ಕಳೆದೊಂದು ವಾರದಿಂದ ಐಟಿ ರೇಡಿನ ಸುದ್ದಿಯನ್ನಷ್ಟೇ ನೋಡಿ ನೋಡಿ ನಿಮಗೂ ಬೋರೆದ್ದಿರಬಹುದು. ಹಾಗಿದ್ದರೆ ಇಲ್ಲೊಂದು ಕಲರ್ ಫುಲ್ ಸುದ್ದಿಯಿದೆ ಕೇಳಿ.
ಅದೇನಪ್ಪಾ ಅಂದ್ರೆ ಕೊಡಗಿನ ಮೂಲದ ಮುದ್ದಾದ ಜೋಡಿ ಹಕ್ಕಿಗಳು ರೆಕ್ಕೆ ಬಿಚ್ಚಿ ಥಾಯ್ಲೆಂಡ್ ಎಂಬ ಸುಂದರ ಊರಿಗೆ ವಲಸೆ ಹೋಗಿಬಂದಿವೆ. ಪೂರ್ತಿ ನಾಲ್ಕು ದಿನಗಳ ಕಾಲ ಸ್ವಚ್ಚಂದವಾಗಿ ವಿಹರಿಸಿ ತವರು ನೆಲಕ್ಕೆ ಮರಳಿವೆ.
ಈ ಕೊರೆಯುವ ಚಳಿಯಲ್ಲಿ ಬೆಚ್ಚಗಿನ ಟ್ರಿಪ್ಪು ಮುಗಿಸಿಕೊಂಡು ಬಂದಿರೋದು ನಟಿ ಹರ್ಷಿಕಾ ಪೂಣಚ್ಚ ಮತ್ತು ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ… ಈ ಬಣ್ಣದ ಲೋಕದಲ್ಲಿ ನಡೆಯಬಾರದ್ದೆಲ್ಲಾ ನಡೆಯುತ್ತವೆ. ತೀರಾ ಸಾಚಾಗಳಂತೆ ಪೋಸು ಕೊಡೋರು, ಸಭ್ಯರು ಅಂತಾ ಬೋರ್ಡು ತಗುಲಿಸಿಕೊಂಡವರೆಲ್ಲಾ ನಾಲ್ಕು ಗೋಡೆಗಳ ನಡುವೆ ಮ್ಯಾಚ್ ಫಿಕ್ಸು ಮಾಡಿಕೊಂಡು ಮಾಡಬಾರದ್ದು ಮಾಡ್ತಾಇರ್ತಾರೆ. ಈ ಮಧ್ಯೆ ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ರಾಜಾರೋಷವಾಗಿ ನಾಲ್ಕು ದಿನ ಒಟ್ಟಿಗಿದ್ದು, ಓಡಾಡಿಕೊಂಡುಬಂದಿರೋದರಲ್ಲಿ ತಪ್ಪೇನಿದೆ ಬಿಡಿ.
ಕಳೆದ ಸೀಜನ್ನಿನ ಬಿಗ್ಬಾಸ್ ಶೋನಲ್ಲಿ ಭುವನ್ ಪೊನ್ನಣ್ಣ ಮತ್ತು ಚೆಡ್ಡಿಚಿಕ್ಕಿ ಸಂಜನಾ ಜನುಮದ ಜೋಡಿಯೆಂದೇ ಖ್ಯಾತಿ ಪಡೆದಿದ್ದರು. ಆದರೀಗ ಇಬ್ಬರದ್ದೂ ಒಂದೊಂದು ದಿಕ್ಕು. ಅತ್ತ ಸಂಜನಾ ಕನ್ನಡದಲ್ಲಿ ಅವಕಾಶ ಸಿಗದೇ ಪರಭಾಷಾ ಸೀರಿಯಲ್ಲು ಅಂತೆಲ್ಲ ತೊಡಗಿಸಿಕೊಂಡಿದ್ದರೆ, ಇಲ್ಲಿ ಭುವನ್ ರಾಂಧವ ಚಿತ್ರದಲ್ಲಿ ಬ್ಯುಸಿಯಾಗಿದ್ದರು. ಎರಡು ವರ್ಷಗಳ ಕಾಲ ರಾಂಧವ ಚಿತ್ರಕ್ಕಾಗಿಯೇ ಉಸಿರಾಡಿದ್ದ ಭುವನ್ ನಟಿ ಹರ್ಷಿಕಾ ಪೂಣಚ್ಚ ಜೊತೆ ಥೈಲ್ಯಾಂಡ್ ಟ್ರಿಪ್ಪು ಹೋಗಿ ನಿರಾಳವಾಗಿ ವಾಪಾಸಾಗಿದ್ದಾರೆ!
