ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯಲ್ಲಿರುವ ಹೌರಾಬ್ರಿಡ್ಜ್ ಚಿತ್ರ ಇನ್ನೇನು ಚಿತ್ರೀಕರಣವನ್ನೆಲ್ಲ ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದರ ಫಸ್ಟ್ ಕಾಪಿ ಬಂದ ಬಂತರದಲ್ಲಿ ಈ ಹಾರರ್ ಚಿತ್ರ ಸಿನಿಮಾ ತಂಡದ ಮೂಡನ್ನೇ ಬದಲಾಯಿಒಸಿ ಬಿಟ್ಟಿದೆ. ಅದರ ಫಲವಾಗಿ ಕಡೇ ಕ್ಷಣದಲ್ಲಿ ಈ ಸಿನಿಮಾ ಹೆಸರು ಬದಲಾವಣೆಯಾಗಿದೆ!
ಲೋಹಿತ್ ನಿರ್ದೇಶನದ ಈ ಚಿತ್ರ ಇದುವರೆಗೂ ಹೌರಾ ಬ್ರಿಡ್ಜ್ ಆಗಿಯೇ ಸದ್ದು ಮಾಡುತ್ತಾ ಬಂದಿತ್ತು. ಆದರೀಗ ಇದಕ್ಕೆ ದೇವಕಿ ಎಂಬ ಹೊಸಾ ನಾಮಕರಣ ಮಾಡಲಾಗಿದೆಯಂತೆ. ಇದರ ಟೈಟಲ್ ಡಿಸೈನ್ ಅನ್ನೂ ಕೂಡಾ ಚಿತ್ರ ತಂಡ ಫೈನಲ್ ಮಾಡಿದೆ.ಈ ಹಿಂದೆ ಮಮ್ಮಿ ಎಂಬ ಹಾರರ್ ಹಿಟ್ ಚಿತ್ರವನ್ನು ನಿರ್ದೇಶನ ಮಾಡಿದ್ದವರು ಲೋಹಿತ್. ಹೊಸಾ ಹುಡುಗನಾದರೂ ಲೋಹಿತ್ ಈ ಸಿನಿಮಾ ನಿರ್ದೇಶನ ಮಾಡಿದ ರೀತಿಗೆ ವ್ಯಾಪಕ ಮೆಚ್ಚುಗೆಗಳೇ ಕೇಳಿ ಬಂದಿದ್ದವು. ಈ ಚಿತ್ರದ ಮೂಲಕವೇ ಈತ ಉಪ್ಪಿ ವಲಯದ ಆಪ್ತನಾಗಿಯೂ ಬದಲಾಗಿದ್ದರು. ಮಮ್ಮಿಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಪ್ರಿಯಾಂಕಾ ಉಪೇಂದ್ರ ಕೂಡಾ ಲೋಹಿತ್ ನಿರ್ದೇಶನದ ಕಸುವಿನ ಬಗ್ಗೆ ಭರವಸೆ ಮೂಡಿಸಿಕೊಂಡಿದ್ದರು. ಅದರ ಫಲವಾಗಿಯೇ ಹೌರಾ ಬ್ರಿಡ್ಜ್ ಚಿತ್ರದಲ್ಲಿ ಮತ್ತೆ ಪ್ರಿಯಾಂಕಾ ಮುಖ್ಯ ಪಾತ್ರ ನಿರ್ವಹಿಸಿದ್ದರು. ಈ ಚಿತ್ರದ ಮೂಲಕವೇ ಉಪೇಂದ್ರ ಮಗಳು ಐಶ್ವರ್ಯಾ ಕೂಡಾ ಮೊದಲ ಸಲ ಬಣ್ಣ ಹಚ್ಚುತ್ತಿದ್ದಾಳೆ. ವಿಶಿಷ್ಟವಾದ ಕಥೆ ಹೊಂದಿರೋ ಇದಕ್ಕೀಗ ದೇವಕಿ ಎಂಬ ಮರು ನಾಮಕರಣವಾಗಿದೆ. ಇದರಲ್ಲಿ ಪ್ರಿಯಾಂಕಾ ಪಾತ್ರದ ಹೆಸರೂ ದೇವಕಿ. ಒಟ್ಟಾರೆ ಚಿತ್ರದ ಸಾರಕ್ಕೆ ಇದೇ ಹೆಸರು ಸೂಕ್ತ ಎಂಬ ಒಕ್ಕೊರಲಿನ ನಿರ್ಧಾರದೊಂದಿದೆ ಈ ಶೀರ್ಷಿಕೆ ಬದಲಾವಣೆ ಕಲಾರ್ಯಕ್ರಮ ನಡೆದಿದೆಯಂತೆ!
No Comment! Be the first one.