ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಸೆಲೆಬ್ರೆಟಿಗಳಿಗೆ ಅಭಿಮಾನಿಗಳು ಒಂದಿಲ್ಲೊಂದು ವಿಚಾರಕ್ಕೆ ಶಾಕ್ ಕೊಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಪರ್ಸನಲ್ ವಿಚಾರಗಳನ್ನು ಪಬ್ಲಿಕ್ಕಾಗಿ ಕೆದಕಿ ಸ್ಟಾರ್ಗಳು ಧರ್ಮಸಂಕಟದಲ್ಲಿ ಸಿಲುಕುವಂತೆ ಮಾಡಿಬಿಡುತ್ತಾರೆ. ಇಲಿಯಾನ ವಿಚಾರದಲ್ಲಿಯೂ ಆಗಿದ್ದು ಅದೇ. ಅಭಿಮಾನಿಯೊಬ್ಬ ಕೇಳಿದ ಬೋಲ್ಡ್ ಪ್ರಶ್ನೆಗೆ ಇಲಿಯಾನ ಖಡಕ್ಕಾಗಿಯೇ ಉತ್ತರಿಸಿದ್ದಾರೆ. ಆದರೆ ಅವನ ಪ್ರಶ್ನೆಯಿಂದ ಕೊಂಚ ಮುಜುಗರಕ್ಕೀಡಾಗಿರೋದಂತೂ ನಿಜ!
ಇಷ್ಟಕ್ಕೂ ಏನಾಯಿತಪ್ಪಾ ಅಂದರೆ, ಇಲಿಯಾನ ತಮ್ಮ ಇನ್ಸ್ಟಾಗ್ರಾಂನಲ್ಲಿ #AskAnyThing ಅಂತಾ ಪೋಸ್ಟ್? ಮಾಡಿದ್ರು. ಇದೇ ಸಮಯ ಬಳಸಿಕೊಂಡ ವ್ಯಕ್ತಿಯೊಬ್ಬ “ಮೇಡಮ್, ನೀವು ಯಾವ ವಯಸ್ಸಿನಲ್ಲಿ ವರ್ಜಿನಿಟಿ ಕಳೆದುಕೊಂಡ್ರಿ.. ಎಂದು ಡೈರೆಕ್ಟಾಗಿ ಮಂಚದ ವಿಷ್ಯನೇ ಮುಲಾಜಿಲ್ಲದೇ ಕೇಳಿಬಿಟ್ಟಿದ್ದಾನೆ. ಇದಕ್ಕೆ ಖಡಕ್ಕಾಗಿಯೇ ಉತ್ತಿರಿಸಿರುವ ಇಲಿಯಾನ, ಹೋಗಿ, ಈ ಪ್ರಶ್ನೆಯನ್ನು ನಿನ್ನ ಅಮ್ಮನ ಬಳಿ ಕೇಳು ಎಂದು ಹೇಳಿದ್ದಾರೆ. ಇಲಿಯಾನಾಳ ಈ ನೇರ ಉತ್ತರಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆ ಅಭಿಮಾನಿ ತೆಪ್ಪಗಾಗಿದ್ದಾನೆ.

#AskAnyThing ಅಂತಾ ಕೇಳಿದವಳು ಏನೇ ಪ್ರಶ್ನೆ ಕೇಳಿದರೂ ಉತ್ತರಿಸಬೇಕಿತ್ತು. ಸ್ವತಃ ನಟ-ನಟಿಯರೇ ನೇರವಾಗಿ ‘ಏನು ಬೇಕಾದರೂ ಕೇಳಿ ಅಂದಾಗ ಇಂಥ ಕುತೂಹಲದ ಪ್ರಶ್ನೆಗಳು ಬರೋದು ಸಹಜ. ಎಲ್ಲದಕ್ಕೂ ಉತ್ತರಿಸಲಾಗದವಳು ಇಂತಿಂಥದ್ದನ್ನೇ ಕೇಳಿ ಅಂತಾ ಮೊದಲೇ ಹೇಳಬೇಕಿತ್ತಲ್ಲವಾ? ಈ ರೀತಿಯ ಪ್ರಶ್ನೆಗಳು ಬರುತ್ತವೆ ಅಂತಾ ಗೊತ್ತಿದ್ದೂ, ಬೇಕಂತಲೇ ವಿವಾದ ಸೃಷ್ಟಿಸಿಕೊಂಡು, ಪ್ರಚಾರ ಪಡೆಯೋದು ಇಂಥಾ ನಟಿಯರಿಗೆ ಅಂಟಿಕೊಂಡ ಹಳೇ ವ್ಯಾಧಿ. ಈಗ ಇಲಿಯಾನಾಗೂ ಅದು ತಗುಲಿಕೊಂಡಿದೆ ಅಷ್ಟೇ!