ಗೂಢಚಾರಿಗೆ ಆರು ವರ್ಷದ ಸಂಭ್ರಮ…ಗೂಢಚಾರಿ-2 ಬಗ್ಗೆ ಅಡಿವಿ ಶೇಷ್ ಹೇಳಿದ್ದೇನು?

ತೆಲುಗು ಚಿತ್ರರಂಗದಲ್ಲಿ ದಾಖಲೆ ಬರೆದ ಸೂಪರ್ ಹಿಟ್ ಸಿನಿಮಾ ‘ಗೂಢಚಾರಿ’ಗೆ ಆರು ವರ್ಷದ ಸಂಭ್ರಮ. ಶಶಿ ಕಿರಣ್ ಟಿಕ್ಕಾ ನಿರ್ದೇಶನದ ಈ ಸ್ಪೈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಅಡಿವಿ ಶೇಷ್ ಹೀರೊ ಆಗಿ ನಟಿಸಿದ್ದರು. ಯಾವುದೇ ನಿರೀಕ್ಷೆ ಇಲ್ಲದೇ ಬಂದ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಅಂದಾಜು 6 ಕೋಟಿ ರೂ. ಬಜೆಟ್ ಸಿನಿಮಾ 25-30 ಕೋಟಿ ರೂ. ದೋಚಿತ್ತು. ಈಗ ‘ಗೂಢಚಾರಿ’-2 ಸಿನಿಮಾ ನಿರ್ಮಾಣವಾಗುತ್ತಿದೆ. ಈ ಚಿತ್ರದ ಶೇಖಡ 40ರಷ್ಟು ಮುಕ್ತಾಯಗೊಂಡಿದೆ. ಬಹಳ ಅದ್ಧೂರಿಯಾಗಿ ಗೂಢಚಾರಿ 2 ನಿರ್ಮಾಣ ಮಾಡಲಾಗುತ್ತಿದೆ. ಗೂಢಚಾರಿಗೆ ಆರು ವರ್ಷದ ಸಂಭ್ರಮದಲ್ಲಿ ಗೂಢಚಾರಿ 2 ಸಿನಿಮಾದ ಆರು ಸ್ಟನ್ನಿಂಗ್ ಲುಕ್ ಬಿಡುಗಡೆ ಮಾಡಲಾಗಿದೆ.

ಗೂಢಚಾರಿ 2 ಬಗ್ಗೆ ಮಾತಾನಾಡಿದ ನಾಯಕ ಅಡಿವಿ ಶೇಷ್, ಗೂಢಚಾರಿ ಹಲವು ಕಾರಣಗಳಿಂದ ವಿಶೇಷ ಚಿತ್ರವಾಗಿದೆ. ಕಳೆದ ಆರು ವರ್ಷಗಳಲ್ಲಿ ನಾನು ಮೆಚ್ಚುಗೆ ಕೇಳದ ಒಂದು ವಾರವೂ ಇರಲಿಲ್ಲ. ಸದ್ಯ ಗೂಢಚಾರಿ 2 ದೊಡ್ಡ ಮಟ್ಟದಲ್ಲಿ ಮೂಡಿ ಬರುತ್ತಿದೆ. G2 ಅಭಿಮಾನಿಗಳಿಗೆ ಸಖತ್ ಟ್ರೀಟ್ ನೀಡಲಿದೆ ಎಂದು ತಿಳಿಸಿದರು.

ಸೂಪರ್ ಹಿಟ್ ಸಿನಿಮಾ ಗೂಢಚಾರಿ ಸೀಕ್ವೆಲ್‌ಗೆ ಸ್ವತಃ ಅಡಿವಿ ಶೇಷ್ ಕಥೆ ಬರೆದಿದ್ದು, ‘ಕಾರ್ತೀಕೇಯ- 2’, ‘ಮೇಜರ್’ ಹಾಗೂ ‘ಕಾಶ್ಮೀರಿ ಫೈಲ್ಸ್’ನಂತ ಸೂಪರ್ ಹಿಟ್ ಸಿನಿಮಾ ನಿರ್ಮಾಣ ಮಾಡಿರೋ ದೊಡ್ಡ ನಿರ್ಮಾಣ ಸಂಸ್ಥೆಗಳು ‘ಗೂಢಚಾರಿ- 2’ಗೆ ಬಂಡವಾಳ ಹೂಡುತ್ತಿವೆ. ಪೀಪಲ್ ಮೀಡಿಯಾ ಫ್ಯಾಕ್ಟರಿ, ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಮತ್ತು AK ಎಂಟಟೈನ್ಮೆಂಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಬ್ಯಾನರ್ ನಡಿ ಟಿಜಿ. ವಿಶ್ವಪ್ರಸಾದ್ ಮತ್ತು ಅಭಿಷೇಕ್ ಅಗರ್ ವಾಲ್ ಜಂಟಿಯಾಗಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.

‘ಗೂಢಚಾರಿ’ ಚಿತ್ರದಲ್ಲಿ ಅಡಿವಿ ಶೇಷ್ ಜೊತೆ ಶೋಬಿತಾ ದುಲಿಪಾಲ, ಜಗಪತಿ ಬಾಬು, ಪ್ರಕಾಶ್ ರಾಜ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದರು. ಸೂಪರ್ ಸಿನಿಮಾ ಸೀಕ್ವೆಲ್‌ನಲ್ಲೇ ನಟಿಸಿ ಮತ್ತೊಮ್ಮೆ ಗೆಲ್ಲುವ ಉತ್ಸಾಹದಲ್ಲಿ ಅಡಿವಿ ಶೇಷ್ ಇದ್ದಾರೆ. ಅಡಿವಿ ಶೇಷ್ ನಟನೆಯ ‘ಮೇಜರ್’ ಚಿತ್ರದ ಎಡಿಟರ್ ವಿನಯ್ ಕುಮಾರ್ ಸಿರಿಗಿನೀದಿ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. 2025ರಲ್ಲಿ ಗೂಢಚಾರಿ 2 ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.


by

Comments

Leave a Reply