ಕರ್ನಾಟಕದಲ್ಲಿ ಮೊದಲು ಕನ್ನಡಿಗರಿಗೆ ಉದ್ಯೋಗ ದೊರೆಯಬೇಕೆನ್ನುವುದು ಇಂದು ನಿನ್ನೆಯ ಕನಸಲ್ಲ. ಬಹಳಷ್ಟು ವರ್ಷಗಳಿಂದ ಸಾಕಷ್ಟು ಪ್ರಯತ್ನಪಟ್ಟರೂ ಅದರ ಫಲವನ್ನು ಕನ್ನಡಿಗರೂ ಉಣ್ಣಲು ಇನ್ನೂ ಕಾಲ ಕೂಡಿ ಬಂದಿಲ್ಲ. ಇದೀಗ ಮತ್ತೆ ಕನ್ನಡಿಗರಿಗೆ ಉದ್ಯೋಗಕ್ಕಾಗಿ ಹೋರಾಟದ ಕೂಗು ಕೇಳಿ ಬಂದಿದೆ. ಹಲವು ಕನ್ನಡ ಪರ ಸಂಘಟನೆಗಳು ಸೇರಿ ಬೆಂಗಳೂರಿನ ಆನಂದ್ ರಾವ್ ವೃತ್ತದಲ್ಲಿ ಇಂದು ಮತ್ತು ನಾಳೆ ಗಾಂಧಿ ಪ್ರತಿಮೆಯ ಬಳಿ ಅಹೋರಾತ್ರಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದೆ.

ಸದ್ಯ ಈ ಹೋರಾಟಕ್ಕೆ ಸ್ಯಾಂಡಲ್​ವುಡ್ ಸ್ಟಾರ್ ನಟರು ಹಾಗೂ ಕಲಾವಿದರು ಕೈಜೋಡಿಸಿದ್ದಾರೆ. ಈ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಮಾತನಾಡಿ “ ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯ ಸಿಗಲೇಬೇಕು. ಅದು ಎಲ್ಲರ ಆಸೆ, ಕನಸು ಕೂಡ. ಇದಕ್ಕಾಗಿ ಒಂದು ಹೋರಾಟ ಕೂಡ ನಡೆಯುತ್ತಿದೆ. ಒಂದು ದಿನ ಉಪವಾಸ ಮಾಡುವ ಮೂಲಕ ಹೋರಾಟವನ್ನು ಹಮ್ಮಿಕೊಂಡಿದ್ದಾರೆ. ಈ  ಹೋರಾಟಕ್ಕೆ ಪ್ರತಿಯೊಬ್ಬ ಕನ್ನಡಿಗರು ಬೆಂಬಲ ನೀಡಬೇಕು. ಎರಡು ದಿನದ ಹೋರಾಟದಲ್ಲಿ ನಾನೂ ಭಾಗವಹಿಸುತ್ತೇನೆ. ನೀವು ಬನ್ನಿ ಅಂತಾ ಕೇಳಿಕೊಂಡಿದ್ದಾರೆ.

ಇನ್ನು ಶಿವರಾಜ್​ ಕುಮಾರ್ ಮಾತನಾಡಿ, ನೆಲ, ಜಲ ಭಾಷೆ ಅಂತಾ ಬಂದಾಗ ಯಾವತ್ತು ಕನ್ನಡಿಗರಿಗೆ ಪರ. ರಾಜ್ಯದಲ್ಲಿ ಪರಭಾಷಿಗರಿಗೂ ಉದ್ಯೋಗ ನೀಡಿದರು ಮೊದಲ ಪ್ರಾಶಸ್ತ್ಯ ನಮ್ಮ ಕನ್ನಡಿಗರಿಗೆ ಇರಬೇಕು. ಆ ನಿಟ್ಟಿನಲ್ಲಿ ಉಪವಾಸ  ಹೋರಾಟ ಕೈಗೊಂಡಿದ್ದಾರೆ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಅಂತಾ ಹೇಳಿದ್ದಾರೆ. ಜೊತೆಗೆ ಸರ್ಕಾರಕ್ಕೂ ಮನವಿ ಸ್ವೀಕರಿಸಿ ಒಳ್ಳೆಯ ನಿರ್ಧಾರ ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ”.

CG ARUN

ಜನಪದ ಗಾದೆಗೆ ಸಿನಿಮಾ ರೂಪಕೊಟ್ಟ ಸುಜಯ್ ಶಾಸ್ತ್ರಿ!

Previous article

ಬದಲಾಗಬೇಕಿರುವುದು ವಾಟ್ಸ್ಅಪ್ ಡಿಪಿಯಲ್ಲ… ಅನಾಗರೀಕರಾದ ನಾವು…. 

Next article

You may also like

Comments

Leave a reply

Your email address will not be published. Required fields are marked *