ಉದ್ಯಮಿಗಳು, ರಾಜಕಾರಣಿಗಳ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ರೇಡು ಬೀಳೋದು ಮಾಮೂಲು. ಆದರೆ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಡೀ ಕನ್ನಡ ಚಿತ್ರರಂಗದ ಮೇಲೆ ಐಟಿ ಅಧಿಕಾರಿಗಳ ಕಣ್ಣು ಬಿದ್ದಿದೆ. ಖ್ಯಾತ ನಿರ್ಮಾಪಕರು ಮತ್ತು ನಟರಿಗೆಲ್ಲ ಮುಂಜಾನೆಯ ಸುಖ ನಿದ್ರೆಯೂ ಹಾರಿ ಹೋಗುವಂತೆ ಐಟಿ ರೇಡಿನ ಶಾಕ್ ತಗುಲಿಕೊಂಡಿದೆ!
ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಟರಾದ ಶಿವರಾಜ್ ಕುಮಾರ್, ಕಿಚ್ಚಾ ಸುದೀಪ್, ರಾಕಿಂಗ್ ಸ್ಟಾರ್ ಯಶ್ ಮುಂತಾದವರ ಮನೆ ಮೇಲೆ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ರೇಡ್ ನಡೆಸಿದ್ದಾರೆ. ಯಾವ ಮುಲಾಜೂ ಇಲ್ಲದೆ ಚಿನ್ನಾಭರಣ, ನಗದು ಮತ್ತು ಆಸ್ತಿ ಪಾಸ್ತಿಗಳ ದಾಖಲೆ ಪರಿಶೀಲಿಸಿದ್ದಾರೆ. ಸಾಮಾನ್ಯವಾಗಿ ರಾಜಕಾರಣಿಗಳು ಮತ್ತು ಉದ್ಯಮಿಗಳ ಆಸ್ತಿಪಾಸ್ತಿ ಇಂಥಾ ದಾಳಿಗಳಿಂದ ಜಾಹೀರಾಗುತ್ತಿತ್ತು. ಆದರೀಗ ಸ್ಟಾಠರ್ ನಟರು ಮತ್ತು ನಿರ್ಮಾಪಕರ ಆಸ್ತಿ ವಿವರಗಳೂ ಕೂಡಾ ಐಟಿ ದಾಳಿಯ ದೆಸೆಯಿಂದಲೇ ಹೊರ ಬಿದ್ದಿದೆ.
ಇಂದು ಬೆಳಗ್ಗೆ ಏಳು ಘಂಟೆ ಹೊತ್ತಿಗೆಲ್ಲ ಐಟಿ ಅಧಿಕಾರಿಗಳ ತಂಡ ಸ್ಯಾಂಡಲ್ ವುಡ್ ಮೇಲೆ ವ್ಯವಸ್ಥಿತವಾಗಿಯೇ ರೇಡು ನಡೆಸಿತ್ತು. ಅದೇ ಸಮಯಕ್ಕೆ ಸರಿಯಾಗಿ ಕಿಚ್ಚಾ ಸುದೀಪ್ ಅವರ ಜೆಪಿನಗರದ ಪುಟ್ಟೇನಹಳ್ಳಿಯಲ್ಲಿನ ಮನೆ ಮುಂದೆ ಎಲ್ಲೋ ಬೋರ್ಡ್ ಕಾರಿನಲ್ಲಿ ಐಟಿ ಅಧಿಕಾರಿಗಳ ತಂಡ ಬಂದಿಳಿದಿತ್ತು. ಹಾಗೆ ಬಂದ ಅಧಿಕಾರಿಗಳು ಘಂಟೆಗಟ್ಟಲೆ ಪರಿಶೀಲನೆ ನಡೆಸಿದ್ದರು.
