ಎ. ಹರ್ಷ… ಯವ ಮನಸುಗಳಿಗೆ ಹತ್ತಿರಾಗುತ್ತಲೇ ಕುಟುಂಬ ಸಮೇತರಾಗಿ ನೋಡುವಂಥಾ ಹಿಟ್ ಚಿತ್ರಗಳನ್ನು ಕೊಟ್ಟಿರೋ ನಿರ್ದೇಶಕ. ಇದುವರೆಗೂ ಒಂದಷ್ಟು ಸ್ಟಾರ್ ನಟರ ಯಶಸ್ವೀ ಚಿತ್ರಗಳನ್ನ ನಿರ್ದೇಶನ ಮಾಡಿರೋ ಹರ್ಷ ಇದೀಗ ಸೀತಾರಾಮ ಕಲ್ಯಾಣವನ್ನ ರೂಪಿಸಿದ್ದಾರೆ. ಇದೇ ಮೊದಲ ಬಾರಿ ನಿಖಿಲ್ ಮತ್ತು ಹರ್ಷ ಕಾಂಬಿನೇಷನ್ನಿನ ಈ ಚಿತ್ರ ತಯಾರಾಗಿ ಬಿಡುಗಡೆಗೆ ಸಜ್ಜುಗೊಂಡಿದೆ.
ಇದೇ ತಿಂಗಳ ೨೫ರಂದು ಸೀತಾರಾಮ ಕಲ್ಯಾಣ ಬಿಡುಗಡೆಯಾಗಲಿದೆ. ಪ್ರೇಕ್ಷಕರ ನಾಡಿ ಮಿಡಿತ ಮತ್ತು ಯಾವ ನಟರಿಗೆ ಎಂಥಾ ಕಥೆ ಬೇಕೆಂಬುದನ್ನು ಚೆನ್ನಾಗಿಯೇ ಅರ್ಥ ಮಾಡಿಕೊಳ್ಳೋ ಕಲೆ ಹರ್ಷ ಹರ್ಷ ಅವರಿಗೆ ಕರತಲಾಮಲಕ. ಅಂಥಾ ಸೂಕ್ಷ್ಮವಂತಿಕೆಯಿಂದಲೇ ಹರ್ಷ ಈ ಚಿತ್ರವನ್ನ ರೂಪಿಸಿದ್ದಾರೆ.
ಹರ್ಷ ಮತ್ತು ನಿಖಿಲ್ ಭೇಟಿ ಸಂಭವಿಸಿದ್ದು ಜಾಗ್ವಾರ್ ಸಿನಿಮಾ ಸಂದರ್ಭದಲ್ಲಿ. ಅದಾಗಲೇ ಜಾಗ್ವಾರ್ಗಾಗಿ ನಿಖಿಲ್ ತಯಾರಾಗಿದ್ದ ರೀತಿಯನ್ನ ಕಂಡು ಹರ್ಷ ಖುಷಿಗೊಂಡಿದ್ದರಂತೆ. ಇದೇ ಹೊತ್ತಲ್ಲಿ ಹರ್ಷ ಅವ್ರನ್ನ ಭೇಟಿಯಾಗಿದ್ದ ನಿಖಿಲ್, ಅವರೊಂದಿಗೆ ಒಂದು ಸಿನಿಮಾ ಮಾಡೋ ಇಂಗಿತ ವ್ಯಕ್ತ ಪಡಿಸಿದ್ದರಂತೆ. ಸೀತಾರಾಮ ಕಲ್ಯಾಣಕ್ಕೆ ಮುಹೂರ್ತವಾಗಿದ್ದು ಆ ಕ್ಷಣದಲ್ಲಿಯೇ. ಆಗಿನಿಂದಲೇ ಈ ಕಥೆಗಾಗಿ ತಯಾರಿ ನಡೆಸಿದ್ದ ಹರ್ಷ, ಅದಾದ ನಂತರವೂ ಆರೇಳು ತಿಂಗಳು ಕಥೆಯನ್ನ ಒಪ್ಪ ಓರಣಗೊಳಿಸಲಾಗಿಯೇ ಮೀಸಲಿಟ್ಟಿದ್ದರಂತೆ.
ಆ ಬಳಿಕ ನಿಖಿಲ್ ಕೂಡಾ ಈ ಕಥೆಗೆ, ಪಾತ್ರಕ್ಕೆ ಬೇಕಾದ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದರು. ಮೊದಲ ಚಿಒತ್ರ ಜಾಗ್ವಾರ್ನಲ್ಲಿಯೇ ಪ್ರೇಕ್ಷಕರನ್ನ ಆವರಿಸಿಕೊಳ್ಳುವಂಥಾ ನಟನೆ ಕೊಟ್ಟಿದ್ದವರು ನಿಖಿಲ್. ನಿರ್ದೇಶಕ ಹರ್ಷ ಈ ಚಿನಿಮಾಕ್ಕೆ ನಿಖಿಲ್ರನ್ನು ಮತ್ತಷ್ಟು ಒಗ್ಗಿಸಿಕೊಂಡಿದ್ದಾರಂತೆ. ಒಟ್ಟಾರೆಯಾಗಿ ಸೀತಾರಾಮ ಕಲ್ಯಾಣ ಹರ್ಷ ಪೌರೋಹಿತ್ಯದಲ್ಲಿ ಅದ್ದೂರಿಯಾಗಿ ಮೂಡಿ ಬಂದಿದೆ. ಇದೇ ಇಪ್ಪತೈದರಂದು ಕನ್ನಡಿಗರೆಲ್ಲ ಸೀತಾರಾಮನ ಕಲ್ಯಾಣವನ್ನ ಕಣ್ತುಂಬಿಕೊಳ್ಳಲು ರೆಡಿಯಾಗಿದ್ದಾರೆ.
#
No Comment! Be the first one.