ಕನ್ನಡದ ಖ್ಯಾತ ಹಾಸ್ಯ ನಟ ಸಿಹಿ ಕಹಿ ಚಂದ್ರು ಅವರ ಪುತ್ರಿ ನಟಿ ಹಿತಾ ಚಂದ್ರಶೇಖರ್ ನಿಶ್ಚಿತಾರ್ಥ ಇಂದು ನೆರವೇರಿತು. ‘ಒಂಥರಾ ಬಣ್ಣಗಳು’ ಎಂಬ ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸಿದ್ದ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ನಟ ಕಿರಣ್ ಶ್ರೀನಿವಾಸ್-ನಟಿ ಹಿತಾ ಕೇವಲ ಇಬ್ಬರೂ ಕುಟುಂಬದ ಸಮ್ಮುಖದಲ್ಲಿ ಸರಳ ರೀತಿಯಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ. ಕಳೆದ ಶುಕ್ರವಾರ ಬಿಡುಗಡೆಯಾಗಿದ್ದ ಪ್ರೀಮಿಯರ್ ಪದ್ಮಿನಿ ಸಿನಿಮಾದಲ್ಲಿ ಹಿತಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಪ್ರಬುದ್ಧ ನಟನೆ ಮಾಡಿದ್ದಾರೆಂಬ ಸಕಾರಾತ್ಮಕ ಪ್ರತಿಕ್ರಿಯಿಗಳನ್ನು ಪಡೆದುಕೊಂಡಿದ್ದಾರೆ.