ಸದ್ಯ ಸಿನಿ ರಸಿಕರು ಹ್ಯಾಂಗೋವರ್ ಆಗುವ ಟೈಮ್ ಬರಲಿದೆ. ಮುಂದಿನ ತಿಂಗಳು ಹೊಸ ಸಿನಿಮಾ ಹ್ಯಾಂಗೋವರ್ ಥಿಯೇಟರ್ ನತ್ತ ದಾಂಗುಡಿ ಇಡಲಿದೆ. ಈ ಸಮಾಜ ಮತ್ತು ತಂದೆ-ತಾಯಿ ನಮಗೆ ಕೊಟ್ಟ ಫ್ರೀಡಮ್ಮನ್ನು ದುರುಪಯೋಗ ಪಡಿಸಿಕೊಳ್ಳದೇ ಯೌವ್ವನವನ್ನು ಜವಾಬ್ದಾರಿಯುತವಾಗಿ ಅನುಭವಿಸಿ ಎಂದು ಯುವಕರಿಗೆ ಒಂದು ಚಿಕ್ಕ ಸಂದೇಶದೊಂದಿಗೆ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರವಾಗಿ ಮೂಡಿಬರಲಿದೆ ಹ್ಯಾಂಗೋವರ್.
ಇಲ್ಲಿ ಮೂವರು ಹುಡುಗರು ಮತ್ತು ಮೂವರು ಹುಡುಗಿಯರು ಒಂದು ಕಾಕ್ಟೇಲ್ ಪಾರ್ಟಿಯೊಂದನ್ನು ಮುಗಿಸಿ ನಾಯಕನ ಫಾಮ್ ಹೌಸಿಗೆ ಬಂದು ಮಲಗುವರು, ಬೆಳಗ್ಗೆ ಎದ್ದಾಗ ಒಂದು ಹುಡುಗಿಯ ಕೊಲೆಯಾಗಿರುವುದು. ಈ ಕೊಲೆಯ ಸುತ್ತ ಹ್ಯಾಂಗೋವರ್ ತಿರುಗುತ್ತದೆ. ಕುಡಿದ ಹ್ಯಾಂಗೋವರಲ್ಲಿ ಮಾಡಿದ ಕಿತಾಪತಿಯನ್ನು ರಿವರ್ಸ್ ಸ್ರ್ಕೀನ್ ಪ್ಲೇಯಲ್ಲಿ ನಿರ್ದೆಶಕ ವಿಠ್ಠಲ್ ಭಟ್ ಹೇಳಹೊರಟಿದ್ದಾರೆ. ಚಿತ್ರದ ಕೊನೆಯ ಹಂತದವರೆಗೂ ಯಾರು ಕೊಲೆ ಮಾಡಿರಬಹುದು? ಎಂಬ ಕುತೂಹಲವು ಚಿತ್ರ ವೀಕ್ಷಕರಿಗೆ ಒಂದು ಹೊಸಾ ಅನುಭವ ನೀಡುತ್ತದೆ ಎಂಬುದು ಚಿತ್ರತಂಡದ ಭರವಸೆ.
ಇನ್ನು ಭರತ್, ರಾಜ್, ಚಿರಾಗ್, ಮಹತಿ ಭಿಕ್ಷು, ಸಹನ್ ಮೊನ್ನಮ್ಮ, ನಂದಿನಿ ನಟರಾಜ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದು ಶಫಿ, ಅಶ್ವಥ್ ನೀನಾಸಂ, ಕೆ.ಯಸ್.ಶ್ರೀಧರ್, ಯತಿರಾಜ್, ಕೈಲಾಶ್ ಇನ್ನುಳಿದ ಪಾತ್ರಗಳನ್ನು ಅಭಿನಯಿಸಿದ್ದಾರೆ. ಸುಮಾರು 32 ದಿನಗಳ ಚಿತ್ರೀಕರಣ ಮೈಸೂರಿನ ಸುತ್ತ ಮುತ್ತಲು ಮತ್ತು ಬೆಂಗಳೂರು-ಊಟಿಯಲ್ಲಿ ನಡೆದಿದೆ. ರಮಣೀ ರೀಲ್ಸ್ ಸಂಸ್ಥೆಯ ಮೂಲಕ ರಾಕೇಶ್ ಅವರು ನಿರ್ಮಾಣ ಮಾಡಿದ್ದು ಗಣೇಶ್ ರಾಣಿಬೆನ್ನೂರು ಅವರ ಸಂಭಾಷಣೆ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.
No Comment! Be the first one.