ಕಮಲ್ ಹಾಸನ್ ರವರು ಈ ಹಿಂದೆ ವಿಶ್ವರೂಪ 2ನಲ್ಲಿ ನಟಿಸಿದ ಮೇಲೆ ಚುನಾವಣೆಯ ಬ್ಯುಸಿಯಲ್ಲಿ ಸಿನಿಮಾ ಮಾಡುವ ಕಡೆ ಹೆಚ್ಚು ಗಮನವನ್ನೇ ಹರಿಸಲಿಲ್ಲ. ಇತ್ತೀಚಿಗಷ್ಟೇ ಬಿಗ್ ಬಾಸ್ ಸೀಸನ್ 3 ನ ಪ್ರೊಮೋ ಶೂಟ್ ಗೆ ಫೋಸ್ ನೀಡಿದ್ದರು. ಅವರ ಬಹು ನಿರೀಕ್ಷಿತ ಸಿನಿಮಾ ಶಂಕರ್ ನಿರ್ದೆಶನದ ಇಂಡಿಯನ್ 2 ಸಿನಿಮಾ ಈ ಹಿಂದೆ ಬಂಡವಾಳದ ಕೊರತೆಯಿಂದ ನಿಂತು ಹೋಗಿದೆ ಎಂಬ ಸುದ್ದಿಯೂ ಹರಡಿಕೊಂಡಿತ್ತು.
ಸದ್ಯದ ಸುದ್ದಿ ಏನಂದ್ರೆ ಶಂಕರ್ ಅವರು ಇಂಡಿಯನ್ 2 ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದ ಲೈಕಾ ಪ್ರೊಡಕ್ಷನ್ ನ ಮನವೊಲಿಸಿ ಮತ್ತೆ ಸಿನಿಮಾ ಪುನಾರಾಂಭಗೊಳ್ಳುವಂತೆ ಮಾಡಿದ್ದಾರಂತೆ. ಜೂನ್ ಅಂತ್ಯದ ವೇಳೆಗೆ ಇಂಡಿಯನ್ 2ನ ಚಿತ್ರೀಕರಣ ಪ್ರಾರಂಭವಾಗಲಿದೆ. ಅಲ್ಲದೇ 2021ರ ಸಂಕ್ರಾಂತಿಗೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯೂ ಇದೆ. ಕಮಲ್ ಹಾಸನ್ ಗೆ ಜೋಡಿಯಾಗಿ ಕಾಜಲ್ ಅಗರ್ ವಾಲ್ ನಟಿಸುತ್ತಿದ್ದು, ಡೆಲ್ಲಿ ಗಣೇಶ್ ಸಹ ಸಿನಿಮಾದ ಪ್ರಮುಖ ಪಾತ್ರದಲ್ಲಿದ್ದಾರೆ.
No Comment! Be the first one.