ಭಾರತವನ್ನು ಭಾರತೀಯರು ಎಷ್ಟರಮಟ್ಟಿಗೆ ಪ್ರೀತಿ ಮಾಡುತ್ತಾರೋ ಅದೇ ರೀತಿ ವಿದೇಶಿಯರು ಸಹ ಭಾರತವನ್ನು ಇಷ್ಟಪಡುತ್ತಾರೆ. ಭಾರತದ ಮೇಲೆ ಅಪಾರ ಅಭಿಮಾನ, ಪ್ರೀತಿ, ಮಮತೆಯನ್ನು ಇಟ್ಟುಕೊಂಡಿದ್ದಾರೆ. ಅದಕ್ಕೊಂದು ಉದಾಹರಣೆ ಎಂಬಂತೆ ಆಸ್ಟ್ರೇಲಿಯಾದ ನಟ ಕ್ರಿಸ್ಟೋಫರ್ ಹೆಮ್ಸ್ ವರ್ತ್ ತನ್ನ ಮಗಳಿಗೆ ಇಂಡಿಯಾ ರೋಸ್ ಎಂದು ಹೆಸರಿಟ್ಟಿದ್ದು, ಅದಕ್ಕೆ ಕಾರಣವನ್ನು ರಿವೀಲ್ ಮಾಡಿದ್ದಾರೆ.

ನೆಟ್​ಫ್ಲಿಕ್ಸ್​ ಪ್ರಾಜೆಕ್ಟ್​ನ ‘ಧಾಕಾ’ ಚಿತ್ರದ ಶೂಟಿಂಗ್​ಗಾಗಿ ಕಳೆದ ವರ್ಷ ಭಾರತಕ್ಕೆ ಭೇಟಿ ನೀಡಿದ್ದ ಹೆಮ್ಸ್​ವರ್ತ್​, ಗುಜರಾತ್​ ಅಹಮದಬಾದ್​ ಹಾಗೂ ಮುಂಬೈನಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರಂತೆ. ಆ ಸಮಯದಲ್ಲಿ ಹಮ್ಸ್ ವರ್ತ್ ಗೆ ಶೂಟಿಂಗ್ ನಲ್ಲಿ ಭಯವಾದರೂ ರೋಮಾಂಚನಕಾರಿ ಅನುಭವವಾಗಿತ್ತಂತೆ. ಅಲ್ಲದೇ ಶೂಟಿಂಗ್ ಸಮಯದಲ್ಲಿ ನಿರ್ದೇಶಕರು ಪ್ರತಿಬಾರಿ ಕಟ್ ಹೇಳಿದಾಗಲೂ ನೆರೆದಿದ್ದ ಮಂದಿ ಚಿಯರ್ ಅಪ್ ಮಾಡುತ್ತಿದ್ದರಂತೆ. ಅಲ್ಲದೇ ಸ್ಟೇಡಿಯಂ ನಲ್ಲಿ ಎಲ್ಲರೂ ಹೆಮ್ಸ್ ವರ್ತ್ ರನ್ನು ರಾಕ್ ಸ್ಟಾರ್ ನಂತೆ ಪರಿಗಣಿಸಿದ್ದರಂತೆ. ಭಾರತವೆಂದರೆ ಬಲು ಇಷ್ಟ ಪಡುವ ಹೆಮ್ಸ್ ವರ್ತ್ ತನ್ನ ಮಗಳಿಗೆ ‘ಇಂಡಿಯಾ ರೋಸ್​’ ಎಂದು ಹೆಸರಿಟ್ಟಿದ್ದಾರೆ. ಅಲ್ಲದೇ ಭಾರತದ ಸಿನಿಮಾಗಳಲ್ಲಿ ನಟಿಸುವ ಆಸೆಯನ್ನು ತೋಡಿಕೊಂಡಿದ್ದಾರೆ.

CG ARUN

ಮತ್ತೊಮ್ಮೆ ಒಂದಾಗಲಿದ್ದಾರೆ ಸಲ್ಲು ಮತ್ತು ಕತ್ರಿನಾ!

Previous article

ನಾಕುಮುಖ ಚಿತ್ರದ ಹಾಡೊಂದನ್ನು ರಿಲೀಸ್ ಮಾಡಿದ ಕರ್ನಾಟಕ ಸಿಂಗಂ!

Next article

You may also like

Comments

Leave a reply

Your email address will not be published. Required fields are marked *