ದಶಕದಿಂದಲೂ ಕನ್ನಡ ಚಿತ್ರರಂಗದಲ್ಲಿ ಒಬ್ಬ ನಿರ್ದೇಶಕರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಗುರು ದೇಶಪಾಂಡೆ ಇದೀಗ ಹೊಸ ಹೆಜ್ಜೆಯಿರಿಸಿzರೆ. ಸಿನಿಮಾರಂಗಕ್ಕೆ ಬರಲು ಆಸಕ್ತಿಯಿರುವ ಕನಸು ಕಟ್ಟಿಕೊಂಡು ಯುವ ಪ್ರತಿಭೆಗಳಿಗೆ ನಟನೆ, ನಿರ್ದೇಶನ, ಸಂಕಲನ, ನೃತ್ಯ ಸೇರಿದಂತೆ ಸಿನಿಮಾರಂಗಕ್ಕೆ ಸಂಬಂಧಿಸಿದ ಹಲವು ಪಟ್ಟುಗಳನ್ನು ಕಲಿತುಕೊಳ್ಳಲು ’ಜಿ ಅಕಾಡೆಮಿ’ ಎಂಬ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.


ಖ್ಯಾತ ನಿರ್ದೇಶಕರು, ನುರಿತ ತಂತ್ರಜ್ಞರು ಈ ಸಂಸ್ಥೆಯಲ್ಲಿ ತರಬೇತಿ ನೀಡಲಿzರೆ ಎಂಬುದು ವಿಶೇಷ. ಹಿರಿಯ ನಿರ್ದೇಶಕ ಸುನಿಲ್‌ಕುಮಾರ್ ದೇಸಾಯಿ, ಸಂಕಲನಕಾರ ಸುರೇಶ್ ಅರಸ್ ಮತ್ತು ಕಿರುತೆರೆಯ ಜಯಪ್ರಕಾಶ್ ಶೆಟ್ಟಿ ಮೆಂಟರ್‌ಗಳಾಗಿzರೆ. ನಿರ್ಮಾಪಕ ಕೆ.ಮಂಜು, ಉದಯ ಕೆ. ಮೆಹ್ತಾ, ನಿರ್ದೇಶಕ ದಯಾಳ್ ಪದ್ಮನಾಭನ್, ಭರ್ಜರಿ ಚೇತನ್ ಕುಮಾರ್, ರಾಮ ರಾಮ ರೇ ಸತ್ಯಪ್ರಕಾಶ್, ಬಿ.ಎಂ. ಗಿರಿರಾಜ, ಮೌನೇಶ್ ಬಡಿಗೇರ್, ನವೀನ್ ಕೃಷ್ಣ, ಕೆಂಪರಾಜು, ಕೆ.ಎಸ್. ಚಂದ್ರಶೇಖರ್, ಆರ್.ಜೆ. ನೇತ್ರಾ, ಹೇಮಲತಾ, ಸಂತೋಷ್ ನಾಯಕ್, ಮದನ್-ಹರಿಣಿ, ಗಿರೀಶ್, ಡಿಫರೆಂಟ್ ಡ್ಯಾನಿ, ದೀಪಕ್ ಮತ್ತು ಶ್ರೀನಿವಾಸ್ ಸೇರಿದಂತೆ ಅನೇಕರು ಆಯಾ ವಿಭಾಗಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲಿದ್ದಾರೆ.


