ಕೆಜಿಎಫ್ ಚಿತ್ರದ ಯಶಸ್ಸಿನ ನಂತರ ರವಿ ಬಸ್ರೂರು ಸಾಕಷ್ಟು ಬ್ಯುಸಿ ಷೆಡ್ಯೂಲ್ ನಲ್ಲಿದ್ದಾರೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ಜತೆಗೆ ಮತ್ತಷ್ಟು ಸಿನಿಮಾಗಳಿಗೆ ಕಮಿಟ್ ಆಗಿದ್ದು, ತಮ್ಮದೇ ನಿರ್ದೇಶನದ ಗಿರ್ಮಿಟ್ ಸಿನಿಮಾವನ್ನು ಬಿಡುಗಡೆ ಮಾಡಲು ದಿನಗಣನೆ ಶುರು ಮಾಡಿದ್ದಾರೆ. ಬಹು ಭಾಷೆಗಳಲ್ಲಿ ಈ ಸಿನಿಮಾವು ತಯಾರಾಗಿರೋದು ಈ ಮೊದಲೇ ತಿಳಿದ ವಿಚಾರವಾದರೂ ರವಿ ಬಸ್ರೂರು ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಸೇರಿದಂತೆ ಇಂಗ್ಲಿಷ್ ಭಾಷೆಯಲ್ಲಿಯೂ ಸಿನಿಮಾ ಬಿಡುಗಡೆ ಮಾಡುವ ಪ್ಲ್ಯಾನ್ ನಲ್ಲಿದ್ದಾರೆ. ಈಗಾಗಲೇ ಇಂಗ್ಲಿಷ್ ಅವತರಣಿಕೆಯ ಡಬ್ಬಿಂಗ್ ಆರಂಭವಾಗಿದ್ದು, ಇದಕ್ಕೆ ಸೂಕ್ತ ತಂಡವನ್ನೂ ರೆಡಿಮಾಡಿದ್ದಾರೆ.
ಇದೊಂದು ಪಕ್ಕಾ ಕಮರ್ಶಿಯಲ್ ಚಿತ್ರವಾಗಿದ್ದು, ಚಿತ್ರದಲ್ಲಿ 280 ಕ್ಕೂ ಹೆಚ್ಚಿನ ಮಕ್ಕಳು ನಟಿಸಿದ್ದಾರೆ. ಇನ್ನು ಕನ್ನಡದಲ್ಲಿ ‘ಗಿರ್ಮಿಟ್’ ಎಂದು ಹೆಸರಿಡಲಾಗಿದ್ದು, ತಮಿಳು ಮತ್ತು ಮಲಯಾಳಂ ಚಿತ್ರಗಳಿಗೆ ಪೊಡಿ ಮಾಸ್ , ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಪಕ್ಕಾ ಮಾಸ್ ಎಂದು ಶೀರ್ಷಿಕೆ ಇಡಲಾಗಿದೆ. ಇನ್ನು ಚಿತ್ರದ ಪ್ರಮುಖ ಪಾತ್ರಗಳಿಗೆ ಯಶ್, ರಾಧಿಕಾ ಪಂಡಿತ್ ಧ್ವನಿ ನೀಡಿದ್ದಾರೆ. ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಹಾಡಿದ್ದು ತಾರಾ, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ, ರಂಗಾಯಣ ರಘು, ಸಾಧು ಕೋಕಿಲಾ, ಪೆಟ್ರೋಲ್ ಪ್ರಸನ್ನ, ಅನುಪಮ ಗೌಡ, ಅನುರಾಧಾ ಭಟ್, ಮತ್ತು ಶಿವರಾಜ್ ಕೆ.ಆರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಮಧ್ಯೆ ಉತ್ತರ ಕರ್ನಾಟಕದ ಜನಪ್ರಿಯವಾದ ಗಿರ್ಮಿಟ್ ಎಂಬ ತಿನಿಸಿಗೂ ರವಿ ಬಸ್ರೂರು ಸಿನಿಮಾಕ್ಕೂ ಏನಪ್ಪಾ ಲಿಂಕ್ ಅನ್ನೋದೇ ಸದ್ಯದ ಕೌತುಕವಾಗಿದ್ದು ಶೀಘ್ರವೇ ಅದನ್ನು ನಿರ್ದೇಶಕರು ರಿವೀಲ್ ಮಾಡಲಿದ್ದಾರೆ.
No Comment! Be the first one.