ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಹತ್ಯಾರ್ ಎಂಬ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಶೇಷವೆಂದರೆ ಚಿತ್ರದಲ್ಲಿ ಅವರದು 50ರ ಹರೆಯದ ಪಾತ್ರ. ಅಲ್ಲದೇ ಅವರಿಗಿದು ನೆಗೆಟೀವ್ ಶೇಡಿನ ಪಾತ್ರ ಕೂಡ. ಸದಭಿರುಚಿಯ ಪಾತ್ರಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವ ಸಂಚಾರಿ ವಿಜಯ್ ಸದ್ಯ ಮತ್ತೊಂದು ಅವತಾರದಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಹತ್ಯಾರ್ ಸಿನಿಮಾ ಜನಪ್ರಿಯ ಸಾಹಿತಿ ಕುಂ. ವೀರಭದ್ರಪ್ಪ ಅವರ ಕಾದಂಬರಿ ಆಧಾರಿತವಾಗಿದ್ದು, ಇಡೀ ಊರನ್ನೇ ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡ ಕ್ರೂರಿಯ ಕಥೆಯಾಗಿದೆ. ಈ ಗೆಟಪ್ಪಿನ ಫೋಟೋವನ್ನು ಸಂಚಾರಿ ವಿಜಯ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
No Comment! Be the first one.