ರಚಿತಾ ರಾಮ್ ಸದ್ಯ ನಿನಾಸಂ ಸತೀಶ್ ಜೊತೆಗಿನ ಅಯೋಗ್ಯ ಚಿತ್ರದ ಭರ್ಜರಿ ಗೆಲುವಿನ ಖುಷಿಯಲ್ಲಿದ್ದಾಳೆ. ಸದ್ಯ ಆಕೆಯ ಮುಂದಿರೋ ಅವಕಾಶಗಳನ್ನು ಗಮನಿಸಿದರೆ ರಚಿತಾ ಮತ್ತೊಂದು ಸುತ್ತಿಗೆ ಶೈನಪ್ ಆಗಿರೋ ಲಕ್ಷಣಗಳೂ ಕಾಣಿಸುತ್ತಿವೆ. ಎರಡ್ಮೂರು ದೊಡ್ಡ ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿರೋ ರಚಿತಾ ಈಗ ಸದ್ದು ಮಾಡುತ್ತಿರೋದು ಉಪ್ಪಿ ಅಭಿನಯದ ಐ ಲವ್ ಯೂ ಚಿತ್ರದ ಮೂಲಕ!
ಅಯೋಗ್ಯ ಚಿತ್ರದಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದ ರಚಿತಾ ಇದುವರೆಗೂ ಸಂಪೂರ್ಣವಾಗಿ ಗ್ಲಾಮರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಿಲ್ಲ. ಆದರೆ ಐ ಲವ್ ಯೂ ಚಿತ್ರದಲ್ಲಿ ಆಕೆ ಪಕ್ಕಾ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಗಳ ನಿದ್ದೆಗೆಡಿಸಲಿದ್ದಾರಾ? ಇತ್ತೀಚೆಗೆ ಬಿಡುಗಡೆಯಾದ ಮೋಷನ್ ಪೋಸ್ಟರಿನಲ್ಲಿನ ಉಪೇಂದ್ರ ಅವತಾರ ಕಂ ಡ ಪ್ರತಿಯೊಬ್ಬರಿಗೂ ಇಂಥಾದ್ದೊಂದು ಪ್ರಶ್ನೆ ಕಾಡಿದ್ದರೆ ಅಚ್ಚರಿಯೇನಿಲ್ಲ. ಯಾಕೆಂದರೆ ನಾಯಕ ಉಪೇಂದ್ರ ಅವರೇ ಸಿಂಗಲ್ ಪೀಸಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಹೀಗಿರುವಾಗ ನಾಯಕಿ ರಚಿತಾ ಹಾಟ್ ಆಗಿ ನಟಿಸದಿದ್ದರೆ ಹೇಗೆ?
ಒಂದು ಮೂಲದ ಪ್ರಕಾರ ಈ ಚಿತ್ರದಲ್ಲಿ ರಚಿತಾ ಪಾತ್ರ ಪಕ್ಕಾ ಬೋಲ್ಡ್ ಆಗಿದೆ. ಅದು ಗ್ಲಾಮರಸ್ ಪಾತ್ರವೂ ಹೌದು. ಇದುವರೆಗೂ ಕಾಣಿಸಿಕೊಳ್ಳದಿದ್ದ ರೇಂಜಿಗೆ ರಚಿತಾ ಈ ಚಿತ್ರದಲ್ಲಿ ಹಾಟ್ ಆಗಿ ನಟಿಸಲಿದ್ದಾರಂತೆ. ಇದರಲ್ಲಿನ ರಚಿತಾ ಕುಣಿಯಲಿರೋ ಹಾಡೊಂದಕ್ಕಾಗಿ ನಿರ್ದೇಶಕ ಆರ್ ಚಂದ್ರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಹಾಡೂ ಕೂಡಾ ರಚಿತಾಳನ್ನು ಹಾಟ್ ಆಗಿಯೇ ಅನಾವರಣಗೊಳಿಸಲಿದೆಯಂತೆ!
#