ಇತ್ತೀಚೆಗಷ್ಟೇ ‘ಹೀಗೊಂದು ದಿನ’ ಎನ್ನುವ ಸಿನಿಮಾ ತೆರೆಗೆ ಬಂದಿತ್ತು. ಪ್ರಹಿಳಾಪ್ರಧಾನವಾದ ಈ ಸಿನಿಮಾದಲ್ಲಿ ಸಿಂಧೂ ಲೋಕನಾಥ್ ಪ್ರಧಾನ ಪಾತ್ರ ನಿರ್ವಹಿಸಿದ್ದಳು. ಅನ್ ಕಟ್ ಮೂವಿ ಅಂತಾ ಹೆಸರು ಮಾಡಿದ್ದ ’ಹೀಗೊಂದು ದಿನ’ವನ್ನು ನೋಡಿದವರು ಕೂಡಾ ‘ಒಳ್ಳೇ ಸಿನಿಮಾ’ ಅಂದಿದ್ದರು. ಇದರಿಂದ ಹೆಸರು ಬಂತಾದರೂ ಈ ಚಿತ್ರವನ್ನು ನಿರ್ಮಿಸಿದ್ದ ದಿವ್ಯದೃಷ್ಟಿ ಚಂದ್ರಶೇಖರ್ ನಯಾಪೈಸೆಯ ಕಾಸು ಹುಟ್ಟಲಿಲ್ಲ. ಸಬ್ಜೆಕ್ಟು ಚನ್ನಾಗಿದೆ ಅನ್ನೋ ಕಾರಣಕ್ಕೆ ಸಿಂಧೂಲೋಕನಾಥ್ಳನ್ನು ನಂಬಿ ಅಷ್ಟು ದೊಡ್ಡ ಮೊತ್ತದ ಹಣ ಇನ್ವೆಸ್ಟ್ ಮಾಡಿದ್ದೇ ಬಹುಶಃ ಯಡವಟ್ಟಾಯಿತೋ ಏನೋ? ಪ್ರಿಂಟು ಪಬ್ಲಿಸಿಟಿಗೇ ನಿರ್ಮಾಪಕರು ಮೂವತ್ತು ಲಕ್ಷಕ್ಕಿಂತಾ ಹೆಚ್ಚು ಖರ್ಚು ಮಾಡಿದ್ದರು. ಕೋಟ್ಯಂತರ ರುಪಾಯಿ ಹಣ ಹೂಡಿ ನಿರ್ಮಿಸಿದ ಚಿತ್ರದಿಂದ ನಿರ್ಮಾಪಕ ದಿವ್ಯದೃಷ್ಟಿ ಚಂದ್ರಶೇಖರ್ ಅವರಿಗೆ ವಾಪಾಸು ಬಂದ ದುಡ್ಡೆಷ್ಟು ಅಂತಾ ಕೇಳಿದರೆ ನಿಜಕ್ಕೂ ಗಾಬರಿಯಾಗುತ್ತದೆ! ಸಿಂಗಲ್ ಸ್ಕ್ರೀನುಗಳಿಂದ ಒಂದು ರುಪಾಯಿ ಕೂಡಾ ಲಾಭವಾಗಿಲ್ಲ. ಇನ್ನು ಮಲ್ಟಿಪ್ಲೆಕ್ಸ್ಗಳಿಂದ ಬಂದ ಶೇರು ಕೇವಲ ಅರವತ್ತು ಸಾವಿರ ರುಪಾಯಿ. ಅದೂ ಕೂಡಾ ಇನ್ನೂ ನಿರ್ಮಾಪಕರ ಕೈ ಸೇರಿಲ್ಲ. ಈ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ಪಬ್ಲಿಸಿಟಿ ವಿಚಾರಕ್ಕೂ ಸಿಂಧೂ ಸರಿಯಾಗಿ ಸಾಥ್ ನೀಡಿರಲಿಲ್ಲ ಅನ್ನೋ ಮಾತುಗಳೂ ಕೇಳಿಬಂದಿದ್ದವು.
ತನ್ನ ಮೇಲೆ ಹಣ ಹೂಡಿದ ನಿರ್ಮಾಪಕ ಈ ಮಟ್ಟದ ಲುಕ್ಸಾನು ಅನುಭವಿಸಿರುವ ಹೊತ್ತಿನಲ್ಲೇ ಸಿಂಧೂ ಲೋಕನಾಥ್ ಸಿಟಿ ಮ್ಯಾಜಿಸ್ಟ್ರೇಟ್ ಕೋರ್ಟ್ ೨೩ರಲ್ಲಿ ಚೆಕ್ ಬೌನ್ಸ್ ಕುರಿತಂತೆ ಪ್ರಕರಣ ದಾಖಲು ಮಾಡಿದ್ದಾಳೆ ಅನ್ನೋ ಸುದ್ದಿ ಹೊರಬಿದ್ದಿದೆ.
ನಿರ್ಮಾಪಕ ದಿವ್ಯದೃಷ್ಟಿ ಚಂದ್ರಶೇಖರ್ ಈಕೆಗೆ ಒಂದೂವರೆ ಲಕ್ಷದ ಚೆಕ್ ನೀಡಿದ್ದರಂತೆ. ಆ ನಂತರ ಒಂದೂಕಾಲು ಲಕ್ಷ ಹಣವನ್ನು ನಗದು ರೂಪದಲ್ಲಿ ಕೊಟ್ಟಿದ್ದು ಇನ್ನು ಇಪ್ಪತ್ತನಾಲ್ಕು ಸಾವಿರ ರುಪಾಯಿಗಳು ಬಾಕಿ ಇವೆಯಂತೆ. ಈ ಹಣಕ್ಕಾಗಿ ಸಿಂಧೂ ಪದೇ ಪದೇ ಚಂದ್ರಶೇಖರ್ ಅವರನ್ನು ಕೇಳಿದಾಗ ‘ಸದ್ಯಕ್ಕೆ ಸಿನಿಮಾದಿಂದ ನಷ್ಟ ಅನುಭವಿಸಿ ಕಷ್ಟದಲ್ಲಿದ್ದೀನಿ. ಆದಷ್ಟು ಬೇಗ ಕೊಡ್ತೀನಿ’ ಅಂತಾ ನಿರ್ಮಾಪಕರು ತಿಳಿಸಿದ್ದರಂತೆ. ಆದರೂ ಈಕೆ ಕೋರ್ಟು ಮೆಟ್ಟಿಲೇರಿದ್ದಾಳೆ.
#
No Comment! Be the first one.