ಐ ಲವ್ ಯೂ ಒಂದು ರೊಮ್ಯಾಂಟಿಕ್ ಲವ್ ಸ್ಟೋರಿ. ಈಗಾಗಲೇ ಜೂನ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಘೋಷಿಸಿಕೊಂಡಿದೆ. ನವ ಸಂಗೀತ ನಿರ್ದೇಶಕ ಡಾ ಕಿರಣ್ ಸಂಯೋಜಿಸಿರುವ ಹಾಡುಗಳು ಈಗಷ್ಟೇ ಕೇಳುಗರನ್ನ ತಲುಪಿದ್ದು ಸಂಚಲನಕ್ಕೆ ಸಜ್ಜಾದಂತೆ ಕಾಣಿಸುತ್ತಿದೆ. ಚಿತ್ರದಲ್ಲಿ ಎ ಮತ್ತು ಉಪೇಂದ್ರ ಚಿತ್ರದ ಕಿಕ್ ಜೊತೆ ಎಮೋಷನ್ಸ್‍ಗಳನ್ನೂ ಮಿಶ್ರಣ ಮಾಡಿದ್ದಾರಂತೆ ಚಂದ್ರು. ಉಪೇಂದ್ರರ ಜೊತೆ ಇಲ್ಲಿ ನಾಯಕಿಯಾಗಿ ನಟಿಸಿರುವುದು ರಚಿತಾ ರಾಮ್. ಸೋನುಗೌಡ ಕೂಡಾ ಒಂದು ಮುಖ್ಯ ಪಾತ್ರದಲ್ಲಿದ್ದಾರೆ.
https://www.youtube.com/watch?v=f4uTtgC6Ix4
ಪ್ರದೀಪ್ ರಾವತ್, ಶಯಾಜಿ ಶಿಂಧೆ, ರವಿಕಾಳೆ, ರವಿಶಂಕರ್ ಸೇರಿದಂತೆ ಹೆಸರಾಂತ ಪೋಷಕ ನಟರ ದಂಡೇ ಐ ಲವ್ ಯೂ ಸಿನಿಮಾದಲ್ಲಿದೆ. ಬೆಂಗಳೂರು, ಮಂಗಳೂರು, ಹೈದರಾಬಾದ್, ದುಬೈ, ಮಸ್ಕತ್‍ನಲ್ಲಿ ಚಿತ್ರೀಕರಣ ನಡೆದಿದೆ. ಈ ಚಿತ್ರದ ನಿರ್ಮಾಣವೂ ಚಂದ್ರ ಅವರದ್ದೇ ಆದ್ದರಿಂದ ತಮಗೆ ಹೇಗೆ ಬೇಕೋ ಹಾಗೆ ಅದ್ಧೂರಿಯಾಗಿ ಐ ಲವ್ ಯೂ ಸಿನಿಮಾವನ್ನ ಸಿಂಗರಿಸಿ ತಂದಿದ್ದಾರೆ.
ಐ ಲವ್ ಯೂ ಕನ್ನಡ ಮಾತ್ರವಲ್ಲ, ತೆಲುಗಿನಲ್ಲೂ ಬಿಡುಗಡೆಯಾಗಲಿದೆ ಅನ್ನೋದು ಈ ಚಿತ್ರದ ಮತ್ತೊಂದು ವಿಶೇಷ. ಆಂಧ್ರ, ತೆಲಂಗಾಣದಲ್ಲೂ ಉಪೇಂದ್ರರಿಗೆ ಅಭಿಮಾನಿಗಳಿರುವುದರಿಂದ ಐ ಲವ್ ಯೂ ಅಲ್ಲೂ ದೊಡ್ಡ ಮಟ್ಟದ ಓಪನಿಂಗ್ ಪಡೆದುಕೊಳ್ಳುವ ನಿರೀಕ್ಷೆ ಇದೆ. ಆರ್ ಚಂದ್ರು ಅವರಿಗೂ ತೆಲುಗು ಚಿತ್ರರಂಗ ಹೊಸತೇನಲ್ಲ. ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ ಎಂಬ ಚಿತ್ರ ನಿರ್ದೇಶನ ಮಾಡುವ ಮೂಲಕ ಚಂದ್ರು ಅಲ್ಲೂ ಹೆಸರಾಗಿದ್ದರು. ಇದೀಗ ಐ ಲವ್ ಯೂ ಮೂಲಕ ಮತ್ತೊಮ್ಮೆ ತೆಲುಗರನ್ನ ಎದುರುಗೊಳ್ಲುತ್ತಿದ್ದಾರೆ. ಉಪೇಂದ್ರರ ಹಳೆ ಅವತಾರವನ್ನ ನೋಡಿ ಮೆಚ್ಚಿಕೊಂಡಿರುವ ತೆಲುಗು ಪ್ರೇಕ್ಷಕರು ಇದೀಗ ಚಂದ್ರು ವ್ಯಾಖ್ಯಾನದಡಿ ಮೂಡಿ ಬರುವ ಉಪ್ಪಿಯ ಹೊಸ ಅವತಾರವನ್ನ ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನ ಕಾದು ನೋಡಬೇಕು.
Leave a Reply
You must be logged in to post a comment.