ಬಹಳಷ್ಟು ಸಿನಿಮಾಗಳಲ್ಲಿ ನೆಗೆಟೀವ್ ರೋಲ್ ಗಳಲ್ಲಿ ಕಾಣಿಸಿಕೊಳ್ಳುವ ಅನೇಕರು ಅದೃಷ್ಟ ಖುಲಾಯಿಸಿ ಅಪ್ ಕಮಿಂಗ್ ಸಿನಿಮಾಗಳಲ್ಲಿ ನಾಯಕನಾಗಿ, ಪ್ರಧಾನ ಪಾತ್ರಗಳಲ್ಲಿ ನಟಿಸುವುದುಂಟು. ಅಂತಹ ನಟರ ಪೈಕಿ ವರ್ಧನ್ ತೀರ್ಥಹಳ್ಳಿ ಪ್ರಮುಖರಾಗಿದ್ದಾರೆ. ಸದ್ಯಕ್ಕೆ ಮೊದಲ ಬಾರಿಗೆ ನಾಯಕ ನಟರಾಗಿರುವ ಅವರು ಹಫ್ತಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಮುಹೂರ್ತ ಆಚರಿಸಿಕೊಂಡಿದ್ದ ಚಿತ್ರತಂಡ ಸದ್ಯ ಶೂಟಿಂಗ್ ಕಂಪ್ಲೀಟ್ ಮಾಡಿ ರಿಲೀಸ್ ಗೆ ರೆಡಿಯಾಗಿದೆ.
ಹಫ್ತಾ ಸಿನಿಮಾವನ್ನು ಪ್ರಕಾಶ್ ಹೆಬ್ಬಾಳ್ ನಿರ್ದೇಶನ ಮಾಡುತ್ತಿದ್ದಾರೆ. ವರ್ಧನ್ ತೀರ್ಥ ಹಳ್ಳಿ, ರಾಘವ್ ನಾಗ್ ಚಿತ್ರದಲ್ಲಿ ನಾಯಕನಾಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇನ್ನು ಹಫ್ತಾ ಚಿತ್ರಕ್ಕೆ ಸೆನ್ಸಾರ್ ಯು/ಎ ಸರ್ಟಿಫಿಕೇಟನ್ನು ನೀಡಿ ಚಿತ್ರತಂಡಕ್ಕೆ ಗುಡ್ ನ್ಯೂಸ್ ನೀಡಿದೆ. ಹಫ್ತಾ ಸಿನಿಮಾದ ಟೀಸರ್ ನ್ನು ಇತ್ತೀಚಿಗೆ ಶ್ರೀಮುರಳಿ ರಿಲೀಸ್ ಮಾಡಿರುವುದು ಹಫ್ತಾ ಚಿತ್ರತಂಡ ಹಿಗ್ಗುವಂತಾಗಿದೆ. ಸಿನಿಮಾದಲ್ಲಿ ಬಿಂಬ ಶ್ರೀನಿವಾಸ್, ಸೌಮ್ಯ ಇಬ್ಬರು ನಾಯಕಿಯರಿದ್ದಾರೆ. ಮೈತ್ರಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಮಂಜುನಾಥ ಬಂಡವಾಳ ಹೂಡಿದ್ದಾರೆ. ಸೂರಿ ಸಿನಿಟೆಕ್ ಕ್ಯಾಮೆರಾ ಕೆಲಸಗಳನ್ನು, ವಿಜಿ ಯಾಡ್ಲೀನಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಟೀಸರ್ ಮತ್ತು ಟೈಟಲ್ ಮೂಲಕ ಸದ್ದು ಮಾಡುತ್ತಿರುವ ಹಫ್ತಾ ಚಿತ್ರತಂಡ ಕಲೆಕ್ಷನ್ ಗೆ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.
No Comment! Be the first one.