ಈಗಾಗಲೇ ವಿಭಿನ್ನ ಪೋಸ್ಟರ್ ಮತ್ತು ಆಡಿಯೋನಿಂದ ಗಮನಸೆಳೆದಿರುವ ಸಿನಿಮಾ ಹ್ಯಾಂಗೋವರ್. ಚಿತ್ರದ ಬಿಡುಗಡೆಗೆ ದಿನಾಂಕ ಅನೌನ್ಸ್ ಆಗಿದ್ದು, ಸದ್ಯ ಚಿತ್ರದ ಟ್ರೇಲರ್ ರಿಲೀಸ್ ಹೊರಬಿದ್ದಿದೆ. ಹ್ಯಾಂಗೋವರ್ ಇದೇ ತಿಂಗಳ 14ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.
ಮೂವರು ಹುಡುಗರು ಮತ್ತು ಮೂವರು ಹುಡುಗಿಯರ ಸುತ್ತ ಸುತ್ತುವ ಈ ಚಿತ್ರದ ಕಥೆಯಲ್ಲಿ ಒಂದು ಕೊಲೆ ನಡೆಯುತ್ತದೆ. ಈ ಕೊಲೆಯ ಸುತ್ತವೇ ಸಿನಿಮಾ ಸುತ್ತಲಿದ್ದು, ಅದನ್ನು ನಿರ್ದೇಶಕರು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಕಥೆ ಹೆಣೆದಿದ್ದಾರೆ. ಈ ಸಿನಿಮಾವನ್ನು ವಿಠಲ್ ಭಟ್ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಖಡಕ್ ಆಫೀಸರ್ ಪಾತ್ರದಲ್ಲಿ ನಟ ಶಫಿ ಕಾಣಿಸಿಕೊಂಡಿದ್ದು, ತಾರಾಬಳಗದಲ್ಲಿ ಭರತ್ ರಾಜ್ , ಚಿರಾಗ್, ಮಹತಿ, ಸಹನಾ, ನಂದಿನಿ ನಟರಾಜ್ ಸೇರಿದಂತೆ, ‘ನೀನಾಸಂ’ ಅಶ್ವಥ್, ಯತಿರಾಜ್, ಸ್ಪಂದನಾ, ಸೇರಿದಂತೆ ಅನೇಕರು ನಟಿಸಿದ್ದಾರೆ. ಐಟಂ ಹಾಡೊಂದಿಗೆ ನೀತು ಶೆಟ್ಟಿ ಮೈ ಬಳುಕಿಸಿದ್ದಾರೆ.
***
No Comment! Be the first one.