಶ್ಚರ್ಯ ಎಲ್ಲ ಒಟ್ಟೊಟಿಗೆ ಆಗುತ್ತಿದೆ.. ಮೂಟೆಯಲ್ಲಿ ಹೇಗೆ ನೋಡಿದರೂ ಕೋಟಿಗಟ್ಟಲೆ ಇರಬಹುದೆಂಬ ಅಂದಾಜು ನನ್ನದು,  ಧೈರ್ಯ ಮಾಡಿ ಮೂಟೆ ಬಿಚ್ಚ ತೊಡಗಿದೆ ಜೊತೆಗೆ ಯಾರಾದರೂ ನೋಡಿದರೆ ಎಂಬ ಗಾಬರಿ ಬೇರೆ.. ನನ್ನ ಪುಣ್ಯಕ್ಕೆ ಓಂದು ನಾಯಿಯೂ ಅಲ್ಲಿರಲ್ಲಿಲ್ಲ.. ಮೂಟೆ ಬಿಚ್ಚುತ್ತಿದ್ದಂತೆ 1000ದ ನೋಟುಗಳ ಧಾರೆ.. ಎಲ್ಲವನ್ನು ಹೊಯ್ದರೆ Risk ತಪ್ಪಿದ್ದಲ್ಲ ಎಂದು ಯೋಚಿಸಿ ಏಳರಿಂದ ಏಂಟು ಕಂತೆಗಳನ್ನು ಸಿಕ್ಕ ಸಿಕ್ಕ ಜೇಬಿಗೆ ಸೇರಿಸಿ ಬನಿಯನ್ ಒಳಗೆ ಓಂದೆರಡು ಕಟ್ಟನ್ನು ಇಟ್ಟುಕೊಂಡೆ. ಕೊನೆಗೆ ಹೇಗೆ ಅಂದಾಜಿಸಿದರೂ ಸಾಕಷ್ಟು ಹಣ ನನ್ನ ಪಾಲಿಗಾಯಿತೆಂದು ಆಲೋಚಿಸಿ ತಿರುಪತಿ ತಿಮ್ಮಪ್ಪನನ್ನು ನಮಿಸುತ್ತಾ ಮೇಲೆದ್ದೆ.. ಸರಿ ಇನ್ನು ಇಲ್ಲಿರುವುದು ಸೂಕ್ತವಲ್ಲವೆಂದು ತಿಳಿದು ಗಡಿಬಿಡಿಯಿಂದ ನೆಡೆಯಲು ಶುರುಮಾಡಿದೆ.. ಯಪ್ಪಾ ತಲೆಯಲ್ಲಿ ನಾನಾ ಆಲೋಚನೆಗಳು ಜೊತೆಗೊಂದಿಷ್ಟು ಭಯ ಕೂಡ.. ಇಪ್ಪತ್ತು ಹೆಜ್ಜೆ ಮುಂದುಟ್ಟಿದ್ದಷ್ಟೇ ಹಿಂದೆಯಿಂದ ಯಾರೋ ಇಳಿದೆಳೆದರು. ಒಂದೇ ಕ್ಷಣದಲ್ಲಿ ಅಲ್ಲೇ ಜವರಾಯನ ದರುಶನವಾದಂತಾಯಿತು.. ಅದು Police Inspector..  ನಾನು ‘ಏನು’ ಎನ್ನುವಷ್ಟರಲ್ಲಿ ನಾಲ್ಕೈದು ಏಟು ಬಿದ್ದಿದ್ದವು.. ಅವನ ಮೈಕಟ್ಟಿಗೆ ನಾನು ಇಲಿಮರಿಯಂತೆ.. ಬಿಡಿಸಿಕೊಂಡು ಓಡುವಷ್ಟೂ ಅವಕಾಶವಿರಲ್ಲಿಲ್ಲ.. ಎಷ್ಟ್ ತಗೊಂಡೆ ಇನ್ನು ಎಲ್ಲೆಲ್ಲಿಟ್ಟಿದ್ದೀಯ ತೆಗಿ ತೆಗಿ ಎಂದು ನಾಲ್ಕೈದು ಏಟು ಕಾಲಿಗೆ ಬೀಸಿದ..