ಸೆಪ್ಟೆಂಬರ್ ೨೫ರಿಂದ ತರಗತಿಗಳು ಆರಂಭವಾಗಲಿದ್ದು, ನಟನೆ, ನಿರ್ದೇಶನ, ನೃತ್ಯ, ಯೋಗ, ಕಿಕ್ ಬಾಕ್ಸಿಂಗ್, ವಿ.ಎಫ್.ಎಕ್ಸ್, ಸಂಕಲನ ಸೇರಿದಂತೆ ವಿವಿಧ ತರಬೇತಿಗಳು ಶುರುವಾಗಲಿದೆ. ಮೂರು ತಿಂಗಳ ಕೋರ್ಸ್ ಇದಾಗಿದ್ದು, ಪ್ರತಿಯೊಂದು ಬ್ಯಾಚ್ ಮುಗಿದ ಬಳಿಕ ನಾಟಕ ಹಾಗೂ ಕಿರುಚಿತ್ರದಲ್ಲಿ ನಟಿಸಿ, ನಿರ್ದೇಶಿಸುವ ಅವಕಾಶ ಪ್ರತಿಯೊಬ್ಬ ವಿದ್ಯಾರ್ಥಿಗೂ ಕಲ್ಪಿಸಲಾಗಿದೆ. ಇದರ ಜೊತೆಗೆ ವೈಯಕ್ತಿಕ ತರಬೇತಿ ಸಹ ನೀಡಲಾಗುವುದು ಎಂದು ಸಂಸ್ಥಾಪಕ ಗುರು ದೇಶಪಾಂಡೆ ತಿಳಿಸಿದ್ದಾರೆ. ಅಲ್ಲದೇ ಮೂರು ಮತ್ತು ಆರು ತಿಂಗಳ ಅಭಿನಯ, ಮೂರು ತಿಂಗಳ ಪ್ರತ್ಯೇಕವಾದ ಚಿತ್ರ ನಿರ್ದೇಶನ, ಸಂಕಲನ, ನಿರೂಪಣೆ ಹಾಗೂ ಸುದ್ದಿ ಓದುವುದು ಮತ್ತು ವೈಯಕ್ತಿಕ ತರಬೇತಿಯನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.


ಇನ್ನು ಇದೇ ಸಂಸ್ಥೆಯಿಂದ ಈಗಾಗಲೇ ಪ್ರಜ್ವಲ್ ದೇವರಾಜ್ ಅಭಿನಯದ ’ಜಂಟಲ್‌ಮನ್’, ಅಜೇಯ್‌ರಾವ್ ಮತ್ತು ಯೋಗಿ ಅಭಿನಯದ ಹೊಸ ಚಿತ್ರಗಳು ನಿರ್ಮಾಣವಾಗುತ್ತಿದೆ. ವಿಶೇಷವೆಂದರೆ ಗುರು ದೇಶಪಾಂಡೆ ಅವರೊಂದಿಗೆ ಕೆಲಸ ಮಾಡಿ ಅನುಭವ ಹೊಂದಿದ್ದ ಯುವ ನಿರ್ದೇಶಕರಿಗೆ ಅವಕಾಶ ನೀಡಲಾಗಿದೆ. ಇನ್ನು ಈ ಸಂಸ್ಥೆಯಲ್ಲಿ ತರಬೇತಿ ಪಡೆದು ಉತ್ತೀರ್ಣರಾದವರಿಗೆ ಗುರು ದೇಶಪಾಂಡೆ ಅವರ ಪ್ರೊಡಕ್ಷನ್ಸ್ ಅಡಿ ನಿರ್ಮಾಣವಾಗುವ ಸಿನಿಮಾಗಳಲ್ಲಿ ಕಾರ್ಯನಿರ್ವಹಿಸುವ ಅದೃಷ್ಟ ಒದಗಲಿದೆ.


ಹೆಚ್ಚಿನ ಮಾಹಿತಿಗಾಗಿ www.gacademy.co ವೆಬ್‌ಸೈಟ್ ಅಥವಾ 99007 77222/ 99001 95195 ನಂಬರನ್ನು ಸಂಪರ್ಕಿಸಬಹುದು.

CG ARUN

ದರ್ಶನ್ ಮೆಚ್ಚಿದ ಟಕ್ಕರ್ ಟೀಸರ್!

Previous article

ಕಿಚ್ಚ ಕೊಟ್ಟ ಸಾಥ್ ಮತ್ತು ಕೃಷ್ಣ ಕನಸು!

Next article

You may also like

Comments

Leave a reply

Your email address will not be published. Required fields are marked *