ಚಂದನವನದಲ್ಲಿ ಸದ್ಯ ಬೇಡಿಕೆ ಉಳಿಸಿಕೊಂಡಿರುವ ಪ್ರತಿಭಾವಂತ ನಟಿಯರ ಪೈಕಿ ಹರಿಪ್ರಿಯಾ ಅಗ್ರ ಸ್ಥಾನದಲ್ಲಿದ್ದಾರೆ. ಒಂದಾದ ಮೇಲೊಂದರಂತೆ ಒಂದು ಸಿನಿಮಾ ಮಾಡುತ್ತಲೇ ಬ್ಯುಸಿಯಾಗಿದ್ದ ಹರಿಪ್ರಿಯಾ, ನಟನೆಗೆ ಬ್ರೇಕ್ ತೆಗೆದುಕೊಂಡು ಬಾಲಿಯಲ್ಲಿ ಜಾಲಿ ಮೂಡ್ ನಲ್ಲಿರುವುದು ಈಗಾಗಲೇ ಎಲ್ಲರಿಗೂ ತಿಳಿದ ವಿಚಾರವೇ. ಈ ಮಧ್ಯೆ ಹರಿಪ್ರಿಯಾ ಬಾಲಿಯಲ್ಲಿ ಟ್ಯಾಟು ಹಾಕಿಸಿಕೊಂಡಿರುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

https://www.instagram.com/p/B0c5IwZBu4y/?utm_source=ig_web_copy_link

ಹೌದು, ಇದೀಗ ಹರಿಪ್ರಿಯಾ ತಮ್ಮ ಟ್ಯಾಟೂ ಮೂಲಕ ಬಹಳಷ್ಟು ಸೌಂಡ್ ಮಾಡುತ್ತಿದ್ದಾರೆ. “ನಾನು ಎರಡನೇ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದೇನೆ. ನಾನು ಯಾವ ಟ್ಯಾಟು ಹಾಕಿಸಿಕೊಳ್ಳುತ್ತಿದ್ದೇನೆ ಎಂದು ಗೆಸ್ ಮಾಡಿ” ಎಂದು ಟ್ವಿಟರ್ ನಲ್ಲಿ ಹರಿಪ್ರಿಯಾ ಟ್ವೀಟ್ ಕೂಡ ಮಾಡಿದ್ದಾರೆ. ಅಂದಹಾಗೆ ಅವರು 25 ಸಿನಿಮಾಗಳಲ್ಲಿ ನಟಿಸಿದ್ದು, ‘ಬೆಲ್ ಬಾಟಂ’ ಚಿತ್ರದ ಸಕ್ಸಸ್ ಬಳಿಕ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಅವರನ್ನು ಅರಸಿ ಬರುತ್ತಿವೆ. ಸದ್ಯ ‘ಕುರುಕ್ಷೇತ್ರ’ ಚಿತ್ರದ ಬಿಡುಗಡೆಯ ಸಿದ್ದತೆಯಲ್ಲಿರುವ ಹರಿಪ್ರಿಯಾ, ‘ಬಿಚ್ಚುಗತ್ತಿ’, ‘ಎಲ್ಲಿದ್ದೆ ಇಲ್ಲಿ ತನಕ’, ‘ಕನ್ನಡ್ ಗೊತ್ತಿಲ್ಲ’, ‘ಕಥಾಸಂಗಮ’ ಚಿತ್ರಗಳ ರಿಲೀಸ್‌ ಗೆ ಕಾದಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಸೈಮಾ ಕಿರು ಚಿತ್ರೋತ್ಸವದಲ್ಲಿ ವಿದಾತ್ರು ಕಿರುಚಿತ್ರಕ್ಕೆ ಪ್ರಶಸ್ತಿ!

Previous article

ಹಿರಿಯ ನಟ ಶ್ರೀನಿವಾಸ್ ಮೂರ್ತಿಗೆ ಡಾಕ್ಟರೇಟ್!

Next article

You may also like

Comments

Leave a reply

Your email address will not be published. Required fields are marked *