ಇದೇ ಸಮಯದಲ್ಲಿ ಎಂಟು ಮಂದಿ ಐಟಿ ಅಧಿಕಾರಿಗಳ ತಂಡ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮನೆಯಂಗಳಕ್ಕೆ ಬಂದಿಳಿದಿದ್ದರು. ಸಾಧ್ಯಂತವಾಗಿ ತನಿಖೆ ನಡೆಸಇರೋ ಅಧಿಕಾರಿಗಳು ಮನೆಯಲ್ಲಿದ್ದ ಕೇಜಿಗಟ್ಟಲೆ ಚಿನ್ನ, ಬೆಳ್ಳಿ ಸಾಮಾಗ್ರಿಗಳನ್ನು ಜಫ್ತಿ ಮಾಡಿದ್ದಾರೆ. ಇದಲ್ಲದೇ ನಗರದ ಮೂಲೆ ಮೂಲೆಯಲ್ಲಿರೋ ವೆಂಕಟೇಶ್ ಅವರ ಆಸ್ತಿಪಾಸ್ತಿ ದಾಖಲೆಗಳನ್ನೂ ಪರಿಶೀಲಿಸಿದ್ದಾರೆ. ಅವರ ಒಡೆತನದಲ್ಲಿರೋ ಮಾಲ್ಗಳು, ವಿದ್ಯಾ ಸಂಸ್ಥೆಗಳಿಗೂ ಐಟಿ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಶಿವರಾಜ್ಕುಮಾರ್ ಮತ್ತು ಪುನೀತ್ ಅವರಿಗೂ ಐಟಿ ಶಾಕ್ ಸಿಕ್ಕಿದೆ. ಕೆಜಿಎಫ್ ಚಿತ್ರ ದೇಶಾಧ್ಯಂತ ಹಿಟ್ ಆದ ಖುಷಿಯಲ್ಲಿರುವ ರಾಕಿಂಗ್ ಸ್ಟಾರ್ ಯಶ್ ಮನೆ ಮೇಲೂ ಬೆಳಬೆಳಗ್ಗೆಯೇ ದಾಳಿ ನಡೆದಿದೆ. ಗಂಟೆಗಳ ಕಾಲ ವ್ಯಾಪಕವಾಗಿ ಪರಿಶೀಲನೆಯೂ ನಡೆದಿದೆ. ಒಟ್ಟಾರೆಯಾಗಿ ಸ್ಯಾಂಡಲ್ವುಡ್ನ ಎಲ್ಲ ನಟ ನಟಿಯರು, ನಿರ್ಮಾಪಕರಿಗೂ ಕೂಡಾ ಈಗ ಯಾವ ಮುಂಜಾನೆ ತಮ್ಮ ಮನೆ ಬಾಗಿಲಿಗೂ ಐಟಿ ಅಧಿಕಾರಿಗಳು ಬಂದು ನಿಲ್ಲುತ್ತಾರೋ ಎಂಬ ಕಳವಳ ಶುರುವಾಗಿದೆ.
ಒಟಾರೆಯಾಗಿ ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ಮಾಪಕ ಸಿ ಆರ್ ಮನೋಹರ್ ಸೇರಿದಂತೆ ಅನೇಕರಿಗೆ ಐಟಿ ಶಾಕ್ ಸಿಕ್ಕಿದೆ. ಹಾಗಾದರೆ ಈ ಬೆಳವಣಿಗೆಗೆ ಕಾರಣವೇನೆಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಹಾಗಂತ ಐಟಿ ಅಧಿಕಾರಿಗಳೇನೂ ಏಕಾಏಕಿ ಈ ದಾಳಿ ನಡೆಸಿಲ್ಲ. ಈ ಬಗ್ಗೆ ಅಧಿಕಾರಿಗಳ ಟೀಮು ಎರಡು ವಾರಗಳಿಂದ ಸಿದ್ಧಗೊಂಡಿದೆ. ಹೀಗೆ ತಯಾರಾಗಿದ್ದ ಇನ್ನೂರು ಮಂದಿ ಅಧಿಕಾರಿಗಳು ಸ್ಯಾಂಡಲ್ವುಡ್ ಭಾಗವಾದ ಐವತ್ತು ಸ್ಥಳಗಳಿಗೆ ರೇಡು ನಡೆಸಿದೆ. ಇದರ ಹಿಂದಿರೋ ಅಸಲೀ ಉದ್ದೇಶಗಳೇನೆಂಬುದು ಇಷ್ಟರಲ್ಲಿಯೇ ಹೊರಬೀಳಲಿದೆ.
#
No Comment! Be the first one.