ಚಿತ್ರರಂಗದಲ್ಲಿ ಕೆಲಸ ಮಾಡಬೇಕು ಅನ್ನೋದು ಹಲವರ ಹಂಬಲ. ಒಬ್ಬೊಬ್ಬರೂ ಒಂದೊಂದು ವಿಭಾಗದಲ್ಲಿ ಕೆಲಸ ಮಾಡಬೇಕೆನ್ನುವ ಬಯಕೆಯಲ್ಲಿರುತ್ತಾರೆ. ಆದರೆ ತಮ್ಮ ಆಸಕ್ತಿಗೆ ತಕ್ಕಂತಾ ಕೆಲಸ ಕಲಿಯುವುದರಲ್ಲಿ ಸಾಕಷ್ಟು ಜನ ವಿಫಲರಾಗಿರುತ್ತಾರೆ. ಸದ್ಯ ಸಿನಿಮಾ ವಿಚಾರವಾಗಿ ಗುಣಮಟ್ಟದ ಶಿಕ್ಷಣ ಕೊಡುವ ಸಂಸ್ಥೆಗಳು ಕರ್ನಾಟಕದಲ್ಲಿ ವಿರಳ. ಈ ನಿಟ್ಟಿನಲ್ಲಿ ಖ್ಯಾತ ನಿರ್ದೇಶಕ ಗುರು ದೇಶಪಾಂಡೆ ಸಿನಿಮಾ ಮತ್ತು ಮನರಂಜನೆಯ ವಿಚಾರದಲ್ಲಿ ಪರಿಪೂರ್ಣವಾದ ಶಿಕ್ಷಣ ನೀಡಲು ‘ಜಿ ಅಕಾಡೆಮಿ’ಯನ್ನು ಆರಂಭಿಸುತ್ತಿದ್ದಾರೆ. ಈ ಹಿಂದಿನಿಂದಲೂ ಚಿತ್ರ ನಿರ್ದೇಶನದೊಂದಿಗೆ ಸಿನಿಮಾಸಕ್ತರಿಗೆ ಶಿಕ್ಷಣ ನೀಡುತ್ತಾ ಬಂದಿರುವ ಗುರು ದೇಶಪಾಂಡೆ ಅವರು ಈ ಬಾರಿ ದೊಡ್ಡ ಮಟ್ಟದಲ್ಲಿ ಸಂಸ್ಥೆಯನ್ನು ತೆರೆಯುತ್ತಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಇನ್ನಷ್ಟು ಮಾಹಿತಿಗಳೂ ಜಾಹೀರಾಗಲಿವೆ.

ಸಿನಿಮಾದ ಕನಸು ಕಾಣುತ್ತಾ, ಮಾರ್ಗದರ್ಶನದ ಕೊರತೆಯಿಂದ ಕೊರಗುತ್ತಿರುವ ಅಭ್ಯರ್ಥಿಗಳು ಇನ್ನು ಯಾವ ಕಾರಣಕ್ಕೂ ದಿಕ್ಕೆಟ್ಟು ಕೂರುವ ಅವಶ್ಯಕತೆಯಿರುವುದಿಲ್ಲ. ಸಿನಿಮಾರಂಗದ ಎಲ್ಲ ವಿಭಾಗಗಳ ಪರಿಚಯವಿರುವ, ಯಶಸ್ವೀ ಸಿನಿಮಾಗಳನ್ನು ನೀಡಿದ, ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿರುವ ಹೆಚ್ಚುಗಾರಿಕೆ ಗುರು ದೇಶಪಾಂಡೆ ಅವರದ್ದು. ಸದಾ ಹೊಸತನಕ್ಕಾಗಿ ತುಡಿಯುವ, ಹಗಲಿರುಳು ಸಿನಿಮಾವನ್ನೇ ಧ್ಯಾನಿಸುವ ಗುರು ದೇಶಪಾಂಡೆಯವರಂಥಾ ಕ್ರಿಯಾಶೀಲ ತಂತ್ರಜ್ಞರೊಬ್ಬರು ಆರಂಭಿಸುತ್ತಿರುವ ‘ಜಿ ಅಕಾಡೆಮಿ’ ಕನಸುಗಳನ್ನು ಹೊತ್ತುಬಂದವರ ಪಾಲಿಗೆ ದೇಗುಲವಾಗಲಿ…

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಡೇಟ್ ಫಿಕ್ಸ್!

Previous article

ಪೈಲ್ವಾನ್ ಮುಂದಕ್ಕೆ!

Next article

You may also like

Comments

Leave a reply

Your email address will not be published. Required fields are marked *