ರಿಯಲೆಸ್ಟಿಕ್ ಕಾಮಿಡಿ ಸಿನಿಮಾ ಒಂದು ಮೊಟ್ಟೆಯ ಕಥೆ ಚಿತ್ರದ ನಂತರ ಸ್ಲಾಪ್ ಸ್ಟಿಕ್ ಕಾಮಿಡಿ ಮೊರೆ ಹೋಗಿರುವ ರಾಜ್ ಬಿ ಶೆಟ್ಟಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ಸಿದ್ಧ ಸೂತ್ರಗಳನ್ನೂ ಲೇವಡಿ ಮಾಡುವ ಮೂಲಕ ನಗಿಸುವ ಪ್ರಯತ್ನವನ್ನು ಮಾಡಿದ್ಧಾರೆ. ರಿಯಲೆಸ್ಟಿಕ್ ಕಾಮಿಡಿಗೆ ಹೋಲಿಸಿದರೆ ಸಾಕಷ್ಟು ಸವಾಲಿರುವ ಸ್ಲಾಪ್ ಸ್ಟಿಕ್ ಕಾಮಿಡಿಯನ್ನು ಬರೆಯುವುದು ಎಷ್ಟರಮಟ್ಟಿಗೆ ಕಷ್ಟವೋ ಅದೇ ರೀತಿ ಆ ಪಾತ್ರಕ್ಕೆ ಜೀವ ತುಂಬುವುದೂ ಅಷ್ಟೇ ಸವಾಲಿನ ಕೆಲಸವೇ ಸರಿ. ವೆಂಕಟ ಕೃಷ್ಣ ಗುಬ್ಬಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಜ್ ಬಿ ಶೆಟ್ಟಿ ಅವೆಲ್ಲವನ್ನೂ ನೀರು ಕುಡಿದಂತೆ ಮಾಡಿ ಮುಗಿಸಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೊಸ ಪ್ರಯೋಗದ ಸಿನಿಮಾವಾಗಿದ್ದು, ಆರಂಭದಿಂದ ಅಂತ್ಯದವರೆಗೂ ಸಿನಿಮಾ ಮನರಂಜನಾತ್ಮಕವಾಗಿ ಸಾಗಿಸಿಕೊಂಡು ಹೋಗುವುದಲ್ಲದೇ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ ಪ್ರಯತ್ನವನ್ನು ಮಾಡಿದೆ. ಚಮಕ್, ಅಯೋಗ್ಯ ಖ್ಯಾತಿಯ ಟಿ. ಆರ್. ಚಂದ್ರಶೇಖರ್ ಕ್ರಿಸ್ಟಲ್ ಪಾರ್ಕ್ ಬ್ಯಾನರ್ ನಲ್ಲಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಇಲ್ಲಿಯವರೆಗೂ ಕಾಮಿಡಿ ಪಾತ್ರಗಳಲ್ಲಿ ರಂಜಿಸುತ್ತಿದ್ದ ಸುಜಯ್ ಶಾಸ್ತ್ರಿ ಇದೇ ಮೊದಲ ಬಾರಿಗೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಮೂಲಕ ನಿರ್ದೇಶಕನಾಗಿ ಬಡ್ತಿ ಹೊಂದಿದ್ದಾರೆ. ಇನ್ನು ರಾಜ್ ಬಿ ಶೆಟ್ಟಿಗೆ ಬಿಗ್ ಬಾಸ್ ಖ್ಯಾತಿಯ ಕವಿತಾ ಗೌಡ ನಾಯಕಿಯಾಗಿ ಜತೆಯಾಗಿದ್ದು, ಉಳಿದಂತೆ ಪ್ರಮೋದ್ ಶೆಟ್ಟಿ, ಶೋಭರಾಜ್, ಬಾಬು ಹಿರಣಯ್ಯ, ಮಂಜುನಾಥ್ ಹೆಗಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
No Comment! Be the first one.