ಏಳು ವರ್ಷದಲ್ಲಿ ಏಳು ಸಿನಿಮಾ ನಿರ್ಮಾಣ; ಅವುಗಳಲ್ಲಿ ಮೂರು ಪ್ಯಾನ್​ ಇಂಡಿಯಾ ಚಿತ್ರಗಳು

ಸ್ಯಾಂಡಲ್​ವುಡ್​ನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಯಾಗಿರುವ ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್​ ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಕೇವಲ ಎಂಟೇ ವರ್ಷದಲ್ಲಿ ಅವಧಿಯಲ್ಲಿ ಇಡೀ ವಿಶ್ವವೇ ತಿರುಗಿನೋಡುವಂಥ ಸಿನಿಮಾಗಳನ್ನು ನೀಡಿ, ಇದೀಗ ಏಕಕಾಲದಲ್ಲಿ ಹಲವಾರು ಭಾಷೆಗಳಲ್ಲಿ ಇಂಡಿಯನ್ ಸಿನಿಮಾ ನಿರ್ಮಾಣ ಮಾಡಲು ಸಂಸ್ಥೆ ದಾಪುಗಾಲಿಟ್ಟಿದ್ದು, ಡಿಸೆಂಬರ್​ 2ರ ಮಧ್ಯಾಹ್ನ 2.09ಕ್ಕೆ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಿದೆ.

2014ರಲ್ಲಿ ನಿನ್ನಿಂದಲೇ ಸಿನಿಮಾ ಮೂಲಕ ಆರಂಭವಾದ ಹೊಂಬಾಳೆ ಫಿಲಂಸ್​ನ ಸಿನಿಮಾ ನಿರ್ಮಾಣದ ಪಯಣ, ಅದಾದ ಬಳಿಕ ಮಾಸ್ಟರ್ ಪೀಸ್​, ರಾಜಕುಮಾರ್​, ಕೆಜಿಎಫ್, ಕೆಜಿಎಫ್​ 2, ಯುವರತ್ನ ವರೆಗೂ ಸಾಗಿ ಬಂದಿದೆ. ಒಟ್ಟು ಏಳು ವರ್ಷಗಳಲ್ಲಿ ಏಳು ಸಿನಿಮಾ ನೀಡಿದೆ. ಅವುಗಳಲ್ಲಿ ಮೂರು ಸಿನಿಮಾಗಳು ಪ್ಯಾನ್​ ಇಂಡಿಯಾ ಚಿತ್ರಗಳಾಗಿವೆ. ಇದೀಗ ಈ ಎಲ್ಲ ಸಿನಿಮಾಗಳಿಗಿಂತಲೂ ಮತ್ತೊಂದು ಮಹೋನ್ನತ ಪ್ರಾಜೆಕ್ಟ್ ಘೋಷಣೆಗೆ ಸಂಸ್ಥೆ ಸನ್ನದ್ಧವಾಗಿದ್ದು, ಏಕಕಾಲದಲ್ಲಿ ಹಲವಾರು ಭಾಷೆಗಳಲ್ಲಿ ಇಂಡಿಯನ್ ಚಿತ್ರವನ್ನು ಘೋಷಣೆ ಮಾಡಿಕೊಳ್ಳಲಿದೆ. ಈ ವಿಶೇಷ ಪ್ರಾಜೆಕ್ಟ್ ನ ಅಸಲಿ ವಿಚಾರವನ್ನು ಡಿ.2 ರಂದು ಮಧ್ಯಾಹ್ನ 2.09ಕ್ಕೆ ಅಧಿಕೃತ ಹೊಂಬಾಳೆ ಫಿಲಂಸ್​ ಟ್ವಿಟರ್​ನಲ್ಲಿ ಘೋಷಿಸಲಾಗುತ್ತದೆ. ಯಾವ ಚಿತ್ರ, ನಿರ್ದೇಶಕರು ಯಾರು, ಪಾತ್ರವರ್ಗದ ಮಾಹಿತಿಯನ್ನೂ ಒಂದೊಂದಾಗಿ ಬಿಚ್ಚಿಡಲಿದೆ.

ಪ್ಯಾನ್​ ಇಂಡಿಯಾ ಕಾನ್ಸೆಪ್ಟ್ ಸಾಕಷ್ಟು ಬೆಳೆವಣಿಗೆ ಹೊಂದಿದ್ದು, ಕನ್ನಡದ ಕೆಜಿಎಫ್​ ಸಿನಿಮಾ ಈಗಾಗಲೇ ದೊಡ್ಡ ಮೈಲಿಗಲ್ಲನ್ನು ಸೃಷ್ಟಿಸಿದೆ. ಅದರ 10 ಪಟ್ಟು ನಿರೀಕ್ಷೆ ಕೆಜಿಎಫ್​ ಚಾಪ್ಟರ್ 2 ಮೇಲೆ ನೆಟ್ಟಿದ್ದು, ಇಡೀ ವಿಶ್ವವೇ ಈ ಸಿನಿಮಾಕ್ಕೆ ಕಾಯುತ್ತಿದೆ. ಅದೇ ರೀತಿ ಪವರ್​ಸ್ಟಾರ್​ ಪುನೀತ್ ರಾಜ್​ಕುಮಾರ್ ನಟನೆಯ ಯುವರತ್ನ ಚಿತ್ರವೂ ಕನ್ನಡದ ಜತೆಗೆ ತೆಲುಗಿನಲ್ಲಿ ಬಿಡುಗಡೆ ಆಗುತ್ತಿದೆ. ಹೀಗೆ ಈ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಸಂಸ್ಥೆಯೇ ಇದೀಗ ಇಡೀ ಭಾರತದಲ್ಲಿ ಯಾರೂ ಮಾಡದ ಹೊಸ ಸಾಹಸಕ್ಕೆ ಕೈ ಹಾಕಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕೆಂದರೆ, ಇನ್ನೆರಡು ದಿನ ಕಾಯಲೇ ಬೇಕು.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಮ್ಯಾಥ್ಯೂಸ್ ಮನು ಸಂಗೀತ ಹಾಯಾಗಿದೆ ಎದೆಯೊಳಗೆ!

Previous article

ಡಾ. ಕಾಮಿನಿ ಎ. ರಾವ್ಸ್ ಮಾಸ್ಟರ್​ ಕ್ಲಾಸ್!

Next article

You may also like

Comments

Leave a reply

Your email address will not be published. Required fields are marked *