‘ಕ್ರಿಸ್ಟಲ್ ಪ್ರೊಡಕ್ಷನ್ಸ್’ನ ಚಂದ್ರಶೇಖರ್ ನಿರ್ಮಾಣದಲ್ಲಿ, ಸುಜಯ್ ಶಾಸ್ತ್ರೀ ನಿರ್ದೇಶನದ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾ ದೇಶಾದ್ಯಂತ ರಿಲೀಸಾಗಿ ಅದ್ಭುತವಾದ ಪ್ರತಿಕ್ರಿಯೆ ಪಡೆದಿದೆ. ಹೌಸ್ ಫುಲ್ ಪ್ರದರ್ಶನದೊಂದಿಗೆ ಒಳ್ಳೇ ಕಲೆಕ್ಷನ್ ಮಾಡುತ್ತಿದೆ. ರಾಜ್ ಬಿ ಶೆಟ್ಟಿ, ಪ್ರಮೋದ್ ಶೆಟ್ಟಿ, ಗಿರಿ, ಕವಿತಾ ಗೌಡ ಮುಂತಾದವರ ನಟನೆಯನ್ನು ಜನ ಎಂಜಾಯ್ ಮಾಡುತ್ತಿದ್ದಾರೆ. ಈಗ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ತಮಿಳು, ತೆಲುಗು ಭಾಷೆಗೆ ರಿಮೇಕ್ ಹಕ್ಕು ಕೂಡಾ ಮಾರಾಟವಾಗಿದೆ. ಜೊತೆಗೆ ಮಲಯಾಳಂಗೂ ಡಬ್ಬಿಂಗ್ ಹಕ್ಕು ಉತ್ತಮ ಮೊತ್ತಕ್ಕೆ ಮಾರಾಟವಾಗಿದೆ.
ಇತ್ತೀಚಿಗೆ ಬೆಲ್ ಬಾಟಮ್ ಸಿನಿಮಾ ಕೂಡಾ ದಕ್ಷಿಣ ಭಾರತದ ಬಹುತೇಕ ಭಾಷೆಗೆ ಸೇಲ್ ಆಗಿತ್ತು. ಕನ್ನಡದ ಸಿನಿಮಾಗಳು ಈಗ ಪರಭಾಷೆಯಲ್ಲಿ ಬೇಡಿಕೆ ಹೊಂದುತ್ತಿರುವುದು ಆಶಾದಾಯಕ ಬೆಳವಣಿಗೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಯಾವುದೇ ಭಾಷೆಯ ಜನ ಒಪ್ಪಿ, ಅಪ್ಪಿಕೊಳ್ಳುವಂತಾ ಕಂಟೆಂಟ್ ಹೊಂದಿದೆ. ಈಗ ಜನರ ಪ್ರತಿಕ್ರಿಯೆ ಉತ್ತಮ ರೀತಿಯಲ್ಲಿ ವ್ಯಕ್ತವಾಗುತ್ತಿರುವುದರಿಂದ ಒಂದಾದ ಮೇಲೆ ಒಂದರಂತೆ ಪರಭಾಷೆಯ ಜನ ಬಂದು ರಿಮೇಕ್ ಮತ್ತು ಡಬ್ಬಿಂಗದ ಹಕ್ಕು ಪಡೆದುಕೊಳ್ಳುತ್ತಿದ್ದಾರೆ.
ಕ್ರಿಸ್ಟಲ್ ಸಿನಿಮಾದವರು ಮುಟ್ಟಿದ ಎಲ್ಲವೂ ಚಿನ್ನವಾಗುತ್ತಿದೆ. ಬಹುಶಃ ಜನ ಯಾವುದನ್ನು ಮೆಚ್ಚುತ್ತಾರೆ ಎನ್ನುವ ನಾಡಿಮಿಡಿತ ಈ ಸಂಸ್ಥೆಗೆ ತಿಳಿದಿದೆ ಎನಿಸುತ್ತಿದೆ. ಇನ್ನು ಈ ಬ್ಯಾನರಿನಲ್ಲಿ ಮೂಡಿಬರುವ ಮುಂದಿನ ಸಿನಿಮಾಗಳಿಗೂ ಇದು ಉತ್ತಮ ಮಾರುಕಟ್ಟೆ ಸೃಷ್ಟಿಸುವಲ್ಲಿ ಸಹಕಾರಿಯಾಗೋದು ಖಂಡಿತ.