ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದಾದ್ಯಂತ ಐ ಲವ್ ಯು ಸಿನಿಮಾ ಈಗಾಗಲೇ ದಾಖಲೆ ಬರೆದಿದೆ. ತಮಿಳು ಭಾಷೆಯಲ್ಲಿಯೂ ಐ ಲವ್ ಯು ತಯಾರಾಗುವ ಸಾಧ್ಯತೆಯೂ ಇದೆ. ಈ ಮಧ್ಯೆ ಐ ಲವ್ ಯು ಸಿನಿಮಾ ನಿನ್ನೆ ಅಮೆರಿಕಾದಲ್ಲಿಯೂ ಬಿಡುಗಡೆಯಾಗಿದೆ. ಹೌದು.. ಅಮೆರಿಕಾ ಕನ್ನಡಿಗರ ಒತ್ತಾಯದ ಮೇರೆಗೆ 20ಕ್ಕೂ ಅಧಿಕ ಥಿಯೇಟರ್ ಗಳಲ್ಲಿ ಐ ಲವ್ ಯು ತೆರೆಕಂಡಿದೆ.
ಕಮರ್ಷಿಯಲ್, ಸೆಂಟಿಮೆಂಟ್, ರೊಮ್ಯಾಂಟಿಂಗ್ ಅದ್ಬುತವಾದ ಸಂದೇಶದಿಂದ ಕೂಡಿರುವ ಐ ಲವ್ ಯು ಕರ್ನಾಟಕದಲ್ಲಿ ಹವಾ ಎಬ್ಬಿಸಿ ಈಗ ಟ್ರಂಪ್ ನಾಡಿನಲ್ಲಿಯೂ ಕನ್ನಡದ ಕಂಪನ್ನು ಸೂಸಲು ಮುಂದಾಗಿರೋದು ಅಮೆರಿಕಾ ಕನ್ನಡಿಗರ ಸಂತಸಕ್ಕೂ ಕಾರಣವಾಗಿದೆ.
Comments