ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಸ್ಯಾಂಡಲ್ ವುಡ್ ನ ಬಹು ನಿರೀಕ್ಷೆಯ ಸಿನಿಮಾ ‘ಐ ಲವ್ ಯು’. ಈಗಾಗಲೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ರಿಲೀಸ್ ಗೆ ರೆಡಿಯಾಗಿರುವ ‘ಐ ಲವ್ ಯು’ ಸಿನಿಮಾ ಸದ್ಯ ಸೆನ್ಸಾರ್ ಪರೀಕ್ಷೆಯಲ್ಲಿ ಪಾಸಾಗಿದೆ. ಟ್ರೇಲರ್ ಮತ್ತು ಟೀಸರ್ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಸದ್ಯ ಸಿನಿಮಾ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದೆ. ರಿಲೀಸ್ ಗೆ ಎದುರು ನೋಡುತ್ತಿರುವ ‘ಐ ಲವ್ ಯು’ ಸಿನಿಮಾಗೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಯಾವುದೆ ಕತ್ತರಿ ಪ್ರಯೋಗವಿಲ್ಲದೆ ಐ ಲವ್ ಯು ಸೆನ್ಸಾರ್ ಪರೀಕ್ಷೆಯಲ್ಲಿ ಪಾಸಾಗಿದೆ. ಸದ್ಯ ಸೆನ್ಸಾರ್ ಆಗಿರುವ ಚಿತ್ರ ಇದೆ ತಿಂಗಳ ಕೊನೆಯಲ್ಲಿ ಅಥವಾ ಮುಂದಿನ ತಿಂಗಳ ಆರಂಭದಲ್ಲಿ ತೆರೆಗೆ ಬರುವ ಸಾದ್ಯತೆ ಇದೆ.
ಅಂದಹಾಗೆ ‘ಐ ಲವ್ ಯು’, ನಿರ್ದೇಶಕ ಆರ್ ಚಂದ್ರು ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ‘ಬ್ರಹ್ಮ’ ಸಿನಿಮಾದ ನಂತರ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಆರ್ ಚಂದ್ರು ಒಟ್ಟಿಗೆ ಬರುತ್ತಿರುವುದು ಸಿನಿ ರಸಿಕರಲ್ಲಿ ಕುತೂಹಲ ಹೆಚ್ಚಿಸಿದೆ. ವಿಶೇಷ ಅಂದ್ರೆ ಚಿತ್ರದಲ್ಲಿ ರಿಯಲ್ ಸ್ಟಾರ್ ಗೆ ನಾಯಕಿಯಾಗಿ ರಚಿತಾ ರಾಮ್ ಕಾಣಿಸಿಕೊಂಡಿರೋದು ಅಭಿಮಾನಿಗಳಿಗೆ ಮತ್ತಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ. ಇನ್ನು ಲೋಕಸಭಾ ಚುನಾವಣಾ ಬಿಸಿಯಲ್ಲಿದ್ದ ಉಪೇಂದ್ರ ಮೇ 23ಕ್ಕೆ ಚುನಾವಣೆ ಮುಗಿಸಿಕೊಂಡು ವಿದೇಶಿ ಪ್ರವಾಸದಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಇದೇ ಮೇ 23ಕ್ಕೆ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಉಪೇಂದ್ರ ರ ಐ ಲವ್ ಯು ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.
No Comment! Be the first one.