‘ಗೂಢಾಚಾರಿ 2’ ಫಸ್ಟ್ ಲುಕ್ ರಿಲೀಸ್

ತೆಲುಗು ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಸೂಪರ್ ಹಿಟ್ ಸಿನಿಮಾ ‘ಗೂಢಾಚಾರಿ’. ಅಡಿವಿ ಶೇಷ್ ನಟನೆಯಲ್ಲಿ ಮೂಡಿ ಬಂದ ಆಕ್ಷನ್ ಅಂಡ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಗಳಿಕೆ ಕಂಡಿತ್ತು. ಇದೀಗ ಈ ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್ ಮತ್ತೊಮ್ಮೆ ತೆರೆ ಮೇಲೆ ಕಮಾಲ್ ಮಾಡೋದು ಕನ್ಫರ್ಮ್ ಆಗಿದೆ. ‘ಗೂಢಾಚಾರಿ 2’ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು ಜನವರಿ 9ರಂದು ಪ್ರಿ ವಿಷನ್ ವೀಡಿಯೋ ಬಿಡುಗಡೆಯಾಗುತ್ತಿದೆ.

ಪ್ರತಿ ಬಾರಿ ವಿಭಿನ್ನ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ಎದುರುಗೊಳ್ಳುವ ಅಡಿವಿ ಶೇಷ್ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಮೇಜರ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಸೂಪರ್ ಸಕ್ಸಸ್ ಕಂಡಿದ್ದು, ಭಾರತದಾದ್ಯಂತ ಇವರ ಸಿನಿಮಾಗಳಿಗೆ ಅಭಿಮಾನಿಗಳಿದ್ದಾರೆ. ಶಶಿ ಕಿರಣ್ ಟಿಕ್ಕ ನಿರ್ದೇಶನದಲ್ಲಿ ಮೂಡಿ ಬಂದ ‘ಗೂಢಾಚಾರಿ’ ಸಿನಿಮಾ ತೆಲುಗು ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿತ್ತು. ಇವರಿಬ್ಬರ ಕಾಂಬಿನೇಶನ್ ನಲ್ಲಿ ಬಂದ ಪ್ಯಾನ್ ಇಂಡಿಯಾ ಸಿನಿಮಾ ಮೇಜರ್ ಕೂಡ ಸೂಪರ್ ಸಕ್ಸಸ್ ಕಂಡಿದೆ. ಇತ್ತೀಚೆಗೆ ತೆರೆಕಂಡ ‘ಹಿಟ್ 2’ ಕೂಡ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದ್ದು ಇದೀಗ ‘ಗೂಢಾಚಾರಿ’ ಸೀಕ್ವೆಲ್ ಗೆ ರೆಡಿಯಾಗಿದ್ದಾರೆ ಅಡಿವಿ ಶೇಷ್.

‘ಗೂಢಾಚಾರಿ 2’ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಗ್ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದೆ. ಅಡಿವಿ ಶೇಷ್ ನಟನೆಯ ‘ಮೇಜರ್’ ಚಿತ್ರದ ಎಡಿಟರ್ ವಿನಯ್ ಕುಮಾರ್ ಸಿರಿಗಿನೀದಿ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಚಿತ್ರಕ್ಕೆ ಅಡಿವಿ ಶೇಷ್ ಕಥೆ ಬರೆದಿದ್ದು, ಕಾರ್ತೀಕೇಯ2, ಮೇಜರ್ ಹಾಗೂ ಕಾಶ್ಮೀರಿ ಫೈಲ್ಸ್ ನಂತ ಸೂಪರ್ ಹಿಟ್ ಸಿನಿಮಾ ನಿರ್ಮಾಣ ಮಾಡಿರೋ ದೊಡ್ಡ ನಿರ್ಮಾಣ ಸಂಸ್ಥೆಗಳು ‘ಗೂಢಾಚಾರಿ 2’ಗೆ ಬಂಡವಾಳ ಹೂಡುತ್ತಿವೆ. ಪೀಪಲ್ ಮೀಡಿಯಾ ಫ್ಯಾಕ್ಟರಿ, ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಮತ್ತು AK ಎಂಟಟೈನ್ಮೆಂಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಬ್ಯಾನರ್ ನಡಿ ಟಿಜಿ. ವಿಶ್ವಪ್ರಸಾದ್ ಮತ್ತು ಅಭಿಷೇಕ್ ಅಗರ್ ವಾಲ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಫಸ್ಟ್ ಲುಕ್ ಬಿಡುಗಡೆ ಮಾಡಿರುವ ಚಿತ್ರತಂಡ ಜನವರಿ 9ರಂದು ಡೆಲ್ಲಿ ಹಾಗೂ ಮುಂಬೈನಲ್ಲಿ ಚಿತ್ರದ ಪ್ರಿ ವಿಷನ್ ವೀಡಿಯೋ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ. ಮೊದಲ ಸೀಕ್ವೆಲ್ ನಲ್ಲಿದ್ದ ಕಲಾವಿದರ ಜೊತೆಗೆ ಒಂದಿಷ್ಟು ಹೊಸ ಪಾತ್ರವರ್ಗ ಚಿತ್ರತಂಡವನ್ನು ಸೇರಿಕೊಳ್ಳಲಿದ್ದು, ಕಥೆಗೆ ತಕ್ಕಂತೆ ಸಿನಿಮಾ ಮೇಕಿಂಗ್, ತಾಂತ್ರಿಕ ವರ್ಗ, ಆಕ್ಷನ್ ಸೀನ್ ಗಳು ದೊಡ್ಡ ಮಟ್ಟದಲ್ಲಿ ಮೂಡಿ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

Comments

Leave a Reply