ಸದ್ಯ ಕನ್ನಡ ಚಿತ್ರಂಗದ ಬ್ಯುಸಿ ನಾಯಕಿಯ ಪಟ್ಟಿಯಲ್ಲಿ ಹರಿಪ್ರಿಯಾ ಮೊದಲ ಸ್ಥಾನದಲ್ಲಿದ್ದಾರೆ. ಪ್ರಾರಂಭದಲ್ಲಿ ನಟನೆ ಅಷ್ಟೇನೂ ಕೈ ಹಿಡಿದ ಹರಿಪ್ರಿಯಾಗೆ ಆಕೆಯ ಇನ್ ವಾಲ್ವ್ ಮೆಂಟ್, ನಟನೆಯಲ್ಲಿ ತೊಡಗಿಸುವಿಕೆ, ಛಲ, ಶ್ರಮ ಆಕೆಯನ್ನು ಉನ್ನತಮಟ್ಟಕ್ಕೇರುವಂತೆ ಮಾಡಿತು. ಉಗ್ರಂ ಮೂಲಕ ತನ್ನ ಹಣೆಬರಹವನ್ನು ಬದಲಿಸಿಕೊಂಡ ಹರಿಪ್ರಿಯಾಗೆ ಅದಾದ ಮೇಲೆ ಮುಟ್ಟಿದೆಲ್ಲವೂ ಚಿನ್ನವೇ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡ ಹರಿಪ್ರಿಯಾ ಸದ್ಯ ಕಾಲ್ ಶೀಟ್ ಖಾಲಿ ಇಲ್ಲದೇ ಬಹುತೇಕ ನಿರ್ದೇಶಕ, ನಿರ್ಮಾಪಕರಿಗೆ ನಿರಾಸೆಗೊಳಿಸುವ ಮಟ್ಟಿಗೆ ಸಕ್ಸಸ್ ರೇಸ್ ನಲ್ಲಿದ್ದಾರೆ.
ನಾಯಕಿಯಾಗಿ ಗುರುತಿಸಿಕೊಂಡ ಹರಿಪ್ರಿಯಾಗೆ ಪ್ರಬುದ್ಧ ನಟಿಯಾಗಬೇಕೆಂಬ ಬಯಕೆ. ಕೇವಲ ನಿಗದಿತ ಪಾತ್ರಗಳಿಗೆ ನಟನೆ ಎಂಬುದು ಸೀಮಿತವಾಗಿರದೇ ಎಲ್ಲ ರೀತಿಯ ಪಾತ್ರಗಳನ್ನು ಮಾಡಬೇಕೆಂಬ ಆಸ್ಥೆಯಿಂದ ಮೊದಲಿಗೆ ನೀರ್ ದೋಸೆ ಚಿತ್ರದಲ್ಲಿ ಸವಾಲಿನ ಪಾತ್ರದಲ್ಲಿ ಕಾಣಿಸಿಕೊಂಡರು. ಸದ್ಯ ಸೂಜಿದಾರ ಸಿನಿಮಾದಲ್ಲಿಯೂ ಅಂತಹುದೇ ಸವಾಲಿನ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಮೈ ಮನ ಫೋಣಿಸಲು ರೆಡಿಯಾಗಿರುವ ಸೂಜಿದಾರದಲ್ಲೂ ಕಲ್ಪನಾ, ಆರತಿಯಂತಹ ಅಪ್ಪಟ ಕನ್ನಡ ಸೊಗಡಿನ ನಾಯಕಿಯ ನಿರೀಕ್ಷೆಯಲ್ಲಿ ಹರಿಪ್ರಿಯಾ ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯ ಹರಿಪ್ರಿಯಾ ಡಾಟರ್ ಆಫ್ ಪಾರ್ವತಮ್ಮ, ಕಥಾ ಸಂಗಮ, ಕನ್ನಡ್ ಗೊತ್ತಿಲ್ಲ, ಕುರುಕ್ಷೇತ್ರ, ಬಿಚ್ಚುಗತ್ತಿ, ಎಲ್ಲಿದ್ದೆ ಇಲ್ಲಿ ತನಕ ಮುಂತಾದ ಸಾಲು ಸಾಲುಗಳು ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹರಿಪ್ರಿಯರವರ ಹೆಬ್ಬಯಕೆ ನನಸಾಗಿ ಕನ್ನಡದ ಮತ್ತೊಬ್ಬ ಅಭಿನೇತ್ರಿಯಾಗಲೆಂದು ಹಾರೈಸೋಣ.