ಈಗೀಗ ಸ್ಯಾಂಡಲ್ ವುಡ್ ನಲ್ಲಿ ಡಿಫರೆಂಟ್ ಶೇಡ್ ನ ಪಾತ್ರಗಳನ್ನೇ ಒಪ್ಪಿಕೊಂಡು ಹವಾ ಕ್ರಿಯೇಟ್ ಮಾಡುತ್ತಿರುವ ಉಗ್ರಂ ಬೆಡಗಿ ಹರಿಪ್ರಿಯಾ ಇತ್ತೀಚಿಗಷ್ಟೇ ಜಯತೀರ್ಥ ಅವರ ಬೆಲ್ ಬಾಟಂ ಚಿತ್ರದಲ್ಲಿ ಕಳ್ಳಬಟ್ಟಿ ಕುಸುಮಳಾಗಿ ಎಲ್ಲರ ಹಾರ್ಟ್ ಗೆದ್ದಿದ್ದಾರೆ. ಸದ್ಯ ಸೂಜಿದಾರದಲ್ಲಿ ಪಕ್ಕಾ ಗೃಹಿಣಿಯಾಗಿ ಮಿಂಚುತ್ತಿದ್ದಾರೆ. ಇದೀಗ ಮೇ 24ಕ್ಕೆ ಡಾಟರ್ ಆಫ್ ಪಾರ್ವತಮ್ಮ ಅವರ ಮುದ್ದಿನ ಮಗಳಾಗಿ ತೆರೆ ಮೇರೆ ಬರೋಕೆ ರೆಡಿಯಾಗುತ್ತಿದ್ದಾರೆ. ಈ ಸಿನಿಮಾವನ್ನು ಶಂಕರ್ ಜೆ ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಸಿನಿಮಾದ ಟೀಸರ್ ಹಾಗೂ ಹಾಡುಗಳು ನೋಡುಗರಲ್ಲಿ ಭರವಸೆ ಮೂಡಿಸಿದೆ. ಇಂದು ಸಿನಿಮಾದ ಆಡಿಯೋ ಮತ್ತು ಟ್ರೇಲರ್ ರಿಲೀಸ್ ಆಗಿದೆ. ಚಿತ್ರದಲ್ಲಿ ಅಮ್ಮನ ಪಾತ್ರದಲ್ಲಿ ಸುಮಲತಾ ಅಂಬರೀಶ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಇದೊಂದು ಅಮ್ಮ-ಮಗಳ ಬಾಂಧವ್ಯದ ಕಥೆಯ ಜೊತೆಗೆ ಕ್ರೈಂ ಸುತ್ತ ನಡೆಯುವ ಥ್ರಿಲ್ಲರ್ ಎಳೆಯನ್ನು ಹೊಂದಿರೋ ಚಿತ್ರವಾಗಿದೆ. ಚಿತ್ರದಲ್ಲಿ ವೈದೇಹಿ ಅನ್ನೋ ರೋಲ್ನಲ್ಲಿ ತನಿಖಾಧಿಕಾರಿಯಾಗಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ ಹರಿಪ್ರಿಯಾರ 25ನೇ ಸಿನಿಮಾ ಕೂಡ ಇದಾಗಿದ್ದು ಚಿತ್ರದ ನಿರೀಕ್ಷೆ ಹೆಚ್ಚಿಸಿದೆ. ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಸ್ಪರ್ಧಿಸಿದ್ದ ಹಿನ್ನೆಲೆ ಡಾಟರ್ ಆಫ್ ಪಾರ್ವತಮ್ಮ ಸಿನಿಮಾದ ರಿಲೀಸ್ ತಡವಾಗಿತ್ತು.
Comments