ಐ ಲವ್ ಯು ಗೆ ಕಿಚ್ಚನ ಸಾಥ್!

ಈಗಾಗಲೇ ಐ ಲವ್ ಯು ಪಾಠ ಮಾಡಲು ರೆಡಿಯಾಗಿರುವ ಉಪ್ಪಿ ಮತ್ತು ಆರ್ ಚಂದ್ರು ಸಿನಿಮಾ ಬಿಡುಗಡೆಗೆ ತುದಿಗಾಲಿನಲ್ಲಿದ್ದಾರೆ. ಚಿತ್ರದ ಪೋಸ್ಟರ್, ಟ್ರೇಲರ್, ಹಾಡುಗಳು ಬಾರಿ ಕುತೂಹಲವನ್ನು ಮೂಡಿಸಿದ್ದು, ಲವ್ ಗುರುಗಳು ಇನ್ಯಾವ ಮೋಡಿ ಮಾಡಬಹುದೆಂಬ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು. ಸಿನಿಮಾ ರಿಲೀಸ್ ಗೆ ಕೆಲವೇ ದಿನಗಳು ಇರುವಾಗಲೇ ಚಿತ್ರತಂಡ ಮತ್ತೊಂದು ಟ್ರೇಲರ್ ಬಿಡುಗಡೆ ಮಾಡಲು ರೆಡಿಯಾಗುತ್ತಿದೆ. ಹೌದು ಐ ಲವ್ ಯು ಸಿನಿಮಾದ ಎರಡನೇ ಟ್ರೇಲರ್ ರಿಲೀಸ್ ಆಗಲಿದ್ದು, ಈ ಟ್ರೇಲರ್ ನ್ನು ಕಿಚ್ಚ ಸುದೀಪ್ ರಿಲೀಸ್ ಮಾಡಲಿರುವುದು ವಿಶೇಷವಾಗಿದೆ.

ಇನ್ನು ಚಿತ್ರ ಕನ್ನಡ ಸೇರಿದಂತೆ ತೆಲುಗು ಭಾಷೆಯಲ್ಲೂ ಏಕಕಾಲದಲ್ಲಿ ತೆರೆಗೆ ಬರ್ತಾಯಿದ್ದು , ಉಪೇಂದ್ರ ಕಾಲೇಜ್ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಉಪ್ಪಿಗೆ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾರಾಮ್ ಕಮಾಲ್ ಮಾಡಲಿದ್ದಾರೆ. ಹಲವು ವರ್ಷಗಳಬಳಿಕ ಉಪ್ಪಿ ಸಿನಿಮಾ ಬರ್ತಾ ಇರೋದು ಅಭಿಮಾನಿಗಳಲ್ಲಿ ಸಂತಸ ತಂದಿದೆ. ಚಿತ್ರ ಮುಂದಿನ ತಿಂಗಳು ತೆರೆಗೆ ಅಪ್ಪಳಿಸಲಿದ್ದು. ಉಪ್ಪಿಯ ಐಲವ್ ಯೂ ಕಥೆ ಹೇಗಿರಲಿದೆ ಅನ್ನೋದು ಸದ್ಯದ ಕೌತುಕ.


Posted

in

by

Tags:

Comments

Leave a Reply