ಸದ್ಯ ಎಲ್ಲೆಲ್ಲೂ ಐ ಲವ್ ಯು ಸಿನಿಮಾ ಕುರಿತಾಗಿಯೇ ಮಾತು ಕತೆ. ನಿನ್ನೆಯಷ್ಟೇ ಕಿಚ್ಚ ಸುದೀಪ್ ಚಿತ್ರದ ಮತ್ತೊಂದು ಟ್ರೇಲರ್ ರಿಲೀಸ್ ಮಾಡಿದ್ದು, ಅದೂ ಯೂಟ್ಯೂಬ್ ನಲ್ಲಿ ಈಗಾಗಲೇ 5 ಲಕ್ಷ ಗಡಿಯನ್ನೂ ಮೀರಿದೆ. ಲವ್ ಗುರುಗಳಾದ ಉಪೇಂದ್ರ ಮತ್ತು ಆರ್. ಚಂದ್ರು ಅವರ ಕಾಂಬಿನೇಷನ್ನಿನಲ್ಲಿ ಮೂಡಿಬರುತ್ತಿರುವ ಸಿನಿಮಾ ಐ ಲವ್ ಯು. ಈ ಮೊದಲು ಆರ್. ಚಂದ್ರು ತಾಜ್ ಮಹಲ್, ಚಾರ್ ಮಿನಾರ್, ಮಳೆ, ಪ್ರೇಮ್ ಕಹಾನಿ ಇತ್ಯಾದಿ ಸಿನಿಮಾಗಳನ್ನು ನಿರ್ದೇಶಿಸಿ ತಾನೊಬ್ಬ ಪ್ರೇಮ ನಿರ್ದೇಶಕನೆಂಬುದನ್ನು ಫ್ರೂ ಮಾಡಿದ್ದಾರೆ. ಸದ್ಯ ಪ್ರೀತಿಗೆ ಬಹುದೊಡ್ಡ ಅರ್ಥವನ್ನೇ ನೀಡಿದ್ದ ಉಪೇಂದ್ರ ಅವರೊಂದಿಗೆ ಐ ಲವ್ ಯು ಸಿನಿಮಾವನ್ನು ಮಾಡುತ್ತಿದ್ದಾರೆ. ಐ ಲವ್ ಯು ಸಿನಿಮಾ ಪಕ್ಕಾ ಲವ್ ಸ್ಟೋರಿ ಬೇಸ್ಡ್ ಸಿನಿಮಾವಾಗಿದ್ದು, ಪ್ರೀತಿ ಮಾಡುವ ಪ್ರೇಮಿಗಳಿಗೆ ಪಾಠ ಮಾಡುತ್ತಾರೋ ಅಥವಾ ತಿದ್ದಬಯಸುತ್ತಾರೋ ಎನ್ನುವುದನ್ನು ಸಿನಿಮಾ ನೋಡಿಯೋ ತಿಳಿದುಕೊಳ್ಳಬೇಕಿದೆ.
ಇನ್ನು ಪ್ರತಿಯೊಂದು ಚಿತ್ರಕ್ಕೂ ಪ್ರಮುಖ ಆಕರ್ಷಣೆಯಾಗುವ ಕ್ಲೈಮ್ಯಾಕ್ಸ್ ಐ ಲವ್ ಯು ಸಿನಿಮಾದಲ್ಲಿಯೂ ಪ್ರಮುಖವಾಗಿರಲಿದೆ. ಆರ್ ಚಂದ್ರು ಹುಟ್ಟೂರಾದ ಚಿಕ್ಕಬಳ್ಳಾಪುರದಲ್ಲಿರುವ ನಂದಿಗ್ರಾಮವನ್ನು ಕ್ಲೈಮ್ಯಾಕ್ಸ್ ಗೆ ಬಳಸಿಕೊಳ್ಳಲಾಗಿದೆಯಂತೆ. ಈ ಹಿಂದೆ ಉಪೇಂದ್ರ ಅವರೇ ನಟಿಸಿ ನಿರ್ದೇಶಿಸಿದ್ದ ಉಪೇಂದ್ರ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯವನ್ನೂ ಇದೇ ನಂದಿಬೆಟ್ಟದಲ್ಲಿ ರೋಚಕವಾಗಿ ಶೂಟ್ ಮಾಡಿದ್ದರು. ಅಲ್ಲದೇ ಅವರೇ ಚಿತ್ರಿಸಿದ್ದರು. ಅದು ಸಿನಿಮಾದ ಪ್ರಮುಖ ಆಕರ್ಷಣೆಯೂ ಆಗಿತ್ತು. ಅದೇ ಐಡಿಯಾವನ್ನು ಐ ಲವ್ ಯು ನಲ್ಲಿಯೂ ಮಾಡಲಾಗಿದ್ದು, ನಿರ್ದೇಶಕ ಚಂದ್ರು ಅವರೇ ಕ್ಲೈಮ್ಯಾಕ್ಸ್ ಕಂಪೋಸ್ ಮಾಡಿದ್ದಾರೆ.
ಬ್ರಹ್ಮ ಚಿತ್ರದ ನಂತರ ಮತ್ತೆ ಉಪೇಂದ್ರ ಮತ್ತು ಚಂದ್ರು ಜೋಡಿ ಒಂದಾಗಿದ್ದು, ಹಾಗಾಗಿ ಸಹಜವಾಗಿಯೇ ಚಿತ್ರದ ಬಗ್ಗೆ ಕುತೂಹಲ ಮೂಡಿಸಿದೆ. ತೆಲುಗು ಮತ್ತು ಕನ್ನಡದಲ್ಲಿ ಈ ಸಿನಿಮಾ ಏಕಕಾಲಕ್ಕೆ ರಿಲೀಸ್ ಆಗಲಿದ್ದು, ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಿದ್ದಾರೆ. ತೆಲುಗು ಮತ್ತು ಕನ್ನಡ ಭಾಷೆಯ ಹೊರತು ಪಡಿಸಿ, ಬೇರೆ ಭಾಷೆಯಲ್ಲೂ ಈ ಚಿತ್ರವನ್ನು ಡಬ್ಬಿಂಗ್ ಮಾಡಿ ರಿಲೀಸ್ ಮಾಡುವ ಪ್ಲ್ಯಾನ್ ಮಾಡಲಾಗುತ್ತಿದೆಯಂತೆ. ಈಗಾಗಲೇ ರಿಲೀಸ್ ಆಗಿರುವ ಸಿನಿಮಾದ ಟ್ರೇಲರ್ ಮತ್ತು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರೋದು ತಂಡದ ಸಂತಸಕ್ಕೂ ಕಾರಣವಾಗಿದೆ. ಜೂ.14ಕ್ಕೆ ಈ ಸಿನಿಮಾ ದೇಶದಾದ್ಯಂತ ರಿಲೀಸ್ ಆಗುತ್ತಿದ್ದು, ಬಿಡುಗಡೆಯ ಒಂದು ವಾರಕ್ಕೂ ಮುನ್ನವೇ ಆನ್ಲೈನ್ನಲ್ಲಿ ಟಿಕೆಟ್ಗಳು ಲಭ್ಯವಾಗಲಿವೆ.
No Comment! Be the first one.