ಕಳೆದ ವಾರವಷ್ಟೇ ರಿಲೀಸ್ ಆಗಿರೋ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಆರ್ ಚಂದ್ರು ಕಾಂಬಿನೇಷನ್ನಿನ ಐ ಲವ್ ಯು ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಮೂರು ರಾಜ್ಯಗಳಲ್ಲಿ ರಿಲೀಸ್ ಆಗಿರೋದ್ರಿಂದ ಕಾಮನ್ನಾಗಿ ಅಗತ್ಯಕ್ಕಿಂಗ ಹೆಚ್ಚಿನ ನಿರೀಕ್ಷೆ ಇದ್ದೇ ಇರುತ್ತದೆ. ಆ ಎಲ್ಲ ನಿರೀಕ್ಷೆಗಳನ್ನು ಉಳಿಸಿಕೊಂಡು ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಐ ಲವ್ ಯು ಚಿತ್ರವನ್ನು ತಮಿಳಿನಲ್ಲೂ ರಿಮೇಕ್ ಮಾಡೋ ತಯಾರಿ ಸದ್ದಿಲ್ಲದೇ ನಡೆಯುತ್ತಿದೆ.

ಈಗಾಗಲೇ ಐ ಲವ್ ಯು ಸಿನಿಮಾಗೆ ಫ್ಯಾಮಿಲಿ ಪ್ರೇಕ್ಷಕರಿಂದ ಉತ್ತಮ ವಿಮರ್ಶೆ ಸಿಕ್ಕಿದೆ. ತೆಲುಗು ನಾಡಿನಲ್ಲಿ ಅಬ್ಬರದ ವಹಿವಾಟು ನಡೆಸಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಗಣನೀಯ ಸಾಧನೆ ತೋರುತ್ತಿದೆ. ಹೀಗಾಗಿ ತಮಿಳು ನಿರ್ಮಾಪಕರು ರಿಮೇಕ್ ಮಾಡಲು ಮುಂದಾಗಿದ್ದು, ಈಗಾಗಲೇ ಒಂದು ಸುತ್ತಿನ ಮಾತುಕತೆಯೂ ನಡೆದಿದೆ. ಇದರ ನಿಮಿತ್ತ ನಿರ್ದೇಶಕ ಚಂದ್ರು ಚೆನ್ನೈಗೆ ಹಾರಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆ ತಮಿಳು ನಿರ್ಮಾಪಕರು ವಿಜಯ್ ಸೇತುಪತಿ ಹಾಗೂ ಕಾರ್ತಿ ಹೆಸರು ಸೂಚಿಸಿದ್ದಾರೆ. ಜತೆಗೆ ನಿರ್ದೇಶಕ ಜವಾಬ್ದಾರಿಯನ್ನು ತಾವೇ ಹೊರುವಂತೆ ಚಂದ್ರುಗೆ ತಿಳಿಸಿದ್ದಾರೆ. ಮೊದಲ ಹಂತದ ಮಾತುಕತೆಯಲ್ಲಿ ಎಲ್ಲವೂ ಪಾಸಿಟೀವ್ ಆಗಿದ್ದು, ಸದ್ಯದಲ್ಲೇ ಮತ್ತೊಂದು ಸುತ್ತಿನ ಮಾತುಕತೆಗೆ ಕೂರುವ ಸಾಧ್ಯತೆ ಇದೆ. ಇದು ಸಾಧ್ಯವಾದಲ್ಲಿ ತಮಿಳಿನಲ್ಲೂ ಐ ಲವ್ ಯು ಫೀವರ್ ಶುರುವಾಗೋದು ಗ್ಯಾರೆಂಟಿ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಸದ್ಯದಲ್ಲೇ ಶ್ರೀನಿಕಲ್ಯಾಣ!

Previous article

ಮುಂದಿನ ತಿಂಗಳು ಉನರ್ವು ಬಿಡುಗಡೆ!

Next article

You may also like

Comments

Leave a reply

Your email address will not be published. Required fields are marked *