ನಾಟಕಕಾರ, ಕಥೆಗಾರ, ನಟ, ಸಂಭಾಷಣಾಕಾರ, ಉದ್ಯಮಿ, ನಿರೂಪಕ, ನಿರ್ದೇಶಕ, ಪತ್ರಕರ್ತ, ಸಾಹಿತಿ – ಹೀಗೆ ಒಬ್ಬ ವ್ಯಕ್ತಿ ಹಲವಾರು ಕ್ಷೇತ್ರ, ವಿಭಾಗಗಳಲ್ಲಿ ಹೆಸರು ಮಾಡೋದು ಅಪರೂಪ. ಅಂತಾ ವಿರಳ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಗೊಲ್ಲಪುಡಿ ಮಾರುತಿ ರಾವ್ ಇಲ್ಲವಾಗಿದ್ದಾರೆ.
ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ಅನೋರೋಗ್ಯದಿಂದ ಕೊನೆಯುಸಿರೆಳೆದ ಗೊಲ್ಲಪುಡಿ ಅವರ ನಿಧನಕ್ಕೆ ತೆಲುಗು ಚಿತ್ರನಟರು ಸೇರಿದಂತೆ ಭಾರತೀಯ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.
ಗೊಲ್ಲಪುಡಿ ಮಾರುತಿ ತೆಲುಗಿನಲ್ಲೇ ನಟಿಸಿದ ಸಿನಿಮಾಗಳ ಸಂಖ್ಯೆ ಸರಿ ಸುಮಾರು ಇನ್ನೂರೈವತ್ತು. ಪೋಷಕ ಕಲಾವಿದರಾಗಿ ಹೆಸರು ಮಾಡಿದ್ದ ಗೊಲ್ಲಪುಡಿ ಸ್ವಾತಿ ಮುತ್ಯಂ ಚಿತ್ರ ನಟನೆಯಲ್ಲಿ ಇವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಸಿನಿಮಾ ನಟನೆಯ ಜೊತೆಗೇ ಶ್ರೀ ಕಾಳಹಸ್ತಿ ಪೈಪ್ಸ್ ಕಂಪೆನಿಯನ್ನೂ ನಡೆಸುತ್ತಿದ್ದರು. ಹತ್ತು ಹಲವು ಕೃತಿಗಳನ್ನು ರಚಿಸಿರುವ ಗೊಲ್ಲಪುಡಿ ತಮ್ಮ ಎಂಭತ್ತನೇ ವಯಸ್ಸಿಗೆ ಕಣ್ಮುಚ್ಚಿದ್ದಾರೆ.
ತೆಲುಗಿನ ಖ್ಯಾತ ನಟ ಮಹೇಶ್ ಬಾಬು, ನಾನಿ, ಅಲ್ಲರಿ ನರೇಶ್ ಸೇರಿದಂತೆ ಸಾಕಷ್ಟು ಜನ ಹೀರೋಗಳು ಟ್ವೀಟ್ ಮಾಡಿ ತಮ್ಮ ಮತ್ತು ಗೊಲ್ಲಪುಡಿ ಅವರ ನಡುವೆ ಇದ್ದ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಎಲ್ಲ ಸ್ಟಾರ್ಗಳ ಸಿನಿಮಾಗಳಲ್ಲಿ ಮಾರುತಿ ರಾವ್ ಪೋಷಕ ಕಲಾವಿದರಾಗಿ ನಟಿಸಿದ್ದಾರೆ. ಸದಾ ಲವಲವಿಕೆಯಿಂದಿದ್ದ ಮಾರುತಿ ರಾವ್ ಯಾವತ್ತೂ ಸುಮ್ಮನೇ ಕುಂತವರೇ ಅಲ್ಲ. ಈಗ ಇದ್ದಕ್ಕಿದ್ದಂತೆ ಎದ್ದು ನಡೆದೇಬಿಟ್ಟಿದ್ದಾರೆ…
No Comment! Be the first one.