ಭಯಕ್ಕೆ ತಪ್ಪಾಯ್ತು ಸರ್ ಎನ್ನುತ್ತಾ ಅಳುತ್ತಾ ಜೇಬಿನಲ್ಲಿದ್ದ ಏಲ್ಲಾ ಕಟ್ಟುಗಳನ್ನು ತೆಗೆದು ತೆಗೆದು ಅವನ ಮುಂದೆ ಇಟ್ಟೆ.. ಅವನು ಅತ್ತ ಇತ್ತ ನೋಡಿ ಓಂದೇ ಓದು ಸಾವಿರದ ಕಟ್ಟನ್ನು ಕೊಟ್ಟು ತಿರುಗಿ ನೋಡದೆ ಓಡು ಎಂದ.. ಅವನಿಂದ ಬಿಡಿಸಿಕೊಂಡಿದ್ದೇ ಭಾಗ್ಯವೆಂದು ತಿಳಿದು ಹಿಂದಕ್ಕೂ ತಿರುಗದೆ ಅಲ್ಲಿಂದ ಓಡಿದೆ..  ರೂಮ್ ಗೆ ಬಂದು ಸೇರುವ ವರೆಗೂ ನನಗೆ ಬದುಕುವೆನೆಂಬ  ಭರವಸೆಯೇ ಇರಲಿಲ್ಲ.. ರೂಮಿಗೆ ಬಂದೇಟಿಗೆ ಬಾಗಿಲು ಹಾಕಿ, ಲೈಟ್ ಆಫ್ ಮಾಡಿ, ಗಾಬರಿಯಿಂದ ಅಡುಗೆ ಮನೆಗೆ ಬಂದು ನೀರು ಕುಡಿದೆ.. ಆಗ ನೆನಪಾಯಿತು ನನ್ನ ಬನಿಯನ್ ಓಳಗೆ ಇನ್ನೂ 2 ಸಾವಿರದ ಕಟ್ಟುಗಳಿವೆ.

ಓಮ್ಮೆಲೆ ತಿಮ್ಮಪ್ಪ ಮತ್ತೆ ದಯೆ ತೋರಿಸಿದಂತಾಯಿತು.  ಭಯದಿಂದಲೇ ಅಡುಗೆ ಮನೆಯ ಲೈಟ್ ಮಾತ್ರ ಆನ್ ಮಾಡಿ ಅವನು ಕೊಟ್ಟ ಒಂದು ಕಟ್ಟಿನ ಜೊತೆ ನನ್ನ ಬಳಿಯಿದ್ದ 2 ಕಟ್ಟುಗಳನ್ನು ಬಿಚ್ಚಿ ಎಣಿಸತೊಡಗಿದೆ.. ಅಲ್ಲಿಗೆ ನನ್ನ ಪಾಲಿಗೆ ಬಂದದ್ದು 8 ಲಕ್ಷದ 60,000 ಸಾವಿರ ರೂಪಾಯಿಗಳು..  ಭಯವೆಲ್ಲ ಹೋಗಿ ಉತ್ತುಂಗದ ಹರುಷ..  ತಾನಾಗೆ ಬಂದ ಸಂಪತ್ತು ಎಷ್ಟಾದರೇನು ಎಂದು ಸಮಾಧಾನ ಮಾಡಿಕೊಂಡು ಎಲ್ಲಾ ಹಣವನ್ನು ಜೋಪಾನವಾಗಿರಿಸಿ ಮಲಗಲು ಬಂದೆ.. 4 ಗಂಟೆಯ ವರೆಗೂ ನಿದ್ರೆಯೇ ಬರಲಿಲ್ಲ… ಅವನು ಬಾರಿಸಿದ ಲಾಟಿ ಏಟಿನ ನೋವೂ ತಿಳಿಯುತ್ತಿಲ್ಲ..  ಸರಿ ಮುಂದೆ ಈ ಹಣವನ್ನು ಏನು ಮಾಡುವುದು ಎಂದು ಆಲೋಚಿಸುತ್ತಾ ಆಲೋಚಿಸುತ್ತಾ ಕಣ್ಣು ಮುಚ್ಚಿ ತೆಗೆಯುವುದರೊಳಗೆ ಬೆಳಗ್ಗೆ 7 ಗಂಟೆ.. “ಇದು ನಿಜವಾಗಿ ರಾತ್ರಿ ನೆಡೆದ ಘಟನೆಯೋ ಅಥವ ನೆನ್ನೆ ರಾತ್ರಿ ಕಂಡ ಕನಸೋ ಗೊತ್ತಿಲ್ಲ!” Check ಮಾಡಿದಾಗ ನನ್ನ ಬಳಿ 300 ರೂಪಾಯಿ ಬಿಟ್ಟರೆ ಬೇರೆ ಹಣವೂ ಇರಲ್ಲಿಲ್ಲ.. ಆ ಬೋ** ಮಗ ಹೋಡೆದ ನೋವೂ ಇರಲಿಲ್ಲ..

Inspired by ಗಡ್ಡಪ್ಪ (ತಿಥಿ) – Inspire ಆಗಿ ಇಷ್ಟೆಲ್ಲ ಪುಂಗಿದ್ದು ಗಿರೀಶ ಜಿ ಗೌಡ್ರು..!!

CG ARUN

ನಟಭಯಂಕರನಿಗೆ ಶ್ರೀಮನ್ನಾರಾಯಣನ ಸಾಥ್!

Previous article

ಲೂಸ್ ಮಾದ ನಿರೂಪಣೆಯ ಗಾನಬಜಾನ !

Next article

You may also like

Comments

Leave a reply

Your email address will not be published. Required fields are marked *