ಈ ಹಿಂದೆ ಆರ್ ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್ನಿನ ಬ್ರಹ್ಮ ಸಿನಿಮಾ ರಿಲೀಸ್ ಆಗಿತ್ತು. ಆದರೆ ಅಷ್ಟೇನೂ ಆ ಸಿನಿಮಾ ಯಶಸ್ಸನ್ನು ಕಂಡಿರಲಿಲ್ಲ. ಇದೀಗ ಇಂದಿನ ಪಡ್ಡೆ ಹೈಕಳು ಇಷ್ಟಪಡುವ ಸಬ್ಜೆಕ್ಟ್ ತೆಗೆದುಕೊಂಡು ಆರ್ ಚಂದ್ರು ಮತ್ತು ಉಪೇಂದ್ರ ಜೋಡಿ ಮತ್ತೆ ಹೊಸದೊಂದು ಸಿನಿಮಾವನ್ನು ಮಾಡಿ ಮುಗಿಸಿದ್ದು, ಆ ಚಿತ್ರಕ್ಕೆ ಐಲವ್ ಯು ಎಂದು ಹೆಸರಿಟ್ಟಿದ್ದಾರೆ. ಮೊದಲಿನಿಂದಲೂ ಲವ್ ಗುರುಗಳಾಗಿರುವ ಉಪೇಂದ್ರ ಮತ್ತು ಆರ್ ಚಂದ್ರು ತಮ್ಮ ಸಿನಿಮಾಗಳಲ್ಲಿ ಡಿಫರೆಂಟ್ ಡಿಫರೆಂಟ್ ಟೈಪ್ ನಲ್ಲಿ ಪ್ರೀತಿಯನ್ನು ತೋರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಈಗ ಆ ಜೋಡಿ ಒಟ್ಟಿಗೆ ಐಲವ್ ಯು ಎನ್ನಲು ರೆಡಿಯಾಗಿರುವುದು ನೋಡುಗರಲ್ಲಿ ಸಂತಸವನ್ನು ಮೂಡಿಸಿದೆ. ಈಗಾಗಲೇ ಐ ಲವ್ ಯು ಸಿನಿಮಾದ ಟ್ರೇಲರ್ ಹಾಗೂ ಹಾಡುಗಳು ರಿಲೀಸ್ ಆಗಿದ್ದು, ಸಿನಿಮಾ ರಿಲೀಸ್ ಆಗುವುದೊಂದೇ ಬಾಕಿ ಇದೆ. ಸಾಕಷ್ಟು ಮಟ್ಟಿಗೆ ಪ್ರೇಕರಿಗೆ ಕ್ಯೂರಿಯಾಸಿಟಿ ಹುಟ್ಟಿಸಿರುವ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಐ ಲವ್ ಯು ಚಿತ್ರ ತೆರೆಗೆ ಬರೋಕೆ ಸಜ್ಜಾಗುತ್ತಿದೆ.
ಐ ಲವ್ ಯು ಸಿನಿಮಾ ಕಳೆದ ವ್ಯಾಲೆಂಟೈನ್ಸ್ ಡೇಗೆ ರಿಲೀಸ್ ಆಗಬೇಕಿತ್ತು. ಆದರೆ ರಿಯಲ್ ಸ್ಟಾರ್ ಪ್ರಜಾಕೀಯದ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಕಾರಣ ಸಿನಿಮಾ ರಿಲೀಸ್ ದಿನಾಂಕ ಮುಂದೆ ಹೋಗುತ್ತಲೇ ಇತ್ತು. ಇದೀಗ ಚಿತ್ರ ರಿಲೀಸ್ಗೆ ಕೆಲವೇ ದಿನ ಬಾಕಿ ಇರುವಂತೆ ಚಿತ್ರತಂಡ ಹೊಸ ಪೊಸ್ಟರ್ಗಳನ್ನ ಬಿಟ್ಟಿದೆ. ಈ ಮೂಲಕ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಐ ಲವ್ ಯು ಸಿನಿಮಾದಲ್ಲಿ ಉಪೇಂದ್ರ ಅವರಿಗೆ ರಚಿತಾ ರಾಮ್ ಹಾಗೂ ಸೋನು ಗೌಡ ಜೊತೆಯಾಗಿದ್ದಾರೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಆಗಲಿದೆ.
No Comment! Be the first one.