ಈಗೀಗ ಮಾಡುತ್ತಿರುವ ಬಹುತೇಕ ಸಿನಿಮಾಗಳಲ್ಲಿ ಅಷ್ಟೇನು ಯಶ ಕಾಣದ ಸೋತು ಸುಣ್ಣವಾಗಿರುವ ಹರ್ಷ ಸೀತಾರಾಮ ಕಲ್ಯಾಣದಲ್ಲಿಯೂ ಅದೇ ಸೋಲಿನ ರುಚಿಯನ್ನು ಬಯಸದೇ ಪಡೆದಿರುವುದು ದುರ್ಧೈವ. ಸೀತಾರಾಮ ಕಲ್ಯಾಣದ ನಂತರ ಹರ್ಷ ಮತ್ತಾವ ಸಿನಿಮಾ ಮಾಡುವ ಪ್ಲ್ಯಾನ್ ನಲ್ಲಿದ್ದಾರೆ ಎಂಬುದಕ್ಕೆ ಅವರೇ ಸ್ವತಃ ಶಿವಣ್ಣನ ಜತೆಗೂಡಿ ಮೈ ನೇಮ್ ಈಸ್ ಆಂಜಿ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಭಜರಂಗಿ, ವಜ್ರಕಾಯ ಸಿನಿಮಾದ ನಂತರ ಹರ್ಷ ಮಾಸ್ಟರ್ ಪುನಃ ದ್ರೋಣನ ಜತೆಯಾಗಿದ್ದಾರೆ. ಸದ್ಯ ಸಿನಿಮಾದಲ್ಲೊಂದು ಬದಲಾವಣೆಯಾಗಲಿದ್ದು, ಹರ್ಷ ಮಾಸ್ಟರ್ ಚಿತ್ರದ ಟೈಟಲ್ ನ್ನೇ ಚೇಂಜ್ ಮಾಡಲು ನಿರ್ಧರಿಸಿದ್ದಾರಂತೆ. ಹೌದು ಮೈ ನೇಮ್ ಆಂಜಿ ಎಂಬ ಟೈಟಲ್ ಬದಲಾಗಿ ಭಜರಂಗಿ 2 ಎಂದು ಹೆಸರಿಡಲು ನಿರ್ಧರಿಸುವುದು ವಿಶೇಷವಾಗಿದೆ. ಹಾಗಂತ ಮೊದಲಿನ ಭಜರಂಗಿಗೂ ಭಜರಂಗಿ 2 ಚಿತ್ರಕ್ಕೂ ಎಲ್ಲಿಂದೆಲ್ಲಿಯ ಸಂಬಂಧವೂ ಇಲ್ಲವಂತೆ. ಕಥೆ ಡಿಮ್ಯಾಂಡ್ ಮಾಡಿದ್ದರಿಂದ ಈ ಟೈಟಲ್ ನೀಡಲಾಗಿದೆ ಎನ್ನುತ್ತಾರೆ ಹರ್ಷ ಮಾಸ್ಟರ್.
ಈಗಾಗಲೇ ಭಜರಂಗಿ 2 ಚಿತ್ರದ ಫ್ರೀ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ಹರ್ಷ ಮಾಸ್ಟರ್ ಆ ಕೆಲಸಗಳು ಮುಗಿಯುತ್ತಿದ್ದಂತೆ ಶೂಟಿಂಗ್ ಪ್ರಾರಂಭಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇನ್ನು ಭಜರಂಗಿ 2 ಸಿನಿಮಾವನ್ನು ಜಯಣ್ಣ ಮತ್ತು ಭೋಗೇಂದ್ರ ಜಂಟಿಯಾಗಿ ನಿರ್ಮಾಣ ಮಾಡಲಿದ್ದಾರೆ. ಶಿವಣ್ಣನಿಗೆ ಜೋಡಿಯಾಗಿ ಭಾವನಾ ಮೆನನ್ ನಟಿಸಲಿದ್ದಾರೆ. ಶರಣ್, ನಿಖಿಲ್ ಕುಮಾರಸ್ವಾಮಿಯವರಂತಹ ಹೊಸಬರ ಜತೆ ಸಿನಿಮಾ ಮಾಡಿ ಕೈ ಸುಟ್ಟುಕೊಂಡಿರುವ ಹರ್ಷ ಮಾಸ್ಟರ್ ಮತ್ತೆ ಹ್ಯಾಟ್ರಿಕ್ ಹೀರೋ ಜತೆಯಾಗಿರುವುದು ಅವರ ಗೆಲುವಿನ ಮುನ್ಸೂಚನೆಯಾ ನೋಡಬೇಕು.
No Comment! Be the first one.