- ನೊಬೆಲ್ ನಂದಗೋಪಾಲ್
ಮತ್ತೆ ಕಮ್ ಬ್ಯಾಕ್ ಆಗೋಕೆ ರೆಡಿಯಾದ ರೇನ್ ಬಾಯ್!
ಗೋಲ್ಡನ್ ಸ್ಟಾರ್ ಗಣೇಶ್. ತಮ್ಮ ಆ್ಯಕ್ಟಿಂಗ್, ಸ್ಟೋರಿ ಸೆಲೆಕ್ಷನ್, ಸಾಂಗ್ಸ್ ಮೂಲಕ ಸ್ಯಾಂಡಲ್ವುಡ್ನಲ್ಲಿ ಸಪರೇಟ್ ಫ್ಯಾನ್ ಬೇಸ್ ಕ್ರಿಯೇಟ್ ಮಾಡಿಕೊಂಡಿರೋ ನಟ. ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ನಂತರ ಗಣಿ ಮುಟ್ಟಿದ್ದೆಲ್ಲವೂ ಚಿನ್ನವಾಗಿತ್ತು. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳ ಮೂಲಕ ಹಿಟ್ ಲಿಸ್ಟ್ನಲ್ಲಿಯೇ ಗೋಲ್ಡನ್ ಸ್ಟಾರ್ ಇರ್ತಿದ್ರು. ಆದ್ರೆ ಯಾಕೋ ಇತ್ತೀಚೆಗೆ ಗಣೇಶ್ ಸಿನಿಮಾಗಳು ಫ್ಲಾಪ್ ಆಗ್ತಿವೆ. ಎಕ್ಸ್ಪೆಕ್ಟೇಷನ್ಸ್ ಹುಟ್ಟಿಸುತ್ವೆ, ರಿಲೀಸ್ ಆದ್ಮೇಲೆ ಕೊಂಚ ಡಲ್ ಹೊಡೆಯುತ್ವೆ. ಈ ಬಾರಿ ಸಖತ್ ಪ್ಲಾನ್ ಹಾಕೊಂಡು ಮತ್ತೆ ಗೋಲ್ಡನ್ ಡೇಸ್ಗೆ ಬ್ಯಾಕ್ ಆಗೋಕೆ ಗೋಲ್ಡನ್ ಸ್ಟಾರ್ ರೆಡಿಯಾಗ್ತಿದ್ದಾರೆ. ‘ಗಾಳಿಪಟ-2’ ಸಿನಿಮಾದ ಮೂಲಕ ಹೊಸ ಸೀಸನ್ ಶುರು ಮಾಡ್ತಿದ್ದಾರೆ ನಮ್ ಗಣಿ.
ನಾಲ್ಕು ಸಿನಿಮಾಗಳಲ್ಲಿ ಬ್ಯುಸಿ ಇರುವ ‘ಹುಡುಗಾಟ’ದ ಹುಡುಗ!
ಹೌದು, ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ ಬ್ಯಾಕ್ ಟು ಬ್ಯಾಕ್ ತಮ್ಮ ಮುಂದಿನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬರೋಬ್ಬರಿ ನಾಲ್ಕು ಸಿನಿಮಾಗಳು ‘ಸಕ್ಕರೆ’ ಹುಡುಗನ ಕೈಯಲ್ಲಿವೆ. ಅದರಲ್ಲಿ ಫಸ್ಟ್ ಬರೋದು ವಿಕಟಕವಿ ಯೋಗರಾಜ್ ಭಟ್ಟರ ಸಾರಥ್ಯದ ‘ಗಾಳಿಪಟ -2’ ಸಿನಿಮಾ. ‘ಮುಂಗಾರುಮಳೆ’, ‘ಗಾಳಿಪಟ’, ‘ಮುಗಳುನಗೆ’ ಸಿನಿಮಾಗಳ ಮೂಲಕ ಬ್ಲಾಕ್ ಬಸ್ಟರ್ ಬಾರಿಸಿದ್ದ ಗಣಿ-ಭಟ್ಟರ ಜೋಡಿ ಈಗ ಮತ್ತೊಂದು ಹಿಟ್ ನೀಡೋಕೆ ರೆಡಿಯಾಗ್ತಿದೆ. ಇತ್ತ ಟ್ಯಾಲೆಂಟೆಡ್ ಸ್ಟಾರ್ ಡೈರೆಕ್ಟರ್ ಸಿಂಪಲ್ ಸುನಿಯ ‘ಸಖತ್’ ಸಿನಿಮಾದಲ್ಲೂ ‘ಚೆಲ್ಲಾಟ’ ಆಡೋಕೆ ‘ಅರಮನೆ’ ಹುಡುಗ ರೆಡಿಯಾಗ್ತಿದ್ದಾರೆ. ಇದಷ್ಟೇ ಅಲ್ಲ ‘ರಗಡ್’ ಸಿನಿಮಾದ ನವ ನಿರ್ದೇಶಕ ಮಹೇಶ್ ಗೌಡ ನಿರ್ದೇಶನದ ‘ತ್ರಿಬಲ್ ರೈಡಿಂಗ್’ ಸಿನಿಮಾದಲ್ಲೂ ‘ಬುಗುರಿ’ ಆಡಿಸೋಕೆ ‘ಬೊಂಬಾಟ್’ ಹೀರೋ ತಯಾರಾಗಿದ್ದಾರೆ.
ಈ ಮಧ್ಯೆ ಈಗ ಮತ್ತೊಂದು ಸಿನಿಮಾಗೆ ಗೋಲ್ಡನ್ ಸ್ಟಾರ್ ಓಕೆ ಎಂದಿದ್ದಾರೆ ಎನ್ನಲಾಗ್ತಿದೆ. ‘ಜೂಮ್’ ಸಿನಿಮಾದ ನಿರ್ದೇಶಕ ಪ್ರಶಾಂತ್ ರಾಜ್ ಜೊತೆ ಮತ್ತೊಂದು ಸಿನಿಮಾ ಮಾಡ್ತಿದ್ದಾರೆ. ಈಗಾಗಲೇ ಒಂದು ರೌಂಡ್ ಮಾತುಕತೆ ನಡೆದಿದ್ದು, ಸಿನಿಮಾದ ಕೆಲಸಗಳು ಗದಿಗೆದರಿವೆ ಅಂತಾ ಹೇಳಲಾಗ್ತಿದೆ. ಒಟ್ಟಾರೆಯಾಗಿ ಸದ್ಯ ಗೋಲ್ಡನ್ ಸ್ಟಾರ್ ಸದ್ಯ ಫುಲ್ ಬ್ಯುಜಿಯಾಗಿದ್ದಾರೆ. ಇತ್ತೀಚೆಗೆ ಎರಡು ಮೂರು ಸಿನಿಮಾಗಳ ಮೂಲಕ ಫ್ಲಾಪ್ ಸಿನಿಮಾಗಳನ್ನ ಕೊಟ್ಟರೂ ತಮ್ಮ ವಿರುದ್ಧ ಕೇಳಿಬಂದ ಸುದ್ದಿ ಬಗ್ಗೆ ಯಾವುದೇ ತೆಲೆ ಕೆಡಿಸಿಕೊಳ್ಳದೆ ಮತ್ತೆ ಮುನ್ನುಗ್ತಿದ್ದಾರೆ.’ ಗಾಳಿಪಟ-2′ ಸಿನಿಮಾದ ಮೂಲಕ ಮತ್ತೆ ಬಾನೆತ್ತರ ‘ಮುಗುಳುನಗೆ’ ಬೀರೋಕೆ ‘ಸುರಸುಂದರಾಂಗ’ ಸಜ್ಜಾಗಿದ್ದಾರೆ. ‘ಗಾಳಿಪಟ -2’ ಸಿನಿಮಾ ಗೋಲ್ಡನ್ ಸ್ಟಾರ್ರ ಕಮ್ ಬ್ಯಾಕ್ ಸಿನಿಮಾ ಆಗೋದು ಪಕ್ಕಾ ಅಂತಿದ್ದಾರೆ ಅವರ ಅಭಿಮಾನಿಗಳು….
Leave a Reply
You must be logged in to post a comment.