ಐ ಲವ್ ಯು ಹವಾ ದಿನೇ ದಿನೇ ಜೋರಾಗುತ್ತಲೇ ಇದೆ. ಲವ್ ಗುರುಗಳ ಕಾಂಬಿನೇಶನ್ನಿನ ಸಿನಿಮಾವನ್ನು ನೋಡಲು ಒಂದೆಡೆ ಉಪ್ಪಿ ಅಭಿಮಾನಿಗಳು ಮತ್ತೊಂದೆಡೆ ಆರ್ ಚಂದ್ರು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಎರಡು ಟ್ರೇಲರ್, ಆಡಿಯೋ, ಲಿರಿಕಲ್ ವಿಡಿಯೋಗಳನ್ನು ಬಿಡುಗಡೆ ಮಾಡಿ ಸಾಕಷ್ಟು ಕ್ಯೂರಿಯಾಸಿಟಿ ಕಮ್ ಡಿಮ್ಯಾಂಡ್ ಕ್ರಿಯೇಟ್ ಮಾಡಿದೆ. ಸದ್ಯ ಐ ಲವ್ ಯು ಚಿತ್ರದ `ಒಂದಾನೊಂದು ಕಾಲದಿಂದ’ ಮೊದಲ ವಿಡಿಯೋ ಸಾಂಗ್ ಕೆಲ ಗಂಟೆಗಳ ಹಿಂದೆಯಷ್ಟೇ ರಿಲೀಸ್ ಆಗಿದ್ದು, ಯೂಟ್ಯೂಬ್ ಹಿಟ್ಸ್ ಲಕ್ಷದತ್ತ ಮುನ್ನುಗ್ಗುತ್ತಿದೆ. ಜತೆಗೆ ಭರಪೂರ ಮೆಚ್ಚುಗೆಯನ್ನು ಪಡೆಯುತ್ತಿದೆ.
ರಿಲೀಸ್ ಆಗಿರುವ ಸಾಂಗಿನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಸಕ್ಕತ್ತಾಗಿಯೇ ಸ್ಟೆಪ್ ಹಾಕಿದ್ದಾರೆ. ಪಡ್ಡೆ ಹೈಕಳು ಹುಚ್ಚೆದ್ದು ಕುಣಿಯುವಂತೆಯೂ ಮಾಡಿದ್ದಾರೆ. ಈ ಯೂಥ್ ಪುಲ್ ಸಾಂಗನ್ನು ಧನಂಜಯ್ ಬರೆದಿದ್ದು, ಸುಚಿತ್ ಸುರೇಶ್ ಧನಿಯಾಗಿದ್ದಾರೆ. ಸದ್ಯ ಕ್ಲಾಸ್ ಅಂಡ್ ಮಾಸ್ ಅಭಿಮಾನಿಗಳು ರಿಲೀಸ್ ಗಾಗಿ ಕಾಯುತ್ತಿರುವ ಸಿನಿಮಾಗಳಲ್ಲಿ ಐ ಲವ್ ಯು ಪ್ರಮುಖವಾದದ್ದು. ಚಿತ್ರದಲ್ಲಿ ಉಪೇಂದ್ರ, ರಚಿತಾರಾಮ್, ಸೋನುಗೌಡ ಪ್ರಮುಖ ಪಾತ್ರದಲ್ಲಿದ್ದಾರೆ. ಉಳಿದಂತೆ ದೊಡ್ಡ ತಾರಾಂಗಣವೇ ಐ ಲವ್ ಯು ನಲ್ಲಿದೆ. ಇದೇ ತಿಂಗಳ 14ನೇ ತಾರೀಖು ಸಿನಿಮಾ ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್ ಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ್, ತೆಲಂಗಾಣ ರಾಜ್ಯಗಳಲ್ಲಿ ರಿಲೀಸ್ ಆಗಲಿದೆ. ಆರ್ ಚಂದ್ರ ಐ ಲವ್ ಯು ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುವ ಜತೆಗೆ ನಿರ್ಮಾಣದ ಹೊಣೆಯನ್ನು ಹೊತ್ತಿದ್ದಾರೆ.
No Comment! Be the first one.