ಭುವನ್ ಮತ್ತು ಹರ್ಷಿಕಾ ಇಬ್ಬರದ್ದೂ ಒಂದೇ ಊರು. ಇವರಿಬ್ಬರೂ ಕೊಡಗಿನವರೇ. ಈ ಒಂದೇ ಊರಿನ ಸೆಂಟಿಮೆಂಟು ಇವರಿಬ್ಬರನ್ನೂ ಸ್ನೇಹಕ್ಕೆ ಬೀಳಿಸಿದ್ದರೆ ಯಾವ ಅಚ್ಚರಿಯೂ ಇಲ್ಲ. ಆಗಾಗ ಪಾರ್ಟಿ, ಪ್ರೋಗ್ರಾಮ್ ಅಂತ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದೂ ಇದೆ. ಇದೀಗ ಹರ್ಷಿಕಾ ಮತ್ತು ಭುವನ್ ಗುಟ್ಟಾಗಿ,ಒಟ್ಟಾಗಿ ನಾಲಕ್ಕು ದಿನ ಥೈಲ್ಯಾಂಡ್ ಬೀಚ್ ನಲ್ಲಿ ತಣ್ಣಗೆ ಮಿಂದೆದ್ದು ಬಂದಿದ್ದಾರೆ!
ಇಂಥಾದ್ದೊಂದು ಸುದ್ದಿ ಬೇರೊಂದಷ್ಟು ದಿಕ್ಕಿನ ಗುಮಾನಿಗಳಿಗೂ ಆಸ್ಪದ ಕೊಡೋದು ಸಹಜವೇ. ಭುವನ್ ಮತ್ತು ಹರ್ಷಿಕಾ ಲವ್ವಲ್ಲಿ ಬಿದ್ದಿದ್ದಾರಾ? ಇಬ್ಬರದ್ದೂ ಒಂದೇ ಪ್ರೊಫೆಷನ್ನು. ಊರೂ ಕೂಡಾ ಒಂದೇ. ಆದ್ದರಿಂದ ಜೀವನ ಪೂರ್ತಿ ಕೂಡಿ ಬಾಳುವಂಥಾ ನಿರ್ಧಾರವನ್ನ ತೆಗೆದುಕೊಂಡಿದ್ದಾರಾ ಅಂತೆಲ್ಲ ಪ್ರಶ್ನೆಗಳು ಉದ್ಭವಿಸುತ್ತವೆ. ಅದಕ್ಕೆ ಉತ್ತರ ಹೌದೆಂದೇ ಆಗಿದ್ದರೂ ಖಂಡಿತಾ ತಪ್ಪೇನಿಲ್ಲ!
ಬಿಗ್ಬಾಸ್ ಶೋ ನೋಡಿದ ಪ್ರೇಕ್ಷಕರೆಲ್ಲರೂ ಭುವನ್ ಮತ್ತು ಸಂಜನಾ ರಿಯಲ್ಲಾಗಿಯೇ ಪ್ರೀತಿಸುತ್ತಿದ್ದಾರೆ ಅಂದುಕೊಂಡಿದ್ದರು. ಆದರೆ ಈ ಶೋ ಮುಗಿಯುತ್ತಲೇ ಸಂಜನಾ ಮನಸ್ಥಿತಿ ಬೇರಾಯ್ತಾ? ಭುವನ್ರನ್ನು ಹತ್ತಿರದಿಂದ ಬಲ್ಲವರ ಪ್ರಕಾರ ಹೇಳೋದಾದರೆ, ಆತ ಸಂಜನಾ ವಿಚಾರದಲ್ಲಿ ಸೀರಿಯಸ್ ಆಗಿಯೇ ಇದ್ದಂತಿತ್ತು. ಆದರೆ ಈ ಶೋ ಮುಗಿದು ಅದ್ಯಾವುದೋ ಸೀಮೆಗಿಲ್ಲದ ಸೀರಿಯಲ್ಲು ಪ್ರಸಾರವಾದ ಬಳಿಕ ಸಂಜನಾಳೇ ಭುವನ್ನನ್ನು ಅವಾಯ್ಡು ಮಾಡಲಾರಂಭಿಸಿದ್ದಳು ಅನ್ನುವವರೂ ಇದ್ದಾರೆ. ಈ ನಿರಾಕರಣೆಯ ಉರಿಯಲ್ಲಿ ಬೆಂದ ಭುವನ್ ಕಡೆಗೂ ಜೋಡಿ ಹುಡುಕಿಕೊಂಡರಾ ಎಂಬುದಕ್ಕೆ ಕಾಲವೇ ಉತ್ತರಿಸಬೇಕು. ಒಂದು ವೇಳೆ ಇದು ಹೌದಾದರೆ ಇದು ನಿಜಕ್ಕೂ ಚೆಡ್ಡಿ ಚಿಕ್ಕಿಯ ತುಂಡು ಚೆಡ್ಡಿಯೊಳಗೆ ಇರುವೆ ಬಿಟ್ಟಂಥಾ ಸುದ್ದಿ ಅನ್ನೋದರಲ್ಲಿ ಸಂಶಯವೇ ಇಲ್ಲ!
#
No Comment! Be the first one.