ಸದ್ದಿಲ್ಲದೇ ಶೂಟಿಂಗ್ ಮುಗಿಸಿ ರಿಲೀಸ್ ಗೆ ರೆಡಿಯಾಗಿರುವ ತೆಲುಗಿನ ಹಿಪ್ಪಿ ಸಿನಿಮಾಕ್ಕೆ ಎ ಪ್ರಮಾಣಪತ್ರ ದೊರಕಿದೆ. ಚಿತ್ರವನ್ನು ಮುಂದಿನ ತಿಂಗಳು 6ರಂದು ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಹಿಪ್ಪಿ ಸಿನಿಮಾದಲ್ಲಿ ಕಾರ್ತಿಕೇಯನ್ ಬೋಲ್ಡ್ ಆಗಿ ನಟಿಸಿದ್ದರು. ಈ ಹಿಂದೆ ಕಾರ್ತಿಕೇಯನ್ ಆರ್ ಎಕ್ಸ್ 100 ಸಿನಿಮಾದಲ್ಲಿ ನಟಿಸಿದ್ದರು. ಹಿಪ್ಪಿ ಚಿತ್ರವನ್ನು ಟಿ.ಎನ್. ಕೃಷ್ಣ ನಿರ್ದೇಶನ ಮಾಡಿದ್ದಾರೆ.
ಹಿಪ್ಪಿ ಸಿನಿಮಾದ ಕುರಿತು ಮಾತನಾಡಿರುವ ಕಾರ್ತಿಕೇಯನ್ “ಕೇವಲ ಏಳು ದಿನಗಳ ಒಳಗಾಗಿ ಥಿಯೇಟರ್ ಗೆ ಬರಲಿದ್ದೇವೆ. ನನಗೆ ಹೆಚ್ಚು ಕುತೂಹಲವಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದದ ನಿರೀಕ್ಷೆಯಲ್ಲಿದ್ದೇವೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕಾರ್ತಿಕೇಯನ್ ಜತೆಯಲ್ಲಿ ವೆನ್ನೇಲಾ ಕಿಶೋರ್, ಜೆ.ಡಿ. ಚಕ್ರವರ್ತಿ ಸಹ ಅಭಿನಯಿಸುತ್ತಿದ್ದಾರೆ. ಇವರಿಗೆ ನಾಯಕಿಯರಾಗಿ ದಿಗಾಂಗನ ಸೂರ್ಯವಂಶಿ ಮತ್ತು ಜಾಸ್ಬಾ ಸಿಂಗ್ ಅಭಿನಯಿಸಿದ್ದಾರೆ.ರಿಚ್ ಪ್ರೊಡಕ್ಷನ್ ನಲ್ಲಿ ಕಲೈಪುಲಿ ಎಸ್ ತನು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ನಿವಾಸ್ ಕೆ ಪ್ರಸನ್ನ ಸಂಗೀತ ಸಂಯೋಜನೆ, ಪ್ರವೀಣ್ ಕೆ.ಎಲ್ ಸಂಕಲನ, ಅನಂತ ಶ್ರೀರಾಮ್ ಸಾಹಿತ್ಯ, ಟಿ.ಎನ್. ಕೃಷ್ಣ ಸಂಭಾಷಣೆ, ದಿಲೀಪ್ ಸುಬ್ಬರಾಯನ್ ಮತ್ತು ಕಾಶಿ ನಡೀಮ್ ಪಲ್ಲಿ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.
No Comment! Be the first one.