ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗೋದು ಹೇಗೆ ಕಾಮನ್ನೋ ಅದೇ ತರ ಸಿನಿಮಾರಂಗದಲ್ಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕಾಮನ್ನೇ ಅಲ್ವಾ. ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಂತೂ ಇಂತಹ ವಿದ್ಯಮಾನಗಳು ಬಲು ಜೋರಾಗಿಯೇ ನಡೀತಿದೆ. ಒಂದ್ಕಡೆ ಉಪೇಂದ್ರ ಪುತ್ರಿ ಐಶ್ವರ್ಯ ಕೂಡ ‘ದೇವಕಿ’ ಅನ್ನೋ ಚಿತ್ರದಲ್ಲಿ ಅಮ್ಮನ ಮುದ್ದಿನ ಮಗಳಾಗಿ ಕಾಣಿಸಿಕೊಂಡು ಅಭಿಮಾನಿಗಳ ಹುಬ್ಬೇರುವಂತೆ ಮಾಡಿದ್ರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ವಿನೀಶ್ ಯಜಮಾನ ಸಿನಿಮಾದ ಒಂದು ಹಾಡಿನಲ್ಲಿ ಅಪ್ಪನಂತೆ ಭರ್ಜರಿ ಸ್ಟೆಪ್ಪು ಹಾಕಿ ಅಭಿಮಾನಿಗಳು ಕುಪ್ಪಳಿಸುವಂತೆಯೂ ಮಾಡಿದ್ರು. ಇದೀಗ ಗೋಲ್ಡನ್ ಸ್ಟಾರ್ ಮಗನ ಸರದಿಯಾಗಿದ್ದು, ಗಣಿ ಪುತ್ರ ವಿಹಾನ್ ಕೂಡ ಸ್ಯಾಂಡಲ್ ವುಡ್ ಗೆ ಎಂಟ್ರಿ ಹಾಕುತ್ತಿದ್ದಾನೆ.
ಈಗಾಗಲೇ ‘ಚಮಕ್’ ಚಿತ್ರದ ಮೂಲಕ ಮಗಳು ಚಾರಿತ್ರ್ಯಳನ್ನು ಪರಿಚಯಿಸಿದ್ದ ‘ಗಣಿ’ ಇದೀಗ ಗೀತಾ ಚಿತ್ರದ ಮೂಲಕ ಮಗ ವಿಹಾನ್ನನ್ನು ಬಣ್ಣ್ದದ ಲೋಕಕ್ಕೆ ಪರಿಚಯಿಸೋಕೆ ರೆಡಿಯಾಗಿದ್ದಾರೆ. ಚಿತ್ರದಲ್ಲಿ ವಿಹಾನ್ ಗೆಸ್ಟ್ರೋಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದೀಗ ಚಿತ್ರದ ಸೆಟ್ನಲ್ಲಿ ಕೈಯಲ್ಲಿ ಬಂದೂಕು ಹಿಡಿದು ಮೊದಲ ಬಾರಿಗೆ ಕ್ಯಾಮೆರಾ ಮುಂದೆ ನಿಂತು ಪೋಸ್ ಕೊಟ್ಟಿದ್ದಾನೆ. ಇನ್ನು ಗಣೇಶ್ ಹೋಮ್ ಬ್ಯಾನರ್ ನಲ್ಲಿ ಬರ್ತಿರೋ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್, ಕೇರಳದ ನಟಿ ಪಾರ್ವತಿ ಅರುಣ್, ಪ್ರಯಾಗ ಮಾಲ್ಟಿನ್, ಡೈನಾಮಿಕ್ ಸ್ಟಾರ್ ದೇವರಾಜ್ , ಸುಧಾರಾಣಿ, ರಂಗಾಯಣರಘು, ಅಚ್ಯುತ ಕುಮಾರ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಚಿತ್ರಕ್ಕೆ ವಿಜಯ್ ನಾಗೇಂದ್ರ ನಿರ್ದೇಶನವಿದೆ.
No Comment! Be the first one.