ರಿಯರ್ ಸ್ಟಾರ್ ಉಪೇಂದ್ರ ಮತ್ತು ಹ್ಯಾಟ್ರಿಕ್ ಡೈರೆಕ್ಟರ್ ಆರ್ ಚಂದ್ರು ಕಾಂಬಿನೇಷನ್ನಿನ ಐ ಲವ್ ಯು ಸಿನಿಮಾ ಇಂದು ರಿಲೀಸ್ ಆಗಲಿದೆ. ಬಹಳ ದಿನಗಳಿಂದ ಲವ್ ಗುಂಗಿನಲ್ಲಿದ್ದ ಸೂಪರ್ ಸ್ಟಾರ್ ಅಭಿಮಾನಿಗಳಿಗಿಂದು ಐ ಲವ್ ಯು ಹಬ್ಬ. ಬೆಂಗಳೂರಿನ ಮೇನ್ ಥಿಯೇಟರ್ ತ್ರಿವೇಣಿಯಲ್ಲಿ ಅಭಿಮಾನಿಗಳ ಸಡಗರವಂತೂ ಹೇಳತೀರದು. ಹುಚ್ಚೆದ್ದು ತನ್ನ ನೆಚ್ಚಿನ ನಟನಿಗಾಗಿ ರಣಘೋಷವನ್ನೇ ಮೊಳಗಿಸುತ್ತಿದ್ದಾರೆ. ತ್ರಿವೇಣಿ ಥಿಯೇಟರ್ ಮುಂದೆ ರಾರಾಜಿಸುತ್ತಿರುವ ರಿಯಲ್ ಸ್ಟಾರ್ ನ ಡಬಲ್ ಕಟೌಟು, ಆ ಟಮಟೆ ಸದ್ದು, ರಿಯಲ್ ಸ್ಟಾರ್ ಪರ ಘೋಷಣೆಗಳು, ಅಭಿಮಾನಿಗಳ ಮುಖದಲ್ಲಿ ಕಾಣುತ್ತಿರುವ ಖುಷಿಯನ್ನು ನೋಡುವುದೇ ಮಜವೆನಿಸುತ್ತಿದೆ. ಈಗಾಗಲೇ ತ್ರಿವೇಣಿ ಚಿತ್ರಮಂದಿರ ಹೌಸ್ ಫುಲ್ ಆಗಿದ್ದು, ಮ್ಯಾಟಿನಿ, ಸೆಕೆಂಡ್ ಶೋ ಕೂಡಾ ಹೌಸ್ ಪುಲ್ ಆಗೋದು ಗ್ಯಾರೆಂಟಿ.

ಮತ್ತೆ ಬಾ ಉಪೇಂದ್ರ ನಂತರ ತೆರೆಯ ಮೇಲೆ ಕಾಣಿಸಿಕೊಳ್ಳದ ಉಪೇಂದ್ರ ಐ ಲವ್ ಯು ಸಿನಿಮಾದ ಮೂಲಕ ಮತ್ತೆ ಕಮ್ ಬ್ಯಾಕ್ ಆಗುತ್ತಿದ್ದಾರೆ. ಈಗಾಗಲೇ ಐ ಲವ್ ಯು ಬಹಳಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿದ್ದು, ಟ್ರೇಲರ್ರು, ಆಡಿಯೋ, ಪರ ವಿರೋಧ ಚರ್ಚೆಗಳೂ ಸಹ ಐ ಲವ್ ಯು ಚಿತ್ರಕ್ಕೆ ಪಕ್ಕಾ ಪ್ಲಸ್ ಆಗುವುದರಲ್ಲಿ ಡೌಟಿಲ್ಲ. ಇನ್ನು ಕನಕ ಸಿನಿಮಾದ ಸಕ್ಸಸ್ ನಂತರ ಆರ್ ಚಂದ್ರು ಐ ಲವ್ ಯು ಮೂಲಕ ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿರುವುದು ನಿಜಕ್ಕೂ ಮೆಚ್ಚುವಂತದ್ದು.

ಇಲ್ಲಿಯವರೆಗೂ ಐ ಲವ್ ಯು ಸ್ಟೋರಿಯ ಕುರಿತಾಗಿ ಎಳ್ಳಷ್ಟು ಮಾಹಿತಿ ರಿವೀಲ್ ಮಾಡದ ಚಂದ್ರು ಉಪ್ಪಿಯನ್ನು ಅವರ ಅಭಿಮಾನಿಗಳು ಬಯಸುವ ಹಾಗೆ ಅದ್ಭುತವಾಗಿ ತೋರಿಸಿದ್ದಾರೆ ಎಂಬುದು ಈಗಾಗಲೇ ಟ್ರೇಲರ್ ಮೂಲಕವೇ ಸಾಬೀತಾಗಿದೆ. ಇನ್ನು ಚಿತ್ರದಲ್ಲಿ ಉಪ್ಪಿ 3 ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದು, ಫಸ್ಟ್ ಟೈಮ್ ಡಿಂಪಲ್ ಕ್ವೀನ್ ರಚಿತಾ ರಾಮ್ ಉಪ್ಪಿ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ.

ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗಿನಲ್ಲಿಯೂ ಐ ಲವ್ ಯು ರಿಲೀಸ್ ಆಗಿದ್ದು, ಸೀಮಾಂದ್ರ, ತೆಲಂಗಾಣ ಸೇರಿದಂತೆ ಬರೋಬ್ಬರಿ 600 ಸ್ಕ್ರೀನ್ ಗಳು ಹಾಗೂ ಕರ್ನಾಟಕದಲ್ಲಿ 400 ಸ್ಕ್ರೀನ್ ಗಳಲ್ಲಿ ಇಂದು ಗ್ರ್ಯಾಂಡ್ ರಿಲೀಸ್ ಆಗಲಿದೆ. ಇದೇ ಹೈಪು ಶೋ ಮುಗಿದ ಮೇಲೂ ಉಳಿಯುವುದೆಂಬ ಭರವಸೆ ಅಭಿಮಾನಿಗಳಲ್ಲಿದೆ. ಅದು ಹುಸಿಯಾಗದಿರಲೆಂದು ಆಶಿಸೋಣ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ರಾಬರ್ಟ್ ಗುಟ್ಟು ರಟ್ಟಾಯ್ತು!

Previous article

ಸದ್ಯದಲ್ಲೇ ರಿಲೀಸ್ ಆಗಲಿದೆ ನಿಗರ್ವ!

Next article

You may also like

Comments

Leave a reply

Your email address will not be published. Required fields are marked *