ಹೊಸ ಪ್ರತಿಭೆಗಳೇ ಸೇರಿಕೊಂಡು ಸಿದ್ದಪಡಿಸುವ ’ಹಿಟ್ಲರ್’ ಸಿನಿಮಾವು ಯುಎ ಪ್ರಮಾಣ ಪತ್ರ ಪಡೆದುಕೊಂಡಿದೆ. ಗಾನಶಿವ ಮೂವೀಸ್ ಮುಖಾಂತರ ಮಮತಾಲೋಹಿತ್ ನಿರ್ಮಾಣ ಮಾಡಿರುವದು ಹೊಸ ಪ್ರಯತ್ನ. ಶನಿವಾರದಂದು ಚಿತ್ರದ ಟ್ರೈಲರ್‌ನ್ನು ’ಅಯೋಗ್ಯ’ ಮತ್ತು ’ಮದಗಜ’ ನಿರ್ದೇಶಕ ಮಹೇಶ್‌ಕುಮಾರ್ ಬಿಡುಗಡೆ ಮಾಡಿ ಕಿನ್ನಾಳ್‌ರಾಜ್ ಸ್ನೇಹವನ್ನು ನೆನಪು ಮಾಡಿಕೊಂಡು ತಂಡಕ್ಕೆ ಶುಭ ಹಾರೈಸಿದರು. ನಿರ್ದೇಶಕ ಕಿನ್ನಾಳ್‌ರಾಜ್ ಮಾತನಾಡಿ ಸಿನಿಮಾ ಕುರಿತಂತೆ ಮಾಹಿತಿ ನೀಡಿದರು. ಕುಟುಂಬದಲ್ಲಿ ತನ್ನಿಂದ ಆದ ತಪ್ಪಿಗೆ, ವೈಯಕ್ತಿಕ ಕಾರಣಗಳಿಗೋಸ್ಕರ ಕುಟುಂಬ ಹಾಳಾಗಬಾರದೆಂಬ ಮಾನಸಿಕ ತಳಮಳವನ್ನು ಹೇಳಲಾಗಿದೆ. ಶೀರ್ಷಿಕೆ ಅಂದರೆ ನಾನು ಹೇಳಿದ್ದೆ ನಿಯಮ. ಅಂತಹ ಪಾತ್ರ. ಕಥಾನಾಯಕ ಶುರುವುನಿಂದಲೇ ರೌಡಿಯಾಗಿರುತ್ತಾನೆ. ಕರುಣೆ ಅನ್ನುವುದನ್ನು ತೋರಿಸಿಲ್ಲ. ಆತನು ತೊಳಲಾಟದಲ್ಲಿ ಸಿಕ್ಕಿಹಾಕಿಕೊಂಡು, ರೌಡಿಸಂನಿಂದ ಹೊರಗಡೆ ಬಂದರೆ ಸಮಾಜ ಬಿಡುತ್ತದಾ, ಅಥವಾ ಅವನು ಬದುಕುತ್ತಾನಾ? ಅವೆಲ್ಲಾವನ್ನು ಹಂಗೆ ನಿಭಾಯಿಸುತ್ತಾನೆ ಎನ್ನವುದು ಸಾರಾಂಶವಾಗಿದೆ ಎಂದರು.


ರೌಡಿಸಂ, ಫ್ಯಾಮಿಲಿ ಸೆಂಟಿಮೆಂಟ್ ಇದೆ. ಚಿತ್ರದಲ್ಲಿ ಪಾತ್ರಗಳು ಕೆಲವೇ ನಿಮಿಷಗಳು ಇದ್ದರೂ, ಎಲ್ಲವು ಜೀವಂತವಾಗಿರುತ್ತದೆ. ವಿಜಯ್‌ಚಂಡೂರು, ತಾಯಿ ಪಾತ್ರ ಮಾಡಿರುವವರು ಹೂರತುಪಡಿಸಿ ಉಳಿದಂತೆ ಎಲ್ಲರೂ ವಿಲನ್‌ಗಳು ಎಂದು ನಾಯಕ ಲೋಹಿತ್ ಬಣ್ಣಿಸಿಕೊಂಡರು.

ನಾಯಕಿ ಸಸ್ಯ, ಅಣ್ಣನ ಪಾತ್ರ ಮಾಡಿರುವ ವಿಜಯ್‌ಚೆಂಡೂರು, ಭ್ರಷ್ಟ ಪೋಲೀಸ್ ಅಧಿಕಾರಿ ಗಣೇಶ್‌ರಾವ್, ಖಳನಾಗಿರುವ ವೈಭವ್‌ನಾಗರಾಜ್ ಪಾತ್ರದ ಪರಿಚಯ ಮಾಡಿಕೊಂಡರು. ತಾರಗಣದಲ್ಲಿ ವರ್ಧನ್‌ತೀರ್ಥಹಳ್ಳಿ, ಮನಮೋಹನ್‌ರೈ, ಬಲರಾಜವಾಡಿ, ಶಶಿಕುಮಾರ್, ವೇದಹಾಸನ್, ಗಣೇಶ್‌ರಾವ್ ಮುಂತಾದವರು ನಟಿಸಿದ್ದಾರೆ. ಸಂಗೀತ ಆಕಾಶ್‌ಪರ್ವ, ಛಾಯಾಗ್ರಹಣ ಜಿ.ವಿ.ನಾಗರಾಜ್‌ಕಿನ್ನಾಳ, ಸಂಕಲನ ಗಣೇಶ್‌ತೋರಗಲ್, ಸಾಹಸ ಚಂದ್ರುಬಂಡೆ ಅವರದಾಗಿದೆ. ಅಂದಹಾಗೆ ಚಿತ್ರವು ನವೆಂಬರ್ 12ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಹಾಯಾಗಿದೆ ಎದೆಯೊಳಗೆ…!

Previous article

ಇದು ಹೃದಯಗಳ ವಿಷಯ….

Next article

You may also like

Comments

Leave a reply

Your email address will not be published.