ಹರಿಪ್ರಿಯಾ ಐತಿಹಾಸಿಕ ಚಿತ್ರವೊಂದರ ಮೂಲಕ ಬೇರೆಯದ್ದೇ ಥರದ ಪಾತ್ರದಲ್ಲಿ ಮಿಂಚಲು ಉತಯಾರಾಗಿದ್ದಾರೆ. ಈ ವರೆಗೂ ಇಮೇಜಿನ ಹಂಗಿಗೆ ಬೀಳದೆ ಭಿನ್ನ ಪಾತ್ರಗಳನ್ನೇ ಧ್ಯಾನಿಸುತ್ತಾ ಬಂದಿರುವ ಹರಿಪ್ರಿಯಾ ಪಾಲಿಗೆ ಈಗ ಸಿಕ್ಕಿರೋದು ನಿಜಕ್ಕೂ ಬಂಪರ್ ಅವಕಾಶ!
ನಾದಬ್ರಹ್ಮ ಹಂಸಲೇಖ ಬಿಚ್ಚುಗತ್ತಿ ಭರಮಣ್ಣ ನಾಯಕ ಚಿತ್ರವನ್ನು ನಿರ್ದೇಶಲನ ಮಾಡಲಿಯದ್ದಾರೆಂಬ ಸುದ್ದಿಯಾಗಿತ್ತಲ್ಲಾ? ಈ ಚಿತ್ರಕ್ಕೆ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ನಾಯಕನಾಗಿಯೂ ನಿಕ್ಕಿಯಾಗಿದ್ದರು. ಬರಮಣ್ಣ ನಾಯಕನ ಪಾತ್ರದಲ್ಲಿ ನಟಿಸುತ್ತಿರುವ ರಾಜ್ವರ್ಧನ್ಗೆ ನಾಯಕಿಯಾಗಿ ಹರಿಪ್ರಿಯಾ ಆಯ್ಕೆಯಾಗಿದ್ದಾರೆ.
ಬಿಚ್ಚುಗತ್ತಿ ಎಂಬ ಶೀರ್ಷಿಕೆ ಹೊಂದಿರುವ ಈ ಚಿತ್ರ ಬಿ ಎಲ್ ವೇಣು ಅವರ ರಾಜಾ ಭರಮಣ್ಣ ನಾಯಕ ಎಂಬ ಕಾದಂಬರಿ ಆಧಾರಿತ ಚಿತ್ರ. ಇದನ್ನು ಚಿತ್ರವಾಗಿಸಬೇಕೆಂದು ಹಲವಾರು ವರ್ಷಘಗಳಿಂದ ಅಂದುಕೊಂಡಿದ್ದ ಹಂಸಲೇಖಾ ಅದಕ್ಕೆ ಸಂಪೂರ್ಣ ತಯಾರಾಗಿದ್ದಾರೆ. ಈ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕಪೂ ಹೆಚ್ಚಿನ ಮಹತ್ವ ಇರೋದರಿಂದ ಅದಕ್ಕೆ ತಕ್ಕುದಾದ ನಾಯಕಿಯ ಹುಡುಕಾಟ ಚಾಲ್ತಿಯಲ್ಲಿತ್ತು. ಹರಿಪ್ರಿಯಾ ಆಯ್ಕೆಯ ಮೂಲಕ ಅದು ಸಮಾಪ್ತಿಗೊಂಡಿದೆ. ರಾಜ್ವರ್ಧನ್ ಈ ಪಾತ್ರಕ್ಕಾಗಿ ತರಬೇತಿ ಪಡೆಯುತ್ತಿದ್ದಾರೆ. ಹರಿಪ್ರಿಯಾ ಅವರಿಗೂ ಅಗತ್ಯ ತರಬೇತಿ ಕೊಟ್ಟಾದ ನಂತರ ಚಿತ್ರೀಕರಣ ಶುರುವಾಗಲಿದೆ.
#
No Comment! Be the first one.