ಅಕ್ಷಯ್ ಕುಮಾರ್ ಮತ್ತು ಕರೀನಾ ಕಪೂರ್ ಖಾನ್ ಕೆಲ ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ. ಈ ಜೋಡಿ ‘ಅಜ್ನಬೀ’, ‘ಕಂಬಕತ್ ಇಷ್ಕ್’, ‘ತಷನ್, ಐತ್ರಾಜ್’, ‘ಬೆವಾಫಾ’ ಇನ್ನೂ ಅನೇಕ ಬ್ಲಾಕ್ ಬಸ್ಟರ್ ಚಿತ್ರಗಳ ಮೂಲಕ ಬಾಲಿವುಡ್ ನಲ್ಲಿ ಕಮಾಲು ಸೃಷ್ಟಿಸಿತ್ತು. ಈಗ ಅದೇ ಜೋಡಿ ಹೊಸ ಚಿತ್ರ ‘ಗುಡ್ ನ್ಯೂಸ್’ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಲು ಬರುತ್ತಿದೆ. ಈಗಾಗಲೇ ಚಿತ್ರದ ಶೂಟಿಂಗ್ ಬರದಿಂದ ಸಾಗಿದ್ದು, ಬಲ್ಲ ಮೂಲಗಳ ಪ್ರಕಾರ ಪಾಪ್ಯೂಲರ್ ಹಾಡೊಂದನ್ನು ಕೇಳುಗರ ಪ್ರಸ್ತುತ ಟೇಸ್ಟಿಗೆ ಅನುಗುಣವಾಗಿ ರಿಮಿಕ್ಸ್ ಮಾಡಿ ಬಳಸಿಕೊಳ್ಳಲಾಗುತ್ತಿದೆಯಂತೆ. ‘ಸುಖ್ ಬೀರ್’ ಅವರ 90ರ ದಶಕದ ‘ಸೌದಾ ಕರಾ ಕರಾ’ ಗುಡ್ ನ್ಯೂಸ್ ಸಿನಿಮಾದಲ್ಲಿ ಮರು ಸೃಷ್ಟಿಯಾಗಲಿದೆ. ಈ ಹಾಡಿನಲ್ಲಿ ಅಕ್ಷಯ್ ಕುಮಾರ್, ಕರೀನಾ, ಕೈರಾ ಅದ್ವಾನಿ, ದಿಲ್ಜಿತ್ ಕಾಣಿಸಿಕೊಳ್ಳಲಿದ್ದಾರೆ.
“ಅಕ್ಷಯ್ ಸರ್ ಅವರ ಜತೆಗೆ ಕೆಲಸ ಮಾಡುವ ಕನಸು ಈಗ ನನಸಾಗುತ್ತಿದೆ. ನನಗಿನ್ನು ಈ ಹಾಡು ಪೂರ್ಣ ಪ್ರಮಾಣದಲ್ಲಿ ದೊರೆತಿಲ್ಲವಾದರೂ, ಇದು ವರ್ಷದ ಪ್ರಮುಖ ಹಾಡಾಗುವುದರಲ್ಲಿ ಸಂಶಯವಿಲ್ಲ” ಎಂದು ಈ ಹಾಡಿನ ಮರು ಸೃಷ್ಟಿ ಕೆಲಸವನ್ನು ನಿರ್ವಹಿಸುತ್ತಿರುವ ಡಿಜೆ ಚೇತಸ್ ತಿಳಿಸಿದ್ದಾರೆ. ಡೆಲ್ಲಿ ಕ್ಲಬ್ಬೊಂದರಲ್ಲಿ ಈ ಹಾಡಿಗೆ ಸೆಟ್ ಹಾಕಲಾಗಿದೆಯಂತೆ. ಇದರ ಒರಿಜಿನಲ್ ಹಾಡು ಮದುವೆ ಸಮಾರಂಭವೊಂದಲ್ಲಿ ಚಿತ್ರೀಕರಿಸಿದ್ದು, ಬಿಪಾಸಾ ಬಸು ಮತ್ತು ದಿನೊ ಮೊರಿಯೋ ಹೆಜ್ಜೆ ಹಾಕಿದ್ದರು.
No Comment! Be the